Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುಗಾದಿ ಹಬ್ಬವು ಜಿಲ್ಲೆಯ ಯುಗದ ಸಮಸ್ಯೆಗಳನ್ನು ಬಗೆಹರಿಸಲಿ : ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ

Facebook
Twitter
Telegram
WhatsApp

ನೇರ ರೈಲು, ಸರ್ಕಾರಿ ಮೆಡಿಕಲ್ ಕಾಲೇಜು, ಭದ್ರಾ ಜಲ ಜಿಲ್ಲೆಯ ಜೀವನಾಡಿಯಾಗಲಿ

ಬಯಲುಸೀಮೆ ಜನರ ದಶಕ ಕನಸು ಈಡೇರಲಿ

ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲು, ಮೆಡಿಕಲ್ ಕಾಲೇಜು ದಶಕದ, ಯುಗದ ಕನಸುಗಳಾಗಿಯೇ ಉಳಿದಿವೆ. ಪ್ರತಿ ವರ್ಷ ಬಜೆಟ್‍ಗೆ ಮುಂಚೆ ಇವುಗಳದೇ ಮಾತು. ಬಜೆಟ್ ನಂತರ ಜಿಲ್ಲೆಯ ಜನರ ಮೂಗಿಗೆ ತುಪ್ಪ ಹಚ್ಚುವ ಕಾರ್ಯ ನಿರಂತರವಾಗಿ ಸಾಗಿದೆ. ಆದರೆ, ಇತ್ತೀಚೆಗೆ ಈ ಮೂರು ಸಮಸ್ಯೆಗಳ ಪರಿಹಾರದಲ್ಲಿ ಒಂದಷ್ಟು ಪ್ರಗತಿ ಸಾಧಿಸುತ್ತಿರುವುದು ಸಮಾಧಾನ ತಂದಿದೆ. ಆದರೆ, ದೊಡ್ಡ ಪ್ರಮಾಣದ ಅಥವ ದಿಡೀರ್ ಪ್ರಗತಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕೃಷಿಗೆ ಒದಗಿದ ಕಷ್ಟ: ಉತ್ತರ ಮತ್ತು ದಕ್ಷಿಣ ಕರ್ನಾಟಕದ ಪ್ರಮುಖ ಕೊಂಡಿಯಾಗಿ ಚಿತ್ರದುರ್ಗ ಜಿಲ್ಲೆಯಿದೆ. ಕೃಷಿ ಇಲ್ಲಿನ ಜನರ ಉದ್ಯೋಗದ ಪ್ರಮುಖ ಮೂಲ. ಜಿಲ್ಲೆಯಲ್ಲಿ ಶೇ.62 ರಷ್ಟು ಕಪ್ಪು ಮಣ್ಣು ಉಳಿದಂತೆ ಶೇ. 38 ರಷ್ಟು ಕೆಂಪು ಮಣ್ಣು ಇದೆ. ಶೇಂಗಾ, ಮೆಕ್ಕೆ ಜೋಳ, ಸೂರ್ಯಕಾಂತಿ, ಜೋಳ ಹಾಗೂ ದ್ವಿದಳ ಧಾನ್ಯಗಳು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಜಿಲ್ಲೆಯಲ್ಲಿ ಒಟ್ಟು 4,29,000 ಹೆಕ್ಟೇರ್ ಭೂಮಿಯಲ್ಲಿ ಕೇವಲ 51,000 ಹೆಕ್ಟೇರ್ ಮಾತ್ರ ಬಿತ್ತನೆಯಾಗುತ್ತಿದೆ. ಮಳೆ ಆಶ್ರಿತ ಬೇಸಾಯ ಪದ್ಧತಿ ಪ್ರಮುಖವಾಗಿ ರೂಢಿಯಲ್ಲಿದೆ. ಮಳೆ ಇದ್ದರೆ ಬೆಳೆ, ಇಲ್ಲವಾದರೆ ಬರ ಎಂಬ ಮಾತು ಸರ್ವಕಾಲೀನ ಸತ್ಯ. ಅಸಮ, ಅಕಾಲಿಕ ಮಳೆಯಿಂದಾಗಿ ರೈತರ ಬದುಕು ಮುಂಗಾರಿನೊಂದಿಗೆ ಜೂಜಾಟದಂತಿದೆ. ನಿರಂತರ ಬರಗಳು ಜನರನ್ನು ಕೃಷಿಯಿಂದ ವಿಮುಖರನ್ನಾಗಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವಕರು ಕೃಷಿಗೆ ಬದಲಾಗಿ ಬೆಂಗಳೂರಿನ ವಾಚ್‍ಮ್ಯಾನ್ ಕೆಲಸ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳ ಯುವಕರು ನಗರಗಳಲ್ಲಿ ಚಿಕ್ಕ ಪುಟ್ಟ ಸಹಾಯಕ ಕಾರ್ಯಗಳಿಗಾಗಿ ಗುಳೆ ಹೋಗುತ್ತಿದ್ದಾರೆ. ಶೇಂಗಾ, ಈರುಳ್ಳಿ, ಟೊಮೆಟೊ ಬೆಳೆ ನಷ್ಟ ಇಲ್ಲಿನ ಜನರಿಗೆ ಮಾಮೂಲಿಯಾದ ಜ್ವಲಂತ ಸಮಸ್ಯೆಗಳಾಗಿವೆ. ಸಾಂಪ್ರದಾಯಿಕ ಬೆಳೆಗಳಿಂದಾಗುವ ನಷ್ಟದಿಂದ ಹೊರಬರಲು ರೈತರು ಹೂವು, ದಾಳಿಂಬೆ, ಪಪ್ಪಾಯಿ ಸೇರಿದಂತೆ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಆದರೂ ನಿರೀಕ್ಷಿತ ಯಶಸ್ಸು ದೊರೆಯುತ್ತಿಲ್ಲ.

ಶೇ. 5.6 ಮಾತ್ರ ನೀರಾವರಿ: ಜಿಲ್ಲೆಯಲ್ಲಿ ನೀರು ಮರೀಚಿಕೆ, ಅದರಲ್ಲಿಯೂ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಬರದ ಹಣೆಪಟ್ಟೆಯನ್ನು ಹೊಂದಿವೆ. ಜಿಲ್ಲೆಯಲ್ಲಿ ಕೇವಲ ಶೇ. 5.6 ರಷ್ಟು ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಉಸ್ತುವಾರಿ ಹೊಂದಿರುವ 166 ಕೆರೆಗಳಿವೆ. ಇವುಗಳಲ್ಲಿ ಶೇ. 5 ರಷ್ಟು ಕೆರೆಗಳಿಗೆ ಮಾತ್ರ ಪ್ರತಿ ವರ್ಷ ನೀರು ಸಂಗ್ರಹವಾಗುತ್ತದೆ. 140 ಕ್ಕೂ ಹೆಚ್ಚು ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬದೇ 15 ವರ್ಷ ಕಳೆದಿವೆ. 10,354 ಬೋರ್‍ವೆಲ್‍ಗಳು ಕಾರ್ಯನಿರ್ವಹಿಸುತ್ತಿವೆ.

ಹೊಳಲ್ಕೆರೆ ತಾಲೂಕಿನಲ್ಲಿ ವಾಡಿಕೆ ಮಳೆಯ ಪ್ರಮಾಣ 668 ಮಿಮೀ ಆಗಿದೆ. ಜಿಲ್ಲೆಯ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾದ ಚಳ್ಳಕೆರೆ ತಾಲೂಕಿನಲ್ಲಿ 457 ಮಿಮೀ ವಾಡಿಕೆ ಮಳೆಯಾಗುತ್ತದೆ. ಕೇಂದ್ರಸರ್ಕಾರ ಅಂತರ್ಜಲ ಮಂಡಳಿಯ ವರದಿಯಂತೆ ಇಡೀ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಅತ್ಯಂತ ಅಪಾಯಕ್ಕಿಳಿದಿದೆ. ಚಳ್ಳಕೆರೆ ತಾಲೂಕಿನಲ್ಲಿ ಶೇ. ಶೇ.52 ಪ್ರದೇಶವು ಅರೆ ಅಪಾಯದ ಪ್ರದೇಶವಾಗಿದೆ. ಶೇ. 47ರಷ್ಟು ಪ್ರದೇಶವು ಅತಿ ಶೋಷಿತ ವರ್ಗಕ್ಕೆ ಸೇರಿದೆ. ಕುಸಿಯುತ್ತಿರುವ ಅಂತರ್ಜಲದಿಂದ ಕೃಷಿ ನಷ್ಟದತ್ತ ಸಾಗುತ್ತಿದೆ. ಅಂತರ್ಜಲದ ಕುಸಿತದಿಂದ ಕುಡಿಯುವ ನೀರಿನಲ್ಲಿ ಫ್ಲೋರಿನ್, ಆರ್ಸೆನಿಕ್, ಸೀಸ ಸೇರಿದಂತೆ ನಾನಾ ವಿಷ ವಸ್ತುಗಳು ಹೆಚ್ಚುತ್ತಿವೆ. ಜಿಲ್ಲೆಗೆ ಯಾವುದೇ ರೀತಿಯ ಮಳೆಯ ನೀರಿನ ಮೂಲಗಳಲ್ಲಿದಿರುವುದು. ಹರಿಯುವ ನೀರಿನ ಸೆಲೆಗಳಾದ ನದಿಗಳು ಇಲ್ಲದಿರುವುದು ಜಿಲ್ಲೆಯ ವಿಷಮ ಪರಿಸ್ಥಿತಿಗೆ ಕಾರಣವಾಗಿದೆ. ಚಿತ್ರದುರ್ಗ, ಚಳ್ಳಕೆರೆ ಸೇರಿ ವಿವಿಧ ಹಳ್ಳಿ, ನಗರ ಪ್ರದೇಶದ ಜನರಿಗೆ ಕುಡಿಯುವ ನೀರೋದಗಿಸುವಹಿರಿಯೂರಿನ ವಾಣಿವಿಲಾಸ ಸಾಗರ ಕೇವಲ ಅದೇ ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆನೀರಾವರಿ ಸೌಲಭ್ಯ ಕಲ್ಪಿಸುವುದಕ್ಕೆಮಾತ್ರ ಸೀಮಿತವಾಗಿದೆ. ಇತ್ತೀಚೆಗೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ಜನರು ದೊಡ್ಡ ಪ್ರಮಾಣದ ಬ್ಯಾರೇಜ್‍ನಿಂದಾಗಿ ಅಂತರ್ಜಲ ಮಟ್ಟದ ಕುಸಿತ ಅಲ್ಪ ಮಟ್ಟಿನ ತಡೆಯಾಗಿದೆ.

ಪ್ರಗತಿಯಾದ ಅಡ್ಡಿಯಾದ ನೀರಿನ ಸಮಸ್ಯೆ: ಚಿತ್ರದುರ್ಗ ಜಿಲ್ಲೆ ಶತಮಾನಗಳಿಂದಲೂ ದೊಡ್ಡ ಪ್ರಮಾಣದ ಪ್ರಗತಿಯನ್ನು ಕಂಡಿಲ್ಲ. ಇದಕ್ಕೆ ಶಾಶ್ವತ ನೀರಿನ ಮೂಲಗಳು ಜಿಲ್ಲೆಯಲ್ಲಿ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಜನ, ಜಾನುವಾರು, ಕೈಗಾರಿಕೆಗಳು ನೆಲೆನಿಂತು ಅಭಿವೃದ್ಧಿಯಾಗಲು ನೀರು ಅತ್ಯಂತ ಅವಶ್ಯಕ. ಜಿಲ್ಲೆಯಲ್ಲಿ ಭಾರೀ ಪ್ರಮಾಣದ ನೀರು ಬಳಸುವ ಬೃಹತ್ ತೋಟಗಾರಿಕೆ, ಕೃಷಿ ಇಲ್ಲ. ದೊಡ್ಡ ಪ್ರಮಾಣದ ನೀರನ್ನು ಬಳಸುವ ಕೈಗಾರಿಕೆಗಳು ಜಿಲ್ಲೆಯಲ್ಲಿಲ್ಲ. ಹೀಗಿದ್ದರೂ ಹೆಚ್ಚಿನ ಪ್ರಮಾಣದ ಬೋರ್‍ವೆಲ್‍ಗಳಿಂದಾಗಿ ಅಂತರ್ಜಲದ ಮಟ್ಟ ಅಪಾಯದ ಅಂಚಿಗೆ ತಲುಪಿದೆ. ಹೀಗಾಗಿ ಜಿಲ್ಲೆಗೆ ಜೀವನಾಡಿಯಾಗುವ ಜಲದ ಮೂಲಗಳು ಅವಶ್ಯವಾಗಿದೆ. ಇತ್ತೀಚೆಗೆ ಉದಯವಾದ ದಾವಣಗೆರೆ ಜಿಲ್ಲೆ ಪ್ರಗತಿಯ ನಾಗಲೋಟದಲ್ಲಿದೆ. ಬೆಂಗಳೂರಿನ ನಂತರ ಮಧ್ಯ ಕರ್ನಾಟಕದ ಪ್ರಮುಖ ನಗರವಾಗಿ ಕಂಗೊಳಿಸುತ್ತಿದೆ. ಕುಡಿಯುವ ನೀರು, ಕೃಷಿಗೆ ಅಗತ್ಯವಾದ ನೀರಾವರಿಯಿಂದಾಗಿ ದಾವಣಗೆರೆ ಬೃಹತ್ ಪ್ರಮಾಣದಲ್ಲಿ ಪ್ರಗತಿಯಾಗಿದೆ. ಆದರೆ ಮದಕರಿನಾಯಕನ ಕಾಲದ ಪರಂಪರೆ, ಇತಿಹಾಸವನ್ನು ಹೊಂದಿರುವ ಚಾರಿತ್ರಿಕ, ಐತಿಹಾಸಿಕ ಜಿಲ್ಲೆಗೆ ಮಾತ್ರ ಕುಡಿಯುವ ನೀರು ಹಾಗೂ ನೀರಾವರಿಗೆ ಅಗತ್ಯವಾದ ನೀರು ನೀಡುವ ಕಾಲ ಕೂಡಿ ಬಂದಿಲ್ಲ. ಹುಸಿ ಭರವಸೆ, ನಿರೀಕ್ಷೆಗಳಿಂದ ಜನರು ಬೇಸತ್ತಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯನ್ನ ಕೇಂದ್ರ ಸರಕಾರದ ಯೋಜನೆ ಎಂದು ಪರಿಗಣಿಸಿದೆ. ಕೇಂದ್ರದ ಯೋಜನೆಯಾಗಿ ಪರಿವರ್ತನೆಯಾದ ನಂತರ ಯೋಜನೆಗೆ ಯಾವಾಗ ಎಷ್ಟು ಹಣ ನೀಡಲಾಗುವುದು ಎನ್ನುವ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಈಗಲಾದರೂ ಭದ್ರೆ ಜಿಲ್ಲೆಯ ಜನರಿಗೆ ಜೀವನಾಡಿಯಾಗಲಿ ಎನ್ನುವುದು ಸಮಸ್ತ ಜನರ ನಿರೀಕ್ಷೆಯಾಗಿದೆ.

