in ,

ರಾಯನ್ ರಾಜ್ ಸರ್ಜಾ ಹೆಸರಿಟ್ಟಿದ್ದು ಯಾಕೆ ಗೊತ್ತಾ..? ಮೇಘನಾ ಕೊಟ್ಟ ಸ್ಪಷ್ಟನೆ ಏನು..?

suddione whatsapp group join

ಬೆಂಗಳೂರು: ಸರ್ಜಾ ಕುಟುಂಬದ ಕುಡಿ ಜ್ಯೂನಿಯರ್ ಚಿರು. ಚಿರಂಜೀವಿ ಇಲ್ಲದ ದುಃಖದಲ್ಲೂ ಮಗನ ನಾಮಕರಣವನ್ನು ಮಾಡಿ ಮುಗಿಸಿಯಾಯ್ತು. ಆದ್ರೆ ಜ್ಯೂ ಚಿರುಗೆ ಇಟ್ಟ ಹೆಸರಿನ ಮೇಲೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಯನ್ ಎಂದು ಇಟ್ಟಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳು ಕೇಳಿ ಬರ್ತಿವೆ. ಈ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಖಾಸಗಿ ಹೊಟೇಲ್ ನಲ್ಲಿ ಅದ್ದೂರಿಯಾಗಿ ನಾಮಕರಣ ಸಮಾರಂಭ ಮಾಡಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಧರ್ಮದ ಪ್ರಕಾರವೇ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಮೊದಲಿಗೆ ಚರ್ಚ್ ಗೆ ಹೋಗಿ ಶಾಸ್ತ್ರ ಮುಗಿಸಿದ್ದು,ಆ ಬಳಿಕ ಖಾಸಗಿ ಹೊಟೇಲ್ ನಲ್ಲಿ ಗ್ರ್ಯಾಂಡ್ ಆಗಿ ಹೆಸರಿಟ್ಟಿದ್ದಾರೆ. ರಾಯನ್ ರಾಜ್ ಸರ್ಜಾ ಎಂಬುದಾಗಿ.

https://www.instagram.com/tv/CTZ1eqdpMR7/?utm_medium=copy_link
ಇದೀಗ ಅದಕ್ಕೆ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ಕೊಟ್ಟಿರುವ ಮೇಘನಾ ರಾಜ್, ಒಬ್ಬ ತಾಯಿಯಾಗಿ ನನ್ನ ಮಗನಿಗೆ ಉತ್ತಮವಾದುದನ್ನು ನೀಡಬೇಕಾಗಿದೆ. ಅವನ ತಂದೆ ತಾಯಿ ಇಷ್ಟಪಟ್ಟಂತೆ ಎರಡು ಧರ್ಮದಲ್ಲಿ ಇರುವಂತೆ, ಉತ್ತಮವಾದ ಅಂಶ ಅವನಿಗೆ ಯಾಕೆ ಸಿಗಬಾರದು..?  ಜನ ಕೂಡ ಜಾತಿ ಧರ್ಮವನ್ನು ಲೆಕ್ಕಿಸದೆ ಅವನಿಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲಾ ದೇವರಿಂದಲೂ ಆಶೀರ್ವಾದ ಕೋರುತ್ತೇವೆ.

ಹಾಗೇ ಎರಡು ಸಂಪ್ರದಾಯಗಳ ಪ್ರಕಾರ ನಾನು ಇದನ್ನು ಮಾಡುವುದು ಬಹಳ ಮುಖ್ಯವಾಗಿತ್ತು. ಇದಕ್ಕೆ ಕಾರಣ ಅವನ ತಂದೆ ನಮ್ಮ ರಾಜ ಚಿರು. ಅವರು ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯತೆ ಮುಖ್ಯವೆಂದು ನಂಬಿದ್ದರು. ಹೀಗಾಗಿ ಎರಡು ಸಂಪ್ರದಾಯದಲ್ಲಿ ಉತ್ತಮವಾಗಿರುವುದನ್ನೇ ಸೆಲೆಕ್ಟ್ ಮಾಡಿದ್ದೇವೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸೋಮಾರಿತನ ಹೋಗಲಾಡಿಸಲು ಹೊಕ್ಕಳಕ್ಕೆ ಈ ಎಣ್ಣೆ ಹಾಕಿ

ನಿಫಾ ವೈರಸ್ ಗೆ 12 ವರ್ಷದ ಬಾಲಕ ಬಲಿ : ಸಂಪರ್ಕದಲ್ಲಿದ್ದವರ ಪತ್ತೆಗೆ ತಂಡ ರಚನೆ..!