ಡಿಕೆಶಿ-ಆನಂದ್ ಸಿಂಗ್ ಭೇಟಿ : ರಾಜಕೀಯ ವಲಯದಲ್ಲಿ ಭಾರೀ ಸಂಚಲನ..!

suddionenews
1 Min Read

ಬೆಂಗಳೂರು: ಇತ್ತೀಚೆಗೆ ರಾಜಕೀಯದಲ್ಲಿ ದಿನಕ್ಕೊಂದು ಹೊಸ ವಿಷಯ ಚರ್ಚೆಯಾಗುತ್ತಿರುತ್ತೆ. ಅದರಲ್ಲೂ ಅವರ ಸಚಿವರು ನಮ್ಮ ಸಂಪರ್ಕದಲ್ಲಿದ್ದಾರೆ, ಇವರ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಹೇಳ್ತಾನೆ ಇರ್ತಾರೆ. ಅದರಲ್ಲೂ ಇತ್ತೀಚೆಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕೂಡ ನಮ್ಮ ಸಂಪರ್ಕದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದಿದ್ದರು.

ಇದೀಗ ಇದಕ್ಕೆಲ್ಲಾ ಪುಷ್ಟಿ ನೀಡುವಂತ ಘಟನೆ ನಡೆದಿದೆ. ಸಚಿವ ಆನಂದ್ ಸಿಂಗ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ. ಅವರು ಬಿಜೆಪಿಯಲ್ಲಿದ್ದರು ಕಾಂಗ್ರೆಸ್ ಪಕ್ಷದವರನ್ನ ಭೇಟಿ ಮಾಡಿದ ಉದ್ದೇಶವಾದರೂ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ.

ಇನ್ನು ಸಚಿವ ಆನಂದ್ ಸಿಂಗ್ ಯಾವುದನ್ನೇ ಆಗಲಿ ಬಹಳ ಬೇಗ ಯಾವುದನ್ನು ದುಡಿಕಿ ನಿರ್ಧಾರ ತೆಗೆದುಕೊಳ್ಳುವವರಲ್ಲ. ಹೀಗಾಗಿ ತುಂಬಾ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವವರು. ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದರ ಹಿಂದೆ ಏನೋ ಇದೆ ಎಂದೇ ಚರ್ಚೆಯಾಗುತ್ತಿದೆ. ಸಚಿವ ಆನಂದ್ ಸಿಂಗ್ ಈ ಬಗ್ಗೆ ಇದು ಬರೀ ಸೌಜನ್ಯದ ಭೇಟಿಯಷ್ಟೇ ಎಂದು ಹೇಳಿದ್ದಾರೆ.

ಸಚಿವ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ನಿರ್ಮಾಣ ಮಾಡೋದಕ್ಕೆ ಸಾಕಷ್ಟು ಶ್ರಮವಹಿಸಿದವರು. ಅವರ ಪ್ರಯತ್ನಕ್ಕೇನೋ ಫಲ ಸಿಕ್ಕಿತ್ತು. ಆದ್ರೆ ತಮ್ಮ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲು ಮಾತ್ರ ಅವಕಾಶ ಸಿಗಲಿಲ್ಲ. ಉಸ್ತುವಾರಿ ವಿಚಾರದಲ್ಲಿ ಅವರು ಬೇಸರ ಮಾಡಿಕೊಂಡಿದ್ದಾರೆ. ಅದನ್ನ ಓಪನ್ ಆಗಿಯೇ ಹೊರ ಹಾಕಿದ್ದರು. ಕೊಪ್ಪಳ ಜನತೆಯೇನೋ ಖುಷಿಯಲ್ಲಿದ್ದಾರೆ ಆದ್ರೆ ನಮ್ಮ ವಿಜಯನಗರದ ಜನತೆಯೇ ದುಃಖದಲ್ಲಿದ್ದಾರೆ ಎಂದಿದ್ದರು. ಉಸ್ತುವಾರಿ ವಿಚಾರಕ್ಕೆ ಬೇಸರ ಮಾಡಿಕೊಂಡಿರುವ ಆನಂದ್ ಸಿಂಗ್ ಇದೀಗ ಡಿಕೆಶಿ ಭೇಟಿ ಚರ್ಚೆ ಶುರು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *