ಪ್ರಯಾಗ್ ರಾಜ್ : ಈಗಾಗಲೇ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಕೋಟ್ಯಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಇದೀಗ ಪ್ರಧಾನಿ ಮೋದಿಯವರು ಕೂಡ ಇಂದು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಯಾಗ್ ರಾಜ್ ನಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪ್ರಯಾಗ್ ರಾಜ್ ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಪ್ರಧಾನಿ ಮೋದಿಯವರನ್ನು ಯುಪಿ ಯೋಗಿ ಆದಿತ್ಯಾನಾಥ್ ಅವರು ಭ್ಯ ಸ್ವಾಗತ ಮಾಡಿದರು. ಬಳಿಕ ಮೋದಿ ಅವರು ಬಂದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಕೈಯಲ್ಲಿ ರುದ್ರಾಕ್ಷಿಯನ್ನು ಹಿಡಿದು ಜಪತಪ ಮಾಡಿದರು. ಗಂಗಾ ಮಾತೆಗೆ ನಮಿಸಿ, ಪುಣ್ಯ ಸ್ನಾನ ಮಾಡಿದರು. ಸ್ನಾನದ ಬಳಿಕ ಭಗವಾನದ ಹನುಮಂತನ ದರ್ಶನಕ್ಕೆ ಧಾವಿಸಿದರು. ಅಲ್ಲಿಯೂ ವಿಶೇಷ ಪೂಜೆ ಮಾಡಿಸಿದರು. ಈ ವೇಳೆ ಅಲಗಲಿನ ಅರ್ಚಕರು ಪ್ರಧಾನಿ ಮೋದಿಯವರಿಗೆ ವಿಶೇಷವಾದ, ಶಕ್ತಿಯುಳ್ಳ ದಾರವನ್ನು ಕೈಗೆ ಕಟ್ಟಿದರು. ಈ ವೇಳೆ ಪ್ರಧಾನಿ ಮೋದಿಯವರು ಬರುವಾಗಲೇ ತಮ್ಮ ಜೊತೆಗೆ ತಂದಿದ್ದ ಸಿಹಿ ತಿಂಡಿಯನ್ನು ಅವರೇ ಎಲ್ಲರಿಗೂ ಹಂಚಿದರು.
ಈಗಾಗಲೇ ಸಾಮಾನ್ಯ ಜನರು, ರಾಜಕಾರಣಿಗಳು, ಸಾಧು ಸಂತರು, ದೇಶದ ನಾನಾ ಮಠಗಳ ಸ್ವಾಮೀಜಿಗಳು ಬಂದು ತೀರ್ಥ ಸ್ನಾನ ಮಾಡಿದ್ದಾರೆ. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿದರೆ ಪಾಪ ಕರ್ಮಗಳು ಕಳೆಯುತ್ತವೆ. ದೇವತೆಗಳ ಅಮೃತ ಭೂಮಿಗೆ ಬೀಳುವಂಥ ಸಂದರ್ಭದಲ್ಲಿ ಮಹಾಕುಂಭಮೇಳ ಸಂಭವಿಸುವುದು ಎಂಬ ನಂಬಿಕೆ ಇದೆ. ಹೀಗಾಗಿ ಕೋಟ್ಯಾಂತರ ಭಕ್ತರು ಮಹಾಕುಂಭಮೇಳದ ತೀರ್ಥ ಸ್ನಾನ ಮಾಡುವುದಕ್ಕೆ ಮುಂದೆ ಇರುತ್ತಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿದೆ. ಇದರ ನಡುವೆ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಫೆ.…
ಚಿತ್ರದುರ್ಗ ಫೆ. 05 : ಉತ್ತಮ ಪೋಷಕಾಂಶಗಳುಳ್ಳ ಸಮತೋಲನ ಆಹಾರ ಸೇವನೆಯಿಂದ ಉತ್ತಮ ಸದೃಡ ಆರೋಗ್ಯವಂತರಾಗಬಹುದು ಎಂದು ಬುದ್ಧನಗರ ಆರೋಗ್ಯ…
ವರದಿ ಮತ್ತು ಫೋಟೋ ಕೃಪೆ : ರಂಗಸ್ವಾಮಿ, ಗುಬ್ಬಿ, ಮೊ: 99019 53364 ಗುಬ್ಬಿ: ರಥ ಸಪ್ತಮಿ ಹಿನ್ನಲೆ ಲಕ್ಕೇನಹಳ್ಳಿ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಫೆ. 05…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ, ಫೆ. 05 :…