Categories: Home

ಧ್ಯಾನದಿಂದ ಮಾನಸಿಕ ನೆಮ್ಮದಿ : ರೇವಣಸಿದ್ದಪ್ಪ

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ಹೃದಯನ್ನು ಆರೋಗ್ಯವಾಗಿಟ್ಟುಕೊಂಡರೆ ಮನಸ್ಸು ಶಾಂತವಾಗಿರುತ್ತದೆಂದು ನಿವೃತ್ತ ಡಿ.ಡಿ.ಪಿ.ಐ. ರೇವಣಸಿದ್ದಪ್ಪ ಹೇಳಿದರು.

ರಾಮಚಂದ್ರ ಮಿಷನ್ ಹಾರ್ಟ್‍ಫುಲ್‍ನೆಸ್ ಧ್ಯಾನ ಕೇಂದ್ರದಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಧ್ಯಾನೋತ್ಸವ ಉದ್ಗಾಟಿಸಿ ಮಾತನಾಡಿದರು.

ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿ ಬದುಕುವಂತಾಗಿದೆ. ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಧ್ಯಾನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ನೆಮ್ಮದಿ ಕಂಡುಕೊಳ್ಳಬಹುದೆಂದು ತಿಳಿಸಿದರು.

ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಮಾತನಾಡಿ ಒತ್ತಡದ ಜೀವನದಿಂದ ಹೊರ ಬರಬೇಕಾದರೆ ಧ್ಯಾನ ಅತ್ಯವಶ್ಯಕ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನ ಜೀವನ ಶೈಲಿಗೆ ಸಾಕಷ್ಟು ಬದಲಾವಣೆಗಳಿರುತ್ತವೆ. ಒತ್ತಡ ನಿವಾರಿಸಿ ಮನಸ್ಸಿಗೆ ಶಾಂತಿ ನೀಡುವ ಧ್ಯಾನವನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ಹಾರ್ಟ್‍ಫುಲ್‍ನೆಸ್ ರಾಜ್ಯ ಸಂಚಾಲಕ ಮೈಸೂರಿನ ಮಧುಸೂದನ್ ಮಾತನಾಡುತ್ತ ಸದೃಢ ಸಮಾಜ ನಿರ್ಮಿಸಲು ಯೋಚಿಸುವಂತ ಮನಸ್ಸುಗಳು ಇಂದಿನ ಸಮಾಜಕ್ಕೆ ಬೇಕು. ವಿವೇಕಯುತ ಜೀವನ ಮಾಡುವುದಕ್ಕಾಗಿ ಎಲ್ಲರೂ ಧ್ಯಾನದ ಮೊರೆ ಹೋಗಲೇಬೇಕು. ಧ್ಯಾನದ ಮೂಲಕ ಪರಿಶುದ್ದವಾದ ಜೀವನ ಮಾಡಬಹುದು. ಪ್ರಜ್ಞಾಪೂರ್ವಕವಾಗಿ ಧ್ಯಾನ ಮಾಡಿದಾಗ ಮನಸ್ಸಿನಲ್ಲಿರುವ ಕ್ರೂರತ್ವ ದೂರವಾಗುತ್ತದೆ ಎಂದು ಹೇಳಿದರು.

 

ಹಾರ್ಟ್‍ಫುಲ್‍ನೆಸ್ ಪ್ರಶಿಕ್ಷಕ ಡಾ.ವಿ.ಬಸವರಾಜ್ ಮಾತನಾಡಿ ಧ್ಯಾನೋತ್ಸವದ ಸತ್ವವನ್ನು ಎಲ್ಲರೂ ಅರಿಯಬೇಕು. ಜೀವನ ಶೈಲಿ ಹಾಗೂ ಆಹಾರದ ಕ್ರಮಗಳಲ್ಲಿ ಸಾಕಷ್ಟು ಬದಲಾವಣೆಯಾಗಿರುವುದರಿಂದ ಎಲ್ಲರೂ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುವುದು ಸಹಜ. ಹಾಗಾಗಿ ಧ್ಯಾನದ ಮಹತ್ವವನ್ನು ನೀವು ಕಲಿಯಿರಿ ನಿಮ್ಮ ಅಕ್ಕಪಕ್ಕದವರಿಗೂ ಕಲಿಯುವಂತೆ ಪ್ರೇರೇಪಿಸಿ ಎಂದು ರಂಗಮಂದಿರದಲ್ಲಿ ನೆರೆದಿದ್ದವರಲ್ಲಿ ಮನವಿ ಮಾಡಿದರು.

