ಮೆದೇಹಳ್ಳಿ ಮಹಿಳೆ ಕೊಲೆ ಪ್ರಕರಣ : 24 ಗಂಟೆಯೊಳಗೆ ಆರೋಪಿ ಬಂಧನ

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 08 : ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೆದೇಹಳ್ಳಿಯ ಮನೆಯೊಂದರಲ್ಲಿ ಪತ್ನಿಯನ್ನು ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದ ಪತಿಯನ್ನು (ಆರೋಪಿಯನ್ನು) ಪ್ರಕರಣ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೆದೇಹಳ್ಳಿ ಗ್ರಾಮದಲ್ಲಿ ಶ್ರೀದೇವಿ(46 ವರ್ಷ) ಎಂಬ ಮಹಿಳೆಯನ್ನು ನಿನ್ನೆ (ಫೆಬ್ರವರಿ. 07 ರಂದು) ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿತ್ತು.

ಘಟನೆ ಹಿನ್ನೆಲೆ :
ಕೊಲೆಯಾದ ಶ್ರೀದೇವಿಯ ಪತಿ ಮೆದೇಹಳ್ಳಿ ಗ್ರಾಮದ ಉಮಾಪತಿ ಕೊಲೆ ಮಾಡಿದ ಆರೋಪಿ. ಇವರಿಗೆ ಯೋಗೇಶ ಎಂಬ ಗಂಡು ಮಗ ಹಾಗೂ ನಂದಿನಿ ಎಂಬ ಹೆಣ್ಣು ಮಗಳು ಇರುತ್ತಾರೆ. ಪುತ್ರ ಯೋಗೇಶನು ಸುಮಾರು ಒಂದು ವರ್ಷದ ಹಿಂದೆ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ. ಮಗಳ ಭವಿಷ್ಯದ ದೃಷ್ಟಿಯಿಂದ ಜಮೀನನ್ನು ನನ್ನ ಹಾಗೂ ಮಗಳ ಹೆಸರಿಗೆ ಮಾಡಿಸುವಂತೆ ಅಗಾಗ್ಗೆ ಗಲಾಟೆ ನಡೆಯುತ್ತಿರುತ್ತದೆ. ಇದೇ ವಿಚಾರವಾಗಿ ನಿನ್ನೆ ಮತ್ತೆ ಗಲಾಟೆ ನಡೆದಿದೆ. ಬೆಳಿಗ್ಗೆ ಸುಮಾರು 11.00 ಗಂಟೆಗೆ ಶ್ರೀದೇವಿಯು
ಮನೆಯ ದೇವರ ಕೋಣೆಯಲ್ಲಿಪೂಜೆ ಮಾಡುತ್ತಿದ್ದಾಗ ಆಕೆಯು ಉಟ್ಟುಕೊಂಡಿದ್ದ ಸೀರೆಯಿಂದ ಆಕೆಯ ಕುತ್ತಿಗೆಗೆ ಬಿಗಿದು ಕೈಯಿಂದ ಬಲವಾಗಿ ಕುತ್ತಿಗೆ ಇಸುಕಿ ಕೊಲೆ ಮಾಡಿರುತ್ತಾನೆ. ಶ್ರೀದೇವಿಯ ಕುತ್ತಿಗೆಯ ಹತ್ತಿರ ಒತ್ತಿದ ಗಾಯವಾಗಿದ್ದುಬಾಯಲ್ಲಿ ರಕ್ತ ಬಂದಿದು ಉಮಾಪತಿಯು ತನ್ನ ಅತ್ತಿಗೆ ಚಂದ್ರಮ್ಮಳನ್ನು ಮನೆಗೆ ಕರೆಯಿಸಿ ಶ್ರೀದೇವಿ ಪೂಜೆ ಮಾಡುತ್ತಿದ್ದಾಗ ಬಿದ್ದಳು ಎಂದು ಸುಳ್ಳು ಹೇಳಿ ತನ್ನ ಪತ್ನಿ ಶ್ರೀವಿಯನ್ನು ಚಂದ್ರಮ್ಮಳೊಂದಿಗೆ ಮದ್ಯಾಹ್ನ 12.00 ಗಂಟೆಗೆ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಐಪಿಎಸ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ. ಕುಮಾರಸ್ವಾಮಿ, ಹಾಗೂ ಚಿತ್ರದುರ್ಗ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ದಿನಕರ್ ರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮುದ್ದರಾಜ.ವೈ ,ಪೊಲೀಸ್ ನಿರೀಕ್ಷಕರು, ಬಿ. ರಘುನಾಥ. ವಿ. ಎಎಸ್‍ಐ, ಹಾಗೂ ಸಿಬ್ಬಂದಿಗಳಾದ ರಂಗನಾಥ್ ಕುಮಾರ್,
ತಿಮ್ಮರಾಯಪ್ಪ, ಮಾರುತಿ ರಾಂ, ಪ್ರಸನ್ನ , ಅವಿನಾಶ್, ಇದಾಯತ್‍ವುಲ್ಲಾ.ಜೆ. ವಿಶೇಷ ತಂಡವನ್ನು ರಚಿಸಲಾಗಿತ್ತು.

