in

ನಾಪತ್ತೆಯಾಗಿದ್ದ FDC ಶವವಾಗಿ ಪತ್ತೆ..!

suddione whatsapp group join

ಬೆಂಗಳೂರು: ಆಗಸ್ಟ್ 23 ರಂದು ನಾಪತ್ತೆ ಕೇಸ್ ವೊಂದು ದಾಖಲಾಗಿತ್ತು. ರಾಯಚೂರು ಎಸಿ ಕಚೇರಿಯ FDC ಪ್ರಕಾಶ್ ಬಾಬು ಅಂದು ನಾಪತ್ತೆಯಾಗಿದ್ದರು. ಆದ್ರೆ ಇದೀಗ ಪ್ರಕಾಶ್ ಬಾಬು ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾಯಚೂರಿನಲ್ಲಿ ನಾಪತ್ತೆಯಾಗಿದ್ದವರು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಆಗಸ್ಟ್ 23 ರಂದು ಪ್ರಕಾಶ್ ಬಾಬು ಕಚೇರಿಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆ ಬಳಿಕ ರಾಯಚೂರು ಪೊಲೀಸರು ಎರಡು ತಂಡಗಳಾಗಿ ರಚನೆ ಮಾಡಿದ್ರು. ಪೊಲೀಸರೆಲ್ಲಾ ಸಾಕಷ್ಟು ಹುಡುಕಾಟ ನಡೆಸಿದ್ರು. ಆದ್ರೆ ಕಾಣೆಯಾದ 8 ದಿನದ ಬಳಿಕ ಇದೀಗ ಬೆಂಗಳೂರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಆತ್ಮಹತ್ಯೆ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಜಿಲ್ಲೆಗೆ ಆಡಿಟ್ ಟೀಂ ಬರುತ್ತೆ ಅಂದಾದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬೆಲ್ಲಾ ಚರ್ಚೆಗಳು ಶುರುವಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಡ್ರಗ್ ಕೇಸ್ : ಇಡಿ ವಿಚಾರಣೆಯಲ್ಲಿ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್

ಸುದೀಪ್ ಭೇಟಿ ಬಗ್ಗೆ ಸಿಎಂ ಟ್ವೀಟ್ : ಥ್ಯಾಂಕ್ಯೂ ಮಾಮಾ ಎಂದ ಕಿಚ್ಚ