ಶೀಘ್ರದಲ್ಲಿಯೇ ಸುಣ್ಣದ ಗುಮ್ಮಿ ಸ್ಥಳಾಂತರ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

suddionenews
1 Min Read

 

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಜ.27) :  ಅತಿ ಶೀಘ್ರದಲ್ಲಿಯೇ ಸುಣ್ಣದ ಗುಮ್ಮಿಯನ್ನು ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಜನತೆಗೆ ಭರವಸೆ ನೀಡಿದರು.

ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಬನ್ನಿಕಾಳಮ್ಮ ದೇವಸ್ಥಾನದ ಬಳಿಯ ಉದ್ಯಾನವನವನ್ನು ಸಾರ್ವಜನಿಕರ ಉಪಯೋಗಕ್ಕೆ 5 ಲಕ್ಷ ರೂ ವೆಚ್ಚದಲ್ಲಿ ಅಳವಡಿಸಿರುವ ಜಿಮ್ ಉದ್ಘಾಟನೆ ಮಾಡಿ ನಾಗರೀಕರೊಂದಿಗೆ ಮಾತನಾಡಿದ ಶಾಸಕರು, ಸುಣ್ಣದ ಗುಮ್ಮಿಯನ್ನು ಸ್ಥಳಾಂತರ ಮಾಡುವುದರ ನನಗೆ ಕಷ್ಟವೇನಲ್ಲ ಆದರೆ ಜಾಗದ ಸಮಸ್ಯೆಯಾಗಿದೆ ಇವರಿಗೆ ಎಲ್ಲಿ ಜಾಗವನ್ನು ನೀಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಜನತೆ ಇಲ್ಲಿನ ಸುಣ್ಣದ ಗುಮ್ಮಿಯನ್ನು ಸ್ಥಳಾಂತರ ಮಾಡಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಾಗ ಮೇಲಿನಂತೆ ಶಾಸಕರು ಉತ್ತರಿಸಿದರು.

ನನ್ನ ಕ್ಷೇತ್ರದಲ್ಲಿ ಜಾಗದ ಸಮಸ್ಯೆ ಇದೆ. ಹಣ ನೀಡಿದರು ಸಹಾ ಎಲ್ಲಿಯೂ ಸಹಾ ಜಾಗ ಸಿಗುತ್ತಿಲ್ಲ. ಮನೆಗಾಗಿ ಸಾವಿರಾರು ಅರ್ಜಿಗಳು ಬಂದಿವೆ. ಅವರಿಗೆ ಮನೆ ನಿರ್ಮಾಣ ಮಾಡಲು ಸಹಾ ಜಾಗದ ಕೊರತೆ ಕಾಡುತ್ತಿದೆ. ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ, ಮುಂದಿನ ದಿನದಲ್ಲಿ ದಿನದ 24*7 ನೀರನ್ನು ನೀಡಲಾಗುವುದು, ಇದಕ್ಕೆ ಮೀಟರ್ ಅಳವಡಿಕೆ ಮಾಡಲಾಗುವುದು. ಇದರೊಂದಿಗೆ ಪೈಪ್ ಮೂಲಕ ಗ್ಯಾಸ್ ಸಂಪರ್ಕವನ್ನು ನೀಡುವ ಕಾರ್ಯವೂ ಸಹಾ ಭರದಿಂದ ಸಾಗಿದೆ. ಮುಂದಿನ ದಿನದಲ್ಲಿ ನಿಮ್ಮ ಬಡಾವಣೆಗೂ ಸಹಾ ಸಂಪರ್ಕ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ನಗರಾಭಿವೃದ್ದಿ ಪ್ರಾಧಿಕಾರದಿಂದ ಇಲ್ಲಿ ಉತ್ತಮವಾದ ಜಿಮ್ ಸಾಧನಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಿ, ಕಸದ ರಾಶಿ ಬೀಳದ ಹಾಗೇ ನೋಡಿಕೊಳ್ಳಿ ಮನೆಯಿಂದ ಇಂತಿಷ್ಟು ಹಣವನ್ನು ನೀಡುವುದರ ಮೂಲಕ ಯಾರಿಗಾದರೂ ಕೆಲಸ ನೀಡಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ ಎಂದ ಶಾಸಕರು ಹೇಳೀದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬದರಿನಾಥ್, ಸದಸ್ಯರಾದ ಮಂಜುನಾಥ್, ಓಂಕಾರ್, ಶ್ರೀಮತಿ ರೇಖಾ, ಅಯುಕ್ತರಾದ ವಿಜಯಕುಮಾರ್ ನಗರಸಭೆಯ ಮಾಜಿ ಸದಸ್ಯರಾದ ಮಹೇಶ್, ಇಂಜಿನಿಯರ್ ಕಿರಣ್,ಗುತ್ತಿಗೆದಾರರಾದ ಕುಮಾರ್, ನಾಗರಾಜ್ ಸೇರಿದಂತೆ ಬಡಾವಣೆಯ ಜನತೆ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *