ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಡಿ. 28 : ಮನಮೋಹನ್ ಸಿಂಗ್‍ರವರು ಸಂಸದರಿಗೆ ಅನುದಾನ ಭಾಗ್ಯ ನೀಡಿದ್ದು, ಅತ್ಯಂತ ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಹಲವು ಟೀಕೆ-ಟಿಪ್ಪಣಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