ಬೆಂಗಳೂರು: ಚುನಾವಣೆ ಸಮಯದಲ್ಲಿ ಕೆಲ ಬದಲಾವಣೆಗಳು ನಡೆಯುತ್ತವೆ ಎಂದು ಸಹಜವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅದರಲ್ಲಿ ಆತಂಕವೇನೂ ಇಲ್ಲ. ಬಿಜೆಪಿಯ ಯಾವುದೇ ಜನಪ್ರತಿನಿಧಿ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಡಳಿತವನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅತ್ಯುತ್ತಮ ಆಡಳಿತದ ವೈಖರಿಯನ್ನೇ ಮುಂದುವರಿಸಲಾಗಿದೆ. ಶಾಸಕರಿಗೆ ಸಿಎಂ ಮೇಲೆ ವಿಶ್ವಾಸವಿದೆ .ಬಿಜೆಪಿಗೆ ಶಾಸಕರು ಪಕ್ಷ ತೊರೆಯುವ ಭಯ ಇಲ್ಲ. ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತೆ ಎಂದು, ಯಡಿಯೂರಪ್ಪ ನಿಖರವಾಗಿ ಹೇಳಿಲ್ಲ ಎಂದರು.
ಈ ಹಿಂದೆ ಗಾಂಧಿ ಕುಟುಂಬವನ್ನು ಸಿದ್ದರಾಮಯ್ಯ ಅವರು ಟೀಕೆ ಮಾಡಿದ್ದರು. ಈಗ ಪಕ್ಷಕ್ಕೆ ಹೋಗಿ ಗಾಂಧಿ ಕುಟುಂಬ ಹೊಗಳ್ತಾರೆ. ಕಾಂಗ್ರೆಸ್ಸಲ್ಲಿ ಇರೋರೆಲ್ಲ ಕಾಂಗ್ರೆಸ್ಸಿಗರಲ್ಲ. ಜನತಾ ಪರಿವಾರದಿಂದಲೇ ಹೆಚ್ಚು ಜನ ಬಂದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಅನೈತಿಕ ಸರ್ಕಾರ ಆಗಿತ್ತು. ಅದಕ್ಕೆ ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದೆ ಎಂದರು.