ನೇರ ರೈಲು – ಜನರ ಜೀವ ಉಳಿತಾಯದ ಮಾರ್ಗ

ಹೆಚ್ಚುತ್ತಿರುವ ಅಪಘಾತಗಳು ರಸ್ತೆಯ ಮೇಲೆ ಸಂಚರಿಸುವುದಕ್ಕೆ ಹೆದರುವಂತಾಗಿದೆ. ಚಿತ್ರದುರ್ಗ-ದಾವಣಗೆರೆ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತ ಸಂಭವಿಸುತ್ತಿವೆ. ವಾಹನ ದಟ್ಟಣೆ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆಗೆ ಮೆಟ್ರೋ ಒಂದಷ್ಟು ಪರಿಹಾರ ಒದಗಿಸಿದೆ. ಆದರೆ, ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಜನರ ಪಾಲಿಗೆ ಹೆಮ್ಮಾರಿಯಾಗಿ ಕಾಡುತ್ತಿದೆ. ಪ್ರತಿನಿತ್ಯ ಒಂದಲ್ಲ ಒಂದು ಅಪಾಘಾತ ಸಾಮಾನ್ಯವಾಗಿದೆ. ಇದಕ್ಕೆ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಏಕೈಕ ಪರಿಹಾರವಾಗಿದೆ. ಇದರಿಂದಾಗಿ ವಾಹನದಟ್ಟಣೆ ಒಂದಷ್ಟು ಕಡಿಮೆಯಾಗಬಹುದು.

ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳು ಜನ ಸಾಮಾನ್ಯರಿಗೆ ಹೊರೆಯಾಗಿವೆ. ವೈಯುಕ್ತಿಕ ಸಾರಿಗೆಗಿಂತ ಸಾಮೂಹಿಕ ಸಾರಿಗೆ ಹಣ, ಸಮಯ ಹಾಗೂ ಇಂಧನದ ಉಳಿತಾಯದ ಪ್ರಮುಖ ಮೂಲವಾಗಿದೆ. ನೇರ ರೈಲು ಈ ಮಾರ್ಗದಲ್ಲಿ ಚಲಿಸಿದರೆ ಪ್ರತಿನಿತ್ಯ ಸಾವಿರಾರು ಲೀಟರ್ ಇಂಧನ ಉಳಿತಾಯದ ಜತೆಗೆ ಸಮಯದ ಉಳಿತಾಯವಾಗುತ್ತದೆ. ಸಾವಿರಾರು ವಾಹನಗಳು ರಸ್ತೆಗಿಳಿಯುವುದರಿಂದ ಉಂಟಾಗುವ ಸಾವುಗಳ ಸಂಖ್ಯೆ ಸ್ವಲ್ಪವಾದರೂ ಕಡಿಮೆಯಾಗುತ್ತದೆ.