 

ಹಾರ್ಟ್‍ಫುಲ್‍ನೆಸ್ ವಿಭಾಗ ಸಂಚಾಲಕ ಡಾ.ವಿ.ಸಿದ್ದೇಶ್ವರನ್ ಮಾತನಾಡುತ್ತ ಮನಸ್ಸಿಗೆ ಶಾಂತಿ ಸಿಗಬೇಕಾದರೆ ಧ್ಯಾನದ ಜೊತೆಗೆ ಆಧ್ಯಾತ್ಮಿಕತೆಗೆ ಹೆಚ್ಚಿನ ಒತ್ತು ಕೊಡಬೇಕು. ಧ್ಯಾನದಿಂದ ನಾನಾ ರೀತಿಯ ರೋಗಗಳನ್ನು ಹತೋಟಿಗೆ ತರಬಹುದು. ಧ್ಯಾನ ಪ್ರಕ್ರಿಯೆಯಲ್ಲಿ ಪ್ರತಿನಿತ್ಯವೂ ತೊಡಗಿಕೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ನೆಮ್ಮದಿ ಕಂಡುಕೊಳ್ಳಬಹುದು. ಧ್ಯಾನವನ್ನು ಜೀವನದ ಅವಿಭಾಜ್ಯ ಅಂಗವಾಗಿ ರೂಢಿಸಿಕೊಂಡರೆ ರೋಗದಿಂದ ದೂರವಿರಬಹುದೆಂದು ಧ್ಯಾನದ ಮಹತ್ವ ತಿಳಿಸಿದರು.

ಹಾರ್ಟ್‍ಫುಲ್‍ನೆಸ್‍ನ ಹಿರಿಯ ಪ್ರಶಿಕ್ಷಕ ಎಸ್.ವೆಂಕಟಾದಿ, ನಿವೃತ್ತ ಡಿ.ಡಿ.ಪಿ.ಐ. ಎನ್.ಎಂ.ರಮೇಶ್ ಇವರುಗಳು ವೇದಿಕೆಯಲ್ಲಿದ್ದರು. ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.
ಹಾರ್ಟ್‍ಫುಲ್‍ನೆಸ್ ಧ್ಯಾನ, ಹಾರ್ಟ್‍ಫುಲ್‍ನೆಸ್ ಶುದ್ದೀಕರಣ, ಹಾರ್ಟ್‍ಫುಲ್‍ನೆಸ್ ಪ್ರಾರ್ಥನೆ ಎಂಬ ವಿಚಾರ ಕುರಿತು ಗೋಷ್ಠಿಗಳು ನಡೆದವು.

suddionenews

Recent Posts

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

  ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 15 ) ಹತ್ತಿ ಮಾರುಕಟ್ಟೆ…

2 hours ago

ಚಿತ್ರದುರ್ಗ ಪಿಎಸ್ಐ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ ಆರೋಪ

  ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ…

2 hours ago

ರುದ್ರಪ್ಪ ಲಮಾಣಿ ದಿಢೀರನೇ ಬೆಂಗಳೂರಿಗೆ ಶಿಫ್ಟ್

  ಬೆಂಗಳೂರು; ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಈಗಾಗಲೇ…

3 hours ago

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ, ಈ ರಾಶಿಯವರು ಸೋಲಿಲ್ಲದ ಸರದಾರನಾಗಿ ಮುಟ್ಟಿದ್ದೆಲ್ಲ ಚಿನ್ನ. ಶನಿವಾರದ ರಾಶಿ ಭವಿಷ್ಯ…

9 hours ago

ಹಿರಿಯೂರು ಬಳಿ ಉಪ ಸಭಾಪತಿಗೆ ಬೈಕ್ ಡಿಕ್ಕಿ : ಪ್ರಾಣಾಪಾಯದಿಂದ ಪಾರು

ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…

18 hours ago

ದೊಣ್ಣೆಹಳ್ಳಿಯಲ್ಲಿ ಮಾರ್ಚ್ 22 ಮತ್ತು 23 ರಂದು ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ

  ಸುದ್ದಿಒನ್, ಜಗಳೂರು, ಮಾರ್ಚ್. 14 : ಶ್ರೀ ಶರಣ ಬಸವೇಶ್ವರ ದಾಸೋಹ ಮಠ, ದೊಣ್ಣೆಹಳ್ಳಿ, ಸರ್ಕಾರಿ ದಂತ ಕಾಲೇಜು…

20 hours ago