ಶ್ರೀ ರಾಯರಿಗೆ ಪ್ರಹ್ಲಾದ, ವ್ಯಾಸರಾಜ, ರಾಘವೇಂದ್ರರೆಂಬ ಮೂರು ಅವತಾರಗಳೆಂದು ಜ್ಞಾನಿಗಳು ಹಾಡಿ ಹೊಗಳಿದ್ದಾರೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರರು ಕ್ರಿ.ಶ. ೧೬೭೧ ರಲ್ಲಿ ಬೃಂದಾವನ ಪ್ರವೇಶ ಮಾಡಿದರೆಂದು ತಿಳಿದು ಬರುತ್ತದೆ. ೬೪ ವರ್ಷಗಳ ನಂತರ ಅಂದರೆ ಕ್ರಿ.ಶ. ೧೭೩೫ ನೆಯ ಶ್ರೀಮುಖ ಸಂವತ್ಸರದಲ್ಲಿ ಶ್ರಾವಣ ಶುದ್ಧ ಪೂರ್ಣಿಮೆಯ ಶುಭದಿನ ಶ್ರೀ ರಾಯರು ಶಿರಕೊಳ ಗ್ರಾಮದ ಶಾನುಭೋಗರಾಗಿದ್ದ ಶ್ರೀ ಹಿರೇಮಧ್ವರಾಯರೆಂಬ ಮಹನೀಯರಿಗೆ ಒಲಿದು ಶಿರೇಕೊಳ ಗ್ರಾಮಕ್ಕೆ ತಾವಾಗಿ ಬಂದು ನೆಲೆಸಿದರು ಎಂಬುದು ವಿಶೇಷ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಹಿರಿಯೂರು-ಬಳ್ಳಾರಿ ರಸ್ತೆಯಲ್ಲಿ ಬಳ್ಳಾರಿಯಿಂದ 32 ಕಿ.ಮೀ ದೂರದಲ್ಲಿರುವ ಶಿರೇಕೊಳದಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿರುವ ಬೃಂದಾವನವು ಪುರಾತನವಾಗಿದ್ದು, ಕ್ರಿ.ಶ. 1735 ರಲ್ಲಿ ಸ್ಥಾಪಿತವಾಗಿದೆ.
ಬೃಂದಾವನವು ಬಹಳ ಭವ್ಯವಾಗಿದ್ದು, ಮೇಲಿನ ಹಂತದಲ್ಲಿ ಪ್ರತಿ ದಿಕ್ಕಿನಲ್ಲಿಯೂ ತಲಾ ಐದರಂತೆ ಒಟ್ಟು ಇಪ್ಪತ್ತು ತೆನೆಗಳಿವೆ (ಬೃಂದಾವನದ ಮೇಲ್ಭಾಗದಲ್ಲಿ ಪದ್ಮದಂತಿರುವ ರಚನೆ)
ಶಿರೇಕೊಳದ ಮಠದಲ್ಲಿ ಕೇಶವ ಹಾಗೂ ಮಾರುತಿಯ ಮೂರ್ತಿಗಳಲ್ಲದೆ ಶ್ರೀ ಮಂತ್ರಾಲಯದಲ್ಲಿರುವಂತೆ ಮಂಚಾಲಮ್ಮನ ಮೂರ್ತಿಯೂ ಇರುವುದು ಬಹು ವಿಶೇಷ ಶಿರೇಕೊಳದಲ್ಲಿ ಬೃಂದಾವನ ಸ್ಥಾಪಿತವಾದ ಬಗ್ಗೆ ಇಲ್ಲಿ ಒಂದು ಐತಿಹ್ಯವಿದೆ.
ಇದು ಹಿಂದೆ ಅಗ್ರಹಾರವಾಗಿತ್ತು. ಇಲ್ಲಿ ಹಿರೇಮಧ್ವರಾಯ ಎಂಬ ಯುವಕನಿದ್ದ. ಅವನಿಗೆ ಸಹಿಸಲಸಾಧ್ಯ ಹೊಟ್ಟೆನೋವು ಬರುತ್ತಿತ್ತು. ಒಂದು ದಿನ ಅವನಿಗೆ ಊರಿನ ಕೆಲವು ಪ್ರಮುಖರು “ಮಂತ್ರಾಲಯಕ್ಕೆ ಹೋಗಿ ರಾಯರಸೇವೆ ಸಲ್ಲಿಸು ನಿನ್ನ ಉದರಶೋಲೆ ವಾಸಿಯಾಗುವುದು” ಎಂದು ಸಲಹೆಯಿತ್ತರು. ಮಧ್ವರಾಯ ಕಾಲ್ನಡಿಗೆಯಲ್ಲಿಯೇ ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಸಲ್ಲಿಸಿದನು, ಉದರ ಬೇನೆ ವಾಸಿಯಾಯಿತು ಹಾಗೂ ಅವನಿಗೆ ಐಶ್ವರ್ಯವೂ ಪ್ರಾಪ್ತಿಯಾಯಿತು.
