ಪಂಚರತ್ನ ರಥಯಾತ್ರೆಯಲ್ಲಿ ಸುಸ್ತಾದ ಶಾಸಕ : ತೆರೆದ ವಾಹನದಲ್ಲಿ ಕುಸಿದು ಕೂತರು..!

suddionenews
1 Min Read

ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳು ತಮ್ಮ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ಮುಂದುವರೆಸಿವೆ. ಜೆಡಿಎಸ್ ಪಕ್ಷ ಪಂಚರತ್ನ ರಥಯಾತ್ರೆಯ ಮೂಲಕ ಜನರನ್ನು ಸೆಲೆಯುವ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ಜಿಲ್ಲೆ ಜಿಲ್ಲೆಗಳಿಗೂ ಜೆಡಿಎಸ್ ಪಂಚರತ್ನ ರಥಯಾತ್ರೆ ಸಾಗುತ್ತಿದೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ಸಾಗುತ್ತಿದೆ.

ಮದ್ದೂರಿನಲ್ಲಿ ಈ ಬಾರಿ ಡಿ ಸಿ ತಮ್ಮಣ್ಣ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇವರ ಪರವಾಗಿ ಮತಬೇಟೆಯನ್ನು ಕುಮಾರಸ್ವಾಮಿ ಆರಂಭಿಸಿದ್ದಾರೆ. ಯಾತ್ರೆ ಮೂಲಕ ಜನರ ಬಳಿ ಸಾಗಿದ್ದು, ತಮ್ಮಣ್ಣನ ಬಗ್ಗೆ ಮಾತನಾಡುತ್ತಾ ಸಾಗಿದ್ದಾರೆ. ಜೆಡಿಎಸ್ ನಿಂದ ಸಂಕಲ್ಪ ಮಾಡಿರುವ ಅಭಿವೃದ್ಧಿಗಳ ಬಗ್ಗೆಯೂ ರಥಯಾತ್ರೆಯಲ್ಲಿ ಹೇಳಲಾಗುತ್ತಿದೆ.

ಹೀಗೆ ತೆರೆದ ವಾಹನದಲ್ಲಿ ಕುಮಾರಸ್ವಾಮಿ ನಿಂತು ಭಾಷಣ ಮಾಡುತ್ತಿದ್ದಾಗ ವಾಹನದಲ್ಲಿದ್ದ ಶಾಸಕ ಡಿಸಿ ತಮ್ಮಣ್ಣ ಆಯಾಸದಿಂದ ಕುಸಿದು ಕೂತಿದ್ದಾರೆ. ಬಿಸಿಲು ಬೇರೆ ಇದ್ದ ಕಾರಣ ಅವರ ಸುಸ್ತಿಗೆ ಕಾರಣವಾಗಿರಬಹುದು. ಯಾತ್ರೆಯಲ್ಲಿದ್ದವರು ಕೂಡ ಶಾಕ್ ಆಗಿದ್ದಾರೆ. ತಕ್ಷಣ ಅವರನ್ನು ವಾಹನದಲ್ಲಿಯೇ ಕೂರಿಸಿ, ವೈದ್ಯರನ್ನು ಕರೆಸಿ, ಚಿಕಿತ್ಸೆ ಕೊಡಿಸಿದ್ದಾರೆ. ಒಂದಷ್ಟು ಸಮಯ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಬಳಿಕ ಡಿಸಿ ತಮ್ಮಣ್ಣ ಅವರೇ ಜನರತ್ತ ಕೈಬೀಸಿ ನಾನು ಹುಷರಾಗಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *