in

PSI Recruitment: ಚಿಕ್ಕ ಮೀನುಗಳಷ್ಟೇ ಸಿಕ್ಕಿರುವು, ತಿಮಿಂಗಿಲಗಳಿವೆ : ಶಾಸಕ ಪ್ರಿಯಾಂಕ ಖರ್ಗೆ

suddione whatsapp group join

ಬೆಂಗಳೂರು: ಕೆಲವು ದಿನಗಳಿಂದ ಪೆಸ್ಐ ನೇಮಕಾತಿ ಬಗ್ಗೆ ನಡೆದ ಅಕ್ರಮಗಳ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿವೆ. ಸರ್ಕಾರದ ವೈಫಲ್ಯ ಇರಬಹುದು, ಇಲಾಖೆಯ ವೈಫಲ್ಯವೂ ಇರಬಹುದು.‌ದಿನ ನಿತ್ಯ ಹೆಚ್ಚಿನ ರೀತಿಯಲ್ಲಿ ಮಾಧ್ಯಮದಲ್ಲಿ ಎಕ್ಸ್ ಪೋಸ್ ಆಗುತ್ತಿದೆ. ಅದೇ ನಿಟ್ಟಿನಲ್ಲಿ ಈಗಾಗಲೆ 13 ಜನ ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಆದವರೆಲ್ಲ ಚಿಕ್ಕ ಮೀನುಗಳು. ತಿಮಿಂಗಿಲಗಳು ಮಾತ್ರ ಇನ್ನು ಓಡಾಡುತ್ತಿದೆ. ಕಿಂಗ್ ಪಿನ್ ಗಳು ಇನ್ನು ಓಡಾಡುತ್ತಿದೆ.

ಯಾರೆ ಪಕ್ಷದವರಾಗಿರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅಕ್ರಮದಲ್ಲಿ ಭಾಗಿಯಾಗಿರುವವರು ತಳಮಟ್ಟದಲ್ಲಿರುವವರು. ಈ ದುಡ್ಡು ಮೇಲ್ಮಟ್ಟದ ತನಕ ಮುಟ್ಟುತ್ತಿದೆ ಎಂಬುದನ್ನು ಸಾಕಷ್ಟು ಜನ ಹೇಳ್ತಿದ್ದಾರೆ. ಒಬ್ಬ ಪಿಎಸ್ಐ ನೇಮಕಾತಿ ಆಗಬೇಕು ಅಂದರೆ ಇಲಾಖೆಯವರು ಶಾಮೀಲಾಗಿರುತ್ತಾರೆ, ಸರ್ಕಾರದವರು ಶಾಮೀಲಾಗಿರುತ್ತಾರೆ. ಕಲಬುರಗಿಯಲ್ಲಿ ನಾಲ್ಕು ಜನ ಹಿಡಿದ್ವಿ, ಇನ್ನೆಲ್ಲೋ ಪಿಎಸ್ಐ ಅಭ್ಯರ್ಥಿಗಳಿಗಿಡುದ್ವಿ ಅಥವಾ ಜೂನಿಯರ್ ಕಿಂಗ್ ಪಿನ್ ಹಿಡಿದ್ವಿ. ಇದೆಲ್ಲ ಸ್ವಾಗತ.

ತನಿಖೆ ಮಾಡುತ್ತಾ ಇದ್ದೀರಾ ಮಾಡಿ. ಆದರೆ ಇನ್ನಷ್ಟು ತೀವ್ರಗೊಳಿಸಬೇಕು. ತನಿಖೆ ಮಾಡಿ, ಸರ್ಕಾರದ ಮಟ್ಟದಲ್ಲಿರಬಹುದು, ಇಲಾಖೆ ಮಟ್ಟದಲ್ಲಿರಬಹುದು. ಯಾರಿದ್ದಾರೆಂಬ ಬಹಿರಂಗವಾಗಬೇಕು. ಇವತ್ತು ತಮ್ಮ ಮುಂದೆ ಮತ್ತೊಮ್ಮೆ ಕೆಲವು ಸಾಕ್ಷಿಗಳು ಹಿಡುತ್ತೇನೆ ಎಂದು ಶಾಸಕ ಪ್ರಿಯಾಂಕ ಖರ್ಗೆ, ಪಿಎಸ್ಐ ನೇಮಕಾತಿಯ ಸಂಬಂಧ ಆಡಿಯೋ ರಿಲೀಸ್ ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪರೀಕ್ಷೆ ಮುಖ್ಯ ಎಂದವರು ಪರೀಕ್ಷೆ ಬರೆದಿದ್ದಾರೆ, ಹಿಜಾಬ್ ದೊಡ್ಡದು ಎನ್ನುವವರು ಕ್ಯಾಮೆರಾ ಮುಂದೆ ನಾಟಕವಾಡ್ತಿದ್ದಾರೆ : ಸಿ ಟಿ ರವಿ

PSI Recruitment: ಪ್ರಿಯಾಂಕ್ ಖರ್ಗೆ ಆಡಿಯೋ ಬಾಂಬ್ ಗೆ ಸಿಎಂ ಏನಂದ್ರು ಗೊತ್ತಾ..?