ನಂತರ ಅವನು ಆಗಾಗ ಶ್ರೀಕ್ಷೇತ್ರಕ್ಕೆ ಹೋಗಿ ರಾಯರ ದರ್ಶನವನ್ನು ಪಡೆಯುತ್ತಿದ್ದ. ಕೊನೆಗೆ ಆತನಿಗೆ ವಯೋಸಹಜ ಬಳಲಿಕೆಯಿಂದ ಹೋಗುವುದು ಕಷ್ಟವಗುತ್ತಿತ್ತು. ಒಂದು ಬಾರಿ ಮಂತ್ರಾಲಯದ ಯತಿಗಳ ಬೃಂದಾವನದ ಮುಂದೆ ನಿಂತು ತನಗೆ ಇನ್ನು ಬರಲಾಗುವುದಿಲ್ಲ ಎಂದು ಕಂಬನಿ ಮಿಡಿದನಂತೆ. ರಾಯರು ಕನಸಿನಲ್ಲಿ ಬಂದು ‘ನೀನು ಮುಂದೆ ಹೋಗು ನಾನು ಹಿಂದೆ ಬರುತ್ತೇನೆ” ಎಂದು ಅಪ್ಪಣ್ಣೆ ಕೊಟ್ಟರಂತೆ. ರಾಯರು ಹಿತ್ತಾಳೆ ಪಾದುಕೆ ಹಾಕಿಕೊಂಡು ಶಿರೇಕೊಳಕ್ಕೆ ಬಂದು ಬೃಂದಾವನ ನಿರ್ಮಿಸಲು ಸೂಚಿಸಿದಂತೆ ಅವನಿಗೆ ಅನಿಸಿತಂತೆ. ಶಿರೇಕೊಳಕ್ಕೆ ಸಮೀಪದ ದಾಸಮಾನಗುಡ್ಡ ಎಂಬ ಗುಡ್ಡದಿಂದ ಶಿಲೆಯನ್ನು ತರಿಸಿ ಬೃಂದಾವನ ಸ್ಥಾಪಿಸಲಾಯಿತು. ಬೃಂದಾವನದೊಳಗೆ ಸಾಲಿಗ್ರಾಮ ಶಿಲೆಗಳನ್ನು ಹಾಕುವುದು ಬಾಕಿ ಇತ್ತು. ಆಗ ರಾಯರು ಮೂರು ದಿನ ತಡೆಯುವಂತೆ ಅಪ್ಪಣೆ ಕೊಡಿಸಿದರು. ಅಲ್ಲಿಗೆ ಬಾವಾಜಿ ಎಂಬ ಸಾಲಿಗ್ರಾಮ ವ್ಯಾಪಾರಿ ಬಂದಿದ್ದನು. ಆತನನ್ನು ಸಾಲಿಗ್ರಾಮವನ್ನು ನೀಡಲು ರಾಯರ ಭಕ್ತರು ಕೇಳಿದರು. ವ್ಯಾಪಾರಿಯಾದ ಆತ ಪುಕ್ಕಟೆ ಕೊಡಲು ನಿರಾಕರಿಸಿ ಹೊರಟುಬಿಟ್ಟ ಸ್ವಲ್ಪ ದೂರ ಹೋದಾಗ ರಾಯರ ಪ್ರೇರಣೆಯಾದಂತಾಗಿ ಹಿಂತಿರುಗಿ ಬಂದು ಸಾಲಿಗ್ರಾಮಗಳನ್ನು ಪುಕಟ್ಟೆಯಾಗಿ ನೀಡಿ ರಾಯರ ಬೃಂದಾವನವನ್ನು ಸ್ಥಾಪಿಸಲು ಸಹಕರಿಸಿದ ಎಂದು ಸ್ಥಳ ಪುರಾಣವಿದೆ.
ಹಿರಿಯೂರು-ಬಳ್ಳಾರಿ ರಸ್ತೆಯಲ್ಲಿ ಬಂದಾಗ ಬಳ್ಳಾರಿಗೆ 32 ಕಿ.ಮೀ ಮೊದಲು ಸಿಗುವ ರಾಂಪುರ ಎಂಬ
ಮಾಹಿತಿ : ಡಾ.ಸಂತೋಷ್ ಹೊಳಲ್ಕೆರೆ
ದಂತ ವೈದ್ಯರು, ಲೇಖಕರು
ಚಿತ್ರದುರ್ಗ-577501
ಮೊ.ನಂ: 9342466936