ರಾಯಚೂರು: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ಅಪಘಾತಕ್ಕೀಡಾಗಿ ಚಾಲಕ, ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕ್ರೂಶರ್ ವಾಹನದ ಚಾಲಕನಾಗಿದ್ದ 20 ವರ್ಷದ ಶಿವು ಹಾಗೂ ವಿದ್ಯಾರ್ಥಿಗಳಾದ 18 ವರ್ಷದ ಹಯವದನ, 22 ವರ್ಷದ ಸುಜಯೇಂದ್ರ, 20 ವರ್ಷದ ಅಭಿಲಾಶ್ ಸಾವನ್ನಪ್ಪಿದ್ದಾರೆ.
ಸಿಂಧನೂರು ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕ್ರೂಶರ್ ವಾಹನದಲ್ಲಿ ಸುಮಾರು 14 ಜನ ಪ್ರಯಾಣ ಮಾಡ್ತಾ ಇದ್ದರು. ಮಂತ್ರಾಲಯದಿಂದ ಹೊರಟು ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದರು. ಕ್ರೂಶರ್ ಬಹಳ ವೇಗದಲ್ಲಿ ಚಲಿಸುತ್ತಿತ್ತು. ಆದ ಕಾರಣ ಸಿಂಧನೂರು ಹೊರವಲಯದಲ್ಲಿ ಆಕ್ಸಲ್ ಕಟ್ ಆಗಿ ಭೀಕರ ಅಪಘಾತವಾಗಿದೆ. ಕ್ರೂಶರ್ ಮೂರು ಬಾರಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಚಾಲಕ, ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಬಲಿಯಾಗಿದ್ದಾರೆ. ಇನ್ನುಳಿದ ಹತ್ತು ಮಂದಿಗೆ ಗಾಯವಾಗಿದೆ. ತಕ್ಷಣ ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅತಿಯಾದ ವೇಗವೇ ಕಾರಣ ಎಂದು ತಿಳಿದು ಬಂದಿದೆ.
ಇನ್ನು ಘಟನೆ ತಿಳಿದ ಕೂಡಲೇ ಮಂತ್ರಾಲಯ ಸ್ವಾಮಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಸೂಚಿಸಿದ್ದಾರೆ. ಆದಷ್ಟು ಬೇಗ ಗಾಯಾಳುಗಳು ಚೇತರಿಸಿಕೊಳ್ಳಲಿ ಎಂದು ಸ್ವಾಮಿಗಳು ಹಾರೈಸಿದ್ದಾರೆ. ಈ ಸಂಬಂಧ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ವಿದ್ಯಾರ್ಥಿಗಳು ಕೂಡ ಈ ಅಪಘಾತದಲ್ಲಿ ಸಾವನ್ನಪ್ಪಿದ್ದು ಸಹ ವಿದ್ಯಾರ್ಥಿಗಳ ಗೋಳು ನೋಡುವುದಕ್ಕೆ ಆಗುತ್ತಿಲ್ಲ. ನಾಲ್ಕು ಜನ ಈಗಿನ್ನು ಭವಿಷ್ಯ ಕಟ್ಟಿಕೊಳ್ಳುವ ವಯಸ್ಸು. ಆದರೆ ವಿಧಿ ಇಷ್ಟಕ್ಕೆ ಆಯಸ್ಸು ಮುಗಿಸಿದೆ.
ಚಿತ್ರದುರ್ಗ. ಫೆ.22: ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…
ಸುದ್ದಿಒನ್ : ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈ-ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ದೀರ್ಘಕಾಲದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್…
ದಾವಣಗೆರೆ; ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಮೀಣ ಭಾಗದ ಜನ ನಲುಗಿ ಹೋಗಿದ್ದಾರೆ. ಎಷ್ಟೋ ಜನ ತಮ್ಮ ಪ್ರಾಣವನ್ನೇ…
ಬೆಂಗಳೂರು; ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ್ ಬೊಮ್ಮಾಯಿಯವರು ಹಾಗೂ ಇತರೆ…
ಬೆಂಗಳೂರು; ರಾಜ್ಯಪಾಲರು ಇದೀಗ ರಾಜ್ಯ ಸರ್ಕಾರ ನೀಡಿದ್ದ ಮತ್ತೊಂದು ವಿಧೇಯಕವನ್ನು ವಾಪಾಸ್ ಕಳುಹಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ…
ಮೈಸೂರು: ತಾಯಿ ಚಾಮುಂಡಿ ನೋಡಲು ನಿತ್ಯವೂ ನೂರಾರು ಜನ ಭೇಟಿ ನೀಡುತ್ತಾರೆ. ವೀಕೆಂಡ್ ನಲ್ಲಿ ಸಾವಿರಾರು ಭಕ್ತರು…