ಚಿತ್ರದುರ್ಗಕ್ಕೆ ಮೆಡಿಕಲ್ ; ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಚಿತ್ರದುರ್ಗ, (ನ.26) : ವಿಧಾನ ಪರಿಷತ್ ಚುನಾವಣೆಯನ್ನು ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಗೆಲುವು ಸಾಧಿಸಲಿದೆ. ಬೇರೆಯವರು ಬೆಂಬಲ ನೀಡುತ್ತಾರೆ ಎಂದರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಚಿತ್ರದುರ್ಗಕ್ಕೆ ಬೇಟಿ ನೀಡಿದ ಅವರು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿಧಾನ ಪರಿಷತ್ ಚುನಾವಣೆ ಬಂದಿದೆ. ನಮ್ಮ ಪಕ್ಷದವತಿಯಿಂದ ಸ್ಫರ್ದೆ ಮಾಡಲಾಗಿದೆ. ಎಲ್ಲೂ ಸಹಾ ಬೇರೆಯವರು ನಮಗೆ ಬೆಂಬಲ ನೀಡುವಂತೆ ಕೇಳಿಲ್ಲ, ಅವರಾಗಿ ನೀಡುತ್ತೇವೆ ಎಂದರೆ ನಾವು ಬೇಡ ಎನ್ನುವುದಿಲ್ಲ ಎಂದ ಸಿ.ಎಂ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗುವುದರ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಚಾರ ಕಾರ್ಯದ ಬಗ್ಗೆ ಮಾಹಿತಿ ಪಡೆದು ಸೂಚನೆಯನ್ನು ನೀಡಲಾಗುವುದೆಂದು ತಿಳಿಸಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಒಪ್ಪಂದವಾಗಿದೆ ಎಂದು ಜೆಡಿಎಸ್ ಹೇಳುತ್ತಿದೆ ಮತ್ತೊಂದು ಕಡೆ ಜೆಡಿಎಸ್ ಬಿಜೆಪಿ ಒಪ್ಪಂದವಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ ಆದರೆ ಇವೆರಡಕ್ಕೂ ಸಹಾ ಅರ್ಥ ಇಲ್ಲವಾಗಿದೆ. ನಮ್ಮ ಪಕ್ಷ ನಮ್ಮ ಬಲದ ಮೇಲೆ ಎಲ್ಲಾ ಕಡೆಗೂ ಅಭ್ಯರ್ಥಿಯನ್ನು ಹಾಕಲಾಗಿದೆ ನಮ್ಮ ಸ್ವಂತ ಬಲದ ಮೇಲೆಯೇ ಗೆಲುವು ಸಾಧಿಸಲಿದೆ. ಇದಕ್ಕಾಗಿ ನಮ್ಮ ಹೋರಾಟವನ್ನು ಮಾಡಲಾಗುವುದು ಎಂದ ಸಿ.ಎಂ.ಬೊಮ್ಮಾಯಿ ಯಡೆಯೂರಪ್ಪರವರು ಸಹಾ ಹೇಳಿದ ಮಾತಿನ ಅರ್ಥ ಎಲ್ಲಿ ಜೆಡಿಎಸ್ ಅಭ್ಯರ್ಥಿಗಳಿಲ್ಲ ಅಂತಹ ಕಡೆಯಲ್ಲಿ ಬೆಂಬಲ ಕೇಳಿರಬಹುದೆಂದು ತಿಳಿಸಿದರು.

ಶಾಸಕರಾದ ತಿಪ್ಪಾರೆಡ್ಡಿಯವರಿಗೆ ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರ ಜೊತೆಯಲ್ಲಿ ಮಾತನಾಡುವ ಬಗ್ಗೆ ತಿಳಿಸಿ, ರಾಜ್ಯದಲ್ಲಿ ಜಾರಿ ಇರುವ ಎಪಿಎಂಸಿ ಕಾಯ್ದೆ ಬೇರೆ ದೇಶದ ಮಟ್ಟದಲ್ಲಿ ವಾಪಸ್ ಪಡೆದಿರುವ ಕಾಯ್ದೆ ಬೇರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಕಾಯ್ದೆಯ ಬಗ್ಗೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಿಕೊಂಡು ಚರ್ಚೆ ಮಾಡಿ  ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿ, ರಾಷ್ಟ್ರೀಯ ಪಕ್ಷಗಳು ರಾಷ್ಟ್ರದ ಬಗ್ಗೆ ಚಿಂತನೆಯನ್ನು ಮಾಡಿದರೆ ಪ್ರಾದೇಶಿಕ ಪಕ್ಷಗಳು ರಾಜ್ಯದ ಬಗ್ಗೆ ಚಂತನೆಯನ್ನು ನಡೆಸುತ್ತೇವೆ. ನಮ್ಮ ಪಕ್ಷ ರಾಷ್ಟ್ರ ಮತ್ತು ರಾಜ್ಯ ಎರಡರ ಬಗ್ಗೆಯೂ ಸಹಾ ಚಿಂತನೆಯನ್ನು ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮೊಯಿ ತಿಳಿಸಿದರು.