ಪ್ರಕರಣ ದಾಖಲಾದ 24 ಗಂಟೆಯೊಳಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿರುತ್ತಾರೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್
ಅಧೀಕ್ಷಕರು ಶ್ಲಾಘಿಸಿದ್ದಾರೆ.

suddionenews

Recent Posts

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ನಾಳೆಯಿಂದ ದರ ಏರಿಕೆ..!

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ನೆಮ್ಮದಿಯ ಪ್ರಯಾಣ ಅಂತಾನೇ ಹೇಳಬಹುದು. ದೂರಕ್ಕೆ ಹೋಗುವವರಿಗೆ ಟ್ರಾಫಿಕ್ ಸಮಸ್ಯೆಯ…

2 hours ago

ಸೋಲಿನ ಬಗ್ಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು ?

ಸುದ್ದಿಒನ್ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಸುಮಾರು 27 ವರ್ಷಗಳ ನಂತರ, ಕೇಸರಿ ಪಕ್ಷವು ತನ್ನ ಧ್ವಜವನ್ನು ದೆಹಲಿ ಗದ್ದುಗೆ…

3 hours ago

ದೆಹಲಿಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಪ್ರಮುಖ ಕಾರಣಗಳೇ‌ನು ಗೊತ್ತಾ ?

ಸುದ್ದಿಒನ್ : ದೇಶದಲ್ಲಿ ಮೂರು ಅವಧಿಗೆ ಅಧಿಕಾರ ಗೆದ್ದಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಧ್ವಜ ಹಾರಿಸಲು ಸಾಧ್ಯವಾಗದ ಭಾರತೀಯ…

6 hours ago

ದೆಹಲಿಯಲ್ಲಿ ಬಿಜೆಪಿ ಗೆಲುವು : ಚಿತ್ರದುರ್ಗದಲ್ಲಿ ಕಾರ್ಯಕರ್ತರ ವಿಜಯೋತ್ಸವ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 08…

7 hours ago

ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸುವುದು ನಮ್ಮ ಗುರಿ : ಕಾರೇಹಳ್ಳಿ ಉಲ್ಲಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ.ಫೆ. 08 :…

7 hours ago

ದಾವಣಗೆರೆ ವಿಶ್ವವಿದ್ಯಾಲಯ : ಎಸ್.ಜೆ.ಎಂ. ಕಾಲೇಜಿಗೆ 5 ನೇ ರ‌್ಯಾಂಕ್

ಚಿತ್ರದುರ್ಗ, ಫೆಬ್ರವರಿ. 08 : ದಾವಣಗೆರೆ ವಿಶ್ವವಿದ್ಯಾಲಯವು ನಡೆಸಿದ 2023-24ನೇ ಸಾಲಿನ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ.…

8 hours ago