ಸುದ್ದಿಒನ್, ಮೊಳಕಾಲ್ಮೂರು, ಡಿಸೆಂಬರ್. 24 : ಬಂಗಾರದ ನಾಣ್ಯಗಳಿಗಾಗಿ ಜನರು ಹುಡುಕುತ್ತಾ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದು ತೀವ್ರ ಹುಡುಕಾಟ ನಡೆಸಿರುವ ಘಟನೆ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿದೆ.
ಬಳ್ಳಾರಿ ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ
ತಾಲೂಕಿನ ಕೆಳಗಳಹಟ್ಟಿ ಗ್ರಾಮದಲ್ಲಿ ಬಂಗಾರದ ನಾಣ್ಯಗಳು ಸಿಗುತ್ತವೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಇಂದು ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಬಂದು ಬಂಗಾರದ ನಾಣ್ಯವನ್ನು ಹುಡುಕುತ್ತಿದ್ದಾರೆ.
ಆದರೆ ಆ ಪ್ರದೇಶದಲ್ಲಿ ಕೆಲವು ನಾಣ್ಯಗಳು ದೊರೆತಿದ್ದು, ಅವು ಬಂಗಾರ ಅಥವಾ ತಾಮ್ರದ ನಾಣ್ಯಗಳು ಎಂದು ಇನ್ನೂ ಕೂಡ ದೃಢಪಟ್ಟಿಲ್ಲ. ನಾಣ್ಯದ ಅಸಲಿಯೆತ್ತು ತಿಳಿಯದ ಜನರು ನಾ ಮುಂದು ತಾ ಮುಂದು ಎನ್ನುವಂತೆ ಬಂಗಾರದ ನಾಣ್ಯಗಳನ್ನು ಹುಡುಕಲು ಮುಗಿಬಿದ್ದಿದ್ದಾರೆ.
ಈಗಾಗಲೇ ಕೆಲವು ಜನರಿಗೆ ಸಿಕ್ಕಿರುವ ನಾಣ್ಯಗಳು ಅಸಲಿಯೋ ಅಥವಾ ನಕಲಿಯೋ ಎಂಬುದು ತಿಳಿದು ಬರಬೇಕಿದೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿಯೂ ಕೂಡಾ ಇಂತಹದ್ದೇ ಘಟನೆ ನಡೆದಿದನ್ನು ಗಮನಿಸಬಹುದು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿ ಜಂಕ್ ಪುಡ್ ಕಡೆಗೆ ಅವರ…