ಸುದ್ದಿಒನ್, ಮೊಳಕಾಲ್ಮೂರು, ಜನವರಿ. 28 : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮೂರು ಪೊಲೀಸರು ಅಂತರ ರಾಜ್ಯ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಆತನಿಂದ 2,60,000/- ರೂ (ರೂ.ಎರಡು ಲಕ್ಷದ ಅರವತ್ತು ಸಾವಿರ) ಮೌಲ್ಯದ ಕಳವು ಮಾಡಿದ 10 ಬೈಕ್ ಗಳನ್ನು ಜಪ್ತು ಮಾಡಲಾಗಿದೆ.
ಅನಂತಪುರ ಜಿಲ್ಲೆಯ ಅಡವಿಗೊಲ್ಲಪಲ್ಲಿಯ
ಬಿ.ವನ್ನಪ್ಪ (48 ವರ್ಷ) ಬಂಧಿತ ಆರೋಪಿ. ಈತನ ವಿರುದ್ಧ ಮೊಳಕಾಲ್ಮೂರು, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ದಾಸರಿ ನರಸಿಂಹಲು ಎಂಬುವವರು
ಮೊಳಕಾಲ್ಮೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ತಮ್ಮ ಬೈಕ್ ಅನ್ನು ನಿಲ್ಲಿಸಿ ಬಳ್ಳಾರಿಗೆ ಹೋಗಿ ಬಂದ ನಂತರ ಬೈಕ್ ಕಳುವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿರವರ ಮಾರ್ಗದರ್ಶನದಲ್ಲಿ ರಾಜಣ್ಣ ಡಿ.ವೈ.ಎಸ್.ಪಿ ಚಳ್ಳಕೆರೆ ರವರ ಉಸ್ತುವಾರಿಯಲ್ಲಿ ವಸಂತ ವಿ ಅಸೋದೆ ಸಿಪಿಐ ಮೊಳಕಾಲ್ಮೂರು ವೃತ್ತ ರವರ ನೇತೃತ್ವದಲ್ಲಿ ಮೊಳಕಾಲ್ಮೂರು ಪೊಲೀಸ್ ಉಪನಿರೀಕ್ಷಕರಾದ ಈರೇಶ, ಪಾಂಡುರಂಗ ಹಾಗೂ ಸಿಬ್ಬಂದಿಯವರಾದ ಓಬಣ್ಣ, ಹರೀಶ, ವೀರಣ್ಯ, ಖಾದರ್ ಬಾಷ, ತಿಮ್ಮೇಶ, ಈಶ್ವರ, ನಂದಪ್ಪ ಪೂಜಾರಿ, ಮುರುಗೇಂದ್ರಪ್ಪರವರ ತಂಡ ತನಿಖೆ ನಡೆಸಿರುತ್ತಾರೆ.
ಜನವರಿ 27 ರಂದು ಬೆಳಿಗ್ಗೆ ಮೊಳಕಾಲ್ಮೂರು ಪೊಲೀಸರು ವಿಶೇಷ ಗಸ್ತಿನಲ್ಲಿರುವಾಗ ಆರೋಪಿಯು ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿರುವಾಗ ಅನುಮಾನ ಬಂದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಾಸರಿ ನರಸಿಂಹಲು ಸೇರಿದಂತೆ ವಿವುಧ ಠಾಣೆಗಳಲ್ಲಿ ದಾಖಲಾದ ಮೋಟಾರು ಸೈಕಲ್ ವಾಹನಗಳನ್ನು ಕಳ್ಳತನ ಮಾಡಿದ್ದು, ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಳಕಾಲ್ಮೂರು ಪೊಲೀಸರ ಈ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…