ಗದಗ: ಕೈನಲ್ಲೇನಾದ್ರೂ ಇದ್ರೆ ಕೋತಿಗಳೇನಾದ್ರೂ ನೋಡಿದ್ರೆ ಅವುಗಳ ಮಂಗನಾಟಕ್ಕೆ ಜನ ಭಯಪಟ್ಟು ದೂರ ಓಡೋಗ್ತಾರೆ. ಅಂಥದ್ರಲ್ಲಿ ಆಗ ತಾನೇ ಹಿಟ್ಟಿನ ಮಗುವಿನ ಅಕ್ಕಪಕ್ಕದಲ್ಲೇ ಮಂಗಗಳು ಆಟ ಆಡೋದಕ್ಕೆ ಶುರು ಮಾಡಿದ್ರೆ ಹೇಗಾಗಬೇಡ.
ಹೌದು, ಇಂಥ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ನಗರದಲ್ಲಿ ಮಂಗಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಆ ಮಂಗಗಳು ಆಸ್ಪತ್ರೆಯ ಒಳಕ್ಕೂ ನುಗ್ಗಿ ತೊಂದರೆ ಕೊಡೋದಕ್ಕೆ ಶುರು ಮಾಡಿವೆ.
ಜಿಮ್ಸ್ ಸಂಸ್ಥೆಯ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕೋತಿಯೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ. ಬಾಣಂತಿ ಹಾಗೂ ಹಸುಗೂಸು ಇದ್ದ ಕೊಠಡಿಗೆ ಕೋತಿಗಳು ನುಗ್ಗಿ ಒಂದು ಕ್ಷಣ ಭಯದ ವಾತಾವರಣ ಸೃಷ್ಟಿಸಿವೆ.
ಒಂದಷ್ಟು ದಿನಗಳಿಂದ ಕೋತಿಗಳು ಆಸ್ಪತ್ರೆಯ ಆವರಣದೊಳಗಡೆಯೇ ಅಡ್ಡಾಡುತ್ತಿವೆ. ಇಂದು ಆಸ್ಪತ್ರೆಯ ಒಳಗೆ ನುಗ್ಗಿವೆ. ಇಷ್ಟೆಲ್ಲಾ ಆದ್ರೂ ಕೂಡ ಆಸ್ಪತ್ರೆಯ ಆಡಳಿತ ಮಂಡಳಿ ಮಾತ್ರ ತಲೆಕೆಡಿಸಿಕೊಂಡಿಲ್ಲ. ಬೆಡ್ ಗಳ ಮೇಲೆಲ್ಲಾ ಓಡಾಡಿ, ರೋಗಿಗಳ ಹಾರ್ಟ್ ನಲ್ಲಿ ಭಯ ಹುಟ್ಟಿಸಿವೆ.