
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸಚಿವ ಸುನೀಲ್ ಕುಮಾರ್ ಹಾಗೂ ಬಿಜೆಪಿ ಮೆನ್ಶನ್ ಮಾಡಿ ಟ್ವೀಟ್ ಮಾಡಿದ್ದಾರೆ.

“ಶ್ರೀಮಂತರ ಮಕ್ಕಳಿಗೆ ಸರ್ಕಾರಿ ಉದ್ಯೋಗ, ಬಡವರ ಮಕ್ಕಳಿಗೆ ತ್ರಿಶೂಲ ಧೀಕ್ಷೆ”. ಧರ್ಮದ ಹೆಸರಲ್ಲಿ ಹಣ, ಚುನಾವಣೆ ಗೆಲ್ಲಲು ಬೇಕಾದ ಮತ ಎರಡೂ ಬಂದಂತಾಯಿತು ಅಲ್ಲವೇ ಸುನೀಲ್ ಅವರೇ? ಬಿಜೆಪಿ ಅವರ ಭ್ರಷ್ಟಾಚಾರದ ಸರಣಿಗೆ ಕೊನೆಯೆಂದು?.
ಪಿಎಸ್‌ಐ ಹಗರಣದ ತನಿಖೆಯೇ ಮುಗಿದಿಲ್ಲ, ಅಷ್ಟರಲ್ಲೇ ಕೆಪಿಟಿಸಿಎಲ್ ನೇಮಕಾತಿಯಲ್ಲಿ ಅಕ್ರಮ ನಡೆದು, ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿರುವುದು ಬೆಳಕಿಗೆ ಬಂದಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಧಾರಾವಾಹಿಯ ಕಂತುಗಳಂತೆ ನಿತ್ಯ ಒಂದೊಂದಾಗಿ ಹೊರಬರುತ್ತಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
GIPHY App Key not set. Please check settings