ಜನ ಸ್ವರಾಜ್ ಯಾತ್ರೆಯನ್ನು ಪಕ್ಷ ಮುಂಚಿತವಾಗಿಯೇ ಸಿದ್ದ ಪಡಿಸಿತ್ತು. ಇದು ಮಾಡಿಯೂ ಸಹಾ ನೆರೆ ಬಂದ ಮೇಲೆ ಅತಿ ಕಡಿಮೆ ಸಮಯದಲ್ಲಿ ನೊಂದವರಿಗೆ ಪರಿಹಾರವನ್ನು ನೀಡಿದ್ದು ನಮ್ಮ ಪಕ್ಷವಾಗಿದೆ ನೆರೆ ಸಂಭಂವಿಸಿದ 2-3 ದಿನಗಳಲ್ಲಿ ನಮ್ಮ ಸಚಿವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪರಿಹಾರವನ್ನು ನೀಡಿದ್ದಾರೆ ಇಷ್ಟೊಂದು ವೇಗವಾಗಿ ಯಾವ ಹಿಂದಿನ ಯಾವ ಸರ್ಕಾರವೂ ಸಹಾ ನೀಡಿಲ್ಲ ಎಂದು ಸಿ.ಎಂ. ಈ ಹಿಂದೆ ಬೆಳೇ ನಾಶವಾದರೆ ಅದರ ಪರಿಹಾರ ಪಡೆಯಲು 2-3 ತಿಂಗಳು ಕಾಯಬೇಕಾಗಿತ್ತು ಆದರೆ ನಮ್ಮ ಸರ್ಕಾರ ಅತಿ ಕಡಿಮೆ ಸಮಯದಲ್ಲಿಯೇ ಬೆಳೆ ಪರಿಹಾರವನ್ನು ನೀಡಲಾಗಿದೆ ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ 5000 ರೈತರಿಗೆ 97 ಲಕ್ಷ ರೂಗಳನ್ನು ನವಂಬರ್‍ನಲ್ಲಿ ಬಿದ್ದ ಮಳೆಗೆ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಚಿತ್ರದುರ್ಗಕ್ಕೆ ಮೆಡಿಕಲ್ ಆಗಬೇಕೆಂಬುದು ಈ ಭಾಗದ ಜನರ ನಿರೀಕ್ಷೆ ಇದೆ ಆದರಂತೆ ಮುಂದಿನ ನಮ್ಮ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಈ ಚುನಾವಣೆ ಚುನಾಯಿತ ಜನಪ್ರತಿನಿಧಿಗಳ ಚುನಾವಣೆಯಾಗಿದೆ. ಅಲ್ಲದೆ ಪ್ರತಿಯೊಂದು ಚುನಾವಣೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಬಸವರಾಜು, ಶಾಸಕರುಗಳಾದ ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ನಾರಾಯಣಸ್ವಾಮಿ, ಚಿದಾನಂದಗೌಡ, ಗಣಿ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾಧ್ಯಕ್ಷ ಮುರುಳಿ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್ ಸದಸ್ಯೆ ಶ್ರೀಮತಿ ರೇಖಾ, ನಗರಸಭಾ ಅಧ್ಯಕ್ಷೆ ಶ್ರೀಮತಿ ತಿಮ್ಮಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನುರಾಧ, ಮುಖಂಡ ಸಿದ್ದೇಶ್ವ ಯಾದವ್, ಪ್ರಧಾನ ಕಾರ್ಯದರ್ಶೀ ಸಿದ್ದಾಪುರದ ಸುರೇಶ್, ಹನುಮಂತೇಗೌಡ, ಮಾಜಿ ಅಧ್ಯಕ್ಷ ನರೇಂದ್ರನಾಥ್, ಕೆ.ಎಸ್.ನವೀನ್ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

Recent Posts

ಹಿರಿಯೂರು : ಕಾರು – ಲಾರಿ ಡಿಕ್ಕಿ : ಓರ್ವ ಸಾವು

ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…

6 hours ago

ದುಡಿಯುವ ಕೈಗಳಿಗೆ ಕೆಲಸ ಕೊಡಿ: ಕೂಲಿ ಕಾರ್ಮಿಕರ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

7 hours ago

ಮದಕರಿಪುರ ಕೆರೆ ಹೊಳು ತೆಗೆಯುವ ಕಾರ್ಯಕ್ಕೆ ಶಾಸಕ ವಿರೇಂದ್ರ ಪಪ್ಪಿ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

7 hours ago

9ನೇ ತರಗತಿ‌ ಮಕ್ಕಳಿಗೆ ಬಂಪರ್ ಆಫರ್ ; ಬಾಹ್ಯಾಕಾಶದಲ್ಲಿ ಆಸಕ್ತಿ ಇದ್ದರೆ ಇಲ್ಲಿದೆ ಅವಕಾಶ

ಬೆಂಗಳೂರು; ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ದೊಡ್ಡ ಕನಸಿರುತ್ತದೆ. ಪೋಷಕರ ಆಸೆಯಂತೆ ಮಕ್ಕಳು ನಡೆದುಕೊಳ್ಳುವುದು ಸಾಮಾನ್ಯ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ…

7 hours ago

ದುಶ್ಚಟಗಳಿಂದ ದೂರವಿರಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ : ನಗರಸಭೆ ಅಧ್ಯಕ್ಷೆ ಸುಮಿತಾ ಕರೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

9 hours ago

ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಪಿಳ್ಳೇಕೆರೆನಹಳ್ಳಿ ಕುಮಾರ್‌ಗೆ ಶ್ರದ್ಧಾಂಜಲಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

10 hours ago