ಮೈಸೂರು: ವಸತಿ ಇಲಾಖೆಯಿಂದ ಒಂದು ಮನೆಯೂ ಆಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ವಸತಿ ಸಚಿವ ವಿ ಸೋಮಣ್ಣ ಆಹ್ವಾನ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ವಸತಿ ಇಲಾಖೆಯಿಂದ ಕಟ್ಟಿಸಿರುವ ಮನೆ ನೋಡಲು ಸಿದ್ದರಾಮಯ್ಯ ಅವರಿಗೆ ನೇರ ಆಹ್ವಾನ ನೀಡುತ್ತಿದ್ದೇನೆ ಎಂದಿದ್ದಾರೆ.
ನಾನು ಸುಮ್ಮನೆ ಮೈಪರಚಿಕೊಳ್ಳುವ ವ್ಯಕ್ತಿಯಲ್ಲ. ನಾನು ಎಷ್ಟು ಮನೆ ಕಟ್ಟಿಸಿದ್ದೇನೆ ಎಂದು ಇಡೀ ರಾಜ್ಯ ಸುತ್ತಿ ಸಿದ್ದರಾಮಯ್ಯ ಅವರಿಗೆ ತೋರಿಸಲು ತಯಾರಿದ್ದೇನೆ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಜನರಿಗೆ ಗೊತ್ತಿದೆ. ಆದರೆ ಸಿದ್ದರಾಮಯ್ಯ ಅವರು ಪದೇ ಪದೇ ಯಾಕೆ ಈ ರೀತಿಯ ಮಾತು ಹೇಳುತ್ತಿದ್ದಾರೆಂದು ಗೊತ್ತಿಲ್ಲ.
ಸಿದ್ದರಾಮಯ್ಯ ಅವರು ಕೂಡ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತುಂಬಾ ಜವಬ್ದಾರಿಯಿಂದ ಮಾತನಾಡುತ್ತಾರೆ ಎಂದು ನಂಬಿದ್ದೆ. ಆದರೆ ಅವರ ಮಾತಿನಿಂದ ಅವರು ಯಾವ ರೀತಿಯ ಅನುಭವಸ್ಥರು ಎಂಬುದು ತಿಳಿಯುತ್ತಿದೆ. ಸಿದ್ದರಾಮಯ್ಯ ಅವರಿಗೆ ನಾನು ಸವಾಲು ಹಾಕುತ್ತೇನೆ. ನನ್ನ ಮೇಲೆ ಆರೋಪ ಮಾಡುವುದಲ್ಲ. ನನ್ನ ಜೊತೆ ಬರಲಿ ಇಡೀ ರಾಜ್ಯ ಸುತ್ತಿ ನಾನು ತಂದಿರುವ ಯೋಜನೆ ಬಗ್ಗೆ ತೋರಿಸುತ್ತೇನೆ ಎಂದಿದ್ದಾರೆ.






GIPHY App Key not set. Please check settings