ಕುರುಗೋಡು.(ಸೆ.03) : ಕಾಮಗಾರಿಗಳು ಜನತೆಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಶಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಾಕ್ಷಿಯ ನಡೆ ರೈತರ ಗಮನ ಸೆಳದಿದೆ.
ಹೌದು ಇತ್ತಿಚಿನ ಮಳೆಯಿಂದ ರಸ್ತೆ ಸಮರ್ಪಕವಿಲ್ಲದೆ ತಮ್ಮ ಕಾರು ಸ್ಥಳಕ್ಕೆ ಹೋಗದ ಕಾರಣ ಕಾರ್ಯಕರ್ತರ ದ್ವಿ-ಚಕ್ರ ವಾಹನ ಸಹಾಯ ದೊಂದಿಗೆ ತೆರಳಿ, ಸಮೀಪದ ದೊಡ್ಡರಾಜು ಕ್ಯಾಂಪಿನ ಪರಿಶಿಷ್ಟ ಜಾತಿ ಕಾಲೋನಯಲ್ಲಿ ನಿರ್ಮಾಣಗೊಂಡ 11 ಲಕ್ಷದ ಕುಡಿಯುವ ನೀರಿನ ಘಟಕ ಹಾಗೂ ಚನ್ನಪಟ್ಟಣ ವ್ಯಾಪ್ತಿಯ ಹೊರ ಪ್ರದೇಶದಲ್ಲಿ ಇರುವ ದೊಡ್ಡ ಬೀಳು ಹಳ್ಳದಿಂದ ನಿರ್ಮಾಣಗೊಂಡ ಏತ ನೀರಾವರಿ ಯೋಜನೆಯನ್ನು ಉದ್ಘಾಟನೆ ನೆರೆವೆರಿಸಿದ ಸನ್ನಿವೇಶ ಕಂಡು ಬಂತು.
ನಂತರ ಅವರು ಮಾತನಾಡಿ,2021-22ನೇ ಸಾಲಿನ ಎಸ್.ಸಿ.ಪಿ ಕಾಮಗಾರಿಯ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದು ಒಟ್ಟು 54 ಫಲನುಭವಿಗಳಿಗೆ ಅನುಕೂಲ ವಾಗಲಿದೆ. 59.54 ಸೆಂಟ್ಸ್ ಎಕರೆ ವ್ಯಾಪ್ತಿಯಲ್ಲಿ ಏತನೀರಾರಿ ಒಳಪಡಲಿದೆ ಎಂದರು.
ಫಲನುಭವಿಗಳ ರೈತರು ಭೂಮಿ ಆಧಾರಿತ ಜೋತೆಗೆ ಕೃಷಿ ಇಲಾಖೆ ಸೂಚಿಸುವ ಪ್ರಕಾರ ಬೆಳೆಗಳನ್ನು ಬೆಳೆದು ತಮ್ಮ ಆಧಾಯ ದ್ವಿಗುಣ ಮಾಡಿ ಕೊಳ್ಳಬೇಕು ಎಂದು ಕರೆ ನೀಡಿದರು.ಇನ್ನೂ ರೈತರು ನೀರಿನ ಮರುಪೂರಣವಗಬೇಕಾಗಿದೆ. ನೀರನ್ನು ಮಿತವಾಗಿ ಬಳಸಿ ನೀರನ್ನು ದುರ್ಬಳಕೆ ಮಾಡಬೇಡಿ ಅವಶ್ಯಕ ವಾಗಿರುವಷ್ಟೇ ನೀರನ್ನು ಬಳಸಿ ಈ ನಿಟ್ಟಿನಲ್ಲಿ ನೀರಿನ ಮಿತ ಬಳಕೆ ಬಗ್ಗೆ ರೈತರು ಗಮನಹರಿಸಬೇಕು ಎಂದರು. ನೀರಿನ ಮಿತ ಬಳಕೆ ಮೂಲಕ ಎಲ್ಲರ ಪ್ರಗತಿ ಸಾಧ್ಯ, ನಾವು ಸಬಲರಾಗಿ ಬದುಕಬೇಕಾದರೆ ಆರ್ಥಿಕವಾಗಿ ಸಬಲರಾಗಬೇಕು ಈ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ರೈತರ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಪೂರ್ವದಲ್ಲಿ ಮಣ್ಣೂರಿನ ಸಮುದಾಯ ಭವನ, ಗ್ರಂಥಾಲಯ, ಮಣ್ಣೂರು, ಹಾಗೂ ದೊಡ್ಡರಾಜು ಕ್ಯಾಂಪುನಲ್ಲಿ ಶುದ್ದ ಕುಡಿವ ನೀರಿನ ಘಟಕ ಉದ್ಡಾಟಿಸಿದರು
ಈ ವೇಳೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯತರು ಇತರರು ಇದ್ದರು.