ಸರಕಾರಿ ಮೆಡಿಕಲ್ ಕಾಲೇಜು , ಬಡಜನರ ಆರೋಗ್ಯದ ಬವಣೆಗೆ ಪರಿಹಾರ

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಾಮಾನ್ಯ ಜನರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಹೈಟೆಕ್ ಆಸ್ಪತ್ರೆಗಳು ಉಳ್ಳವರಿಗೆ ಮಾತ್ರ ಎನ್ನುವ ಪರಿಸ್ಥಿತಿ ಇದೆ. ಸರಕಾರದ ವಿಮೆ ಯೋಜನೆಗಳು ಪ್ರತಿ ವರ್ಷ ದಾರಿ ತಪ್ಪುತ್ತಿವೆ. ಒಂದು ವರ್ಷ ಇದ್ದ ಯೋಜನೆ ಮತ್ತೊಂದು ವರ್ಷ ಸ್ಥಗಿತಗೊಂಡಿರುತ್ತದೆ. ಹೀಗಾಗಿ ಕ್ಯಾನ್ಸರ್, ಹೃದಯ ರೋಗ ಸೇರಿದಂತೆ ನಾನಾ ರೋಗಗಳಿಗೆ ದುರ್ಬಲ ವರ್ಗದ ಜನರು ಅಲೆದಾಡುವಂತಾಗಿದೆ. ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭವಾದರೆ ಬಡಜನರಿಗೆ ಗುಣಮಟ್ಟದ ಉತ್ತಮ ಚಿಕಿತ್ಸೆ ದೊರೆಯಲಿದೆ. ಖಾಸಗಿ ಸಹಭಾಗಿತ್ವದ ಕಾಲೇಜು ಅಥವಾ ಪೂರ್ಣ ಪ್ರಮಾಣದ ಸರಕಾರಿ ವೈದ್ಯಕೀಯ ಕಾಲೇಜು ಎಂಬುದರಲ್ಲಿ ಸರಕಾರದ ಮಟ್ಟದಲ್ಲಿದ್ದ ಗೊಂದಲಕ್ಕೆಈ ಬಾರಿಯ ಬಜೆಟ್ ನಲ್ಲಿ ತೆರೆಬಿದ್ದಿದ್ದು, ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಆದರೆ, ಕಾಲೇಜ್ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಒದಗಿಸಿಲ್ಲದಿರುವುದು ಬೇಸರದ ಸಂಗತಿ. ಸರಕಾರಿ ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಭೂಮಿ ಇದ್ದೂ, ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಂಡು ಗುಣಮಟ್ಟದ ಶಿಕ್ಷಣದ ಜತೆಗೆ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂಬುದನ್ನು ಆಳುವ ವರ್ಗ ಮನದಟ್ಟು ಮಾಡಿಕೊಳ್ಳಬೇಕಿದೆ.

ಯುಗಾದಿ ಜಿಲ್ಲೆಯ ಜನರಲ್ಲಿ ಹೊಸ ಭರವಸೆ, ವಿಶ್ವಾಸಗಳನ್ನು ಮೂಡಿಸಲಿ. ಯುಗಾದಿ ಹಬ್ಬ ಹೊಸ ಸಂವತ್ಸರವನ್ನು ಆರಂಭಿಸುವಂತೆ ಜಿಲ್ಲೆಯ ಜನರಿಗೆ ಈ ಮೂರು ಯೋಜನೆಗಳು ಹೊಸ ಪ್ರಗತಿಯ ಹೊಸ ಸಂವತ್ಸರವನ್ನು ಆರಂಭಿಸಲಿ ಎನ್ನುವುದು ಜಿಲ್ಲೆಯ ಜನರ ನಿರೀಕ್ಷೆಯಾಗಿದೆ. ಜನಪ್ರತಿನಿಧಿಗಳು ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆಯ್ಕೆಯಾದ ಜನಪ್ರತಿನಿಧಿಗಳ ಸಮಸ್ಯೆಗೆ ಸ್ಪಂದಿಸಿ ಯೋಜನೆಗಳನ್ನು ಕಾರ್ಯರೂಪಗೊಳಿಸಿದರೆ ಜಿಲ್ಲೆಯ ಜನರ ಜೀವನ ಹೊಸ ಸಂವತ್ಸರಕ್ಕೆ ತೆರೆದುಕೊಳ್ಳಲು ಸಾಧ್ಯವಿದೆ. ದಶಕಗಳಿಂದ ಸೊರಗಿದ ಕೃಷಿ, ಉದ್ಯಮ, ಕೈಗಾರಿಕೆಗಳಿಗೆ ಯುಗಾದಿಯ ಹೊಸ ಚಿಗುರು, ಉತ್ಸಾಹ ದೊರೆಯಲಿ ಎನ್ನುವುದು ಜನರ ಆಶಯವಾಗಿದೆ.

ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ

ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಚಿತ್ರದುರ್ಗ

ಮೊ.ನಂ: 9449510078

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

error: Content is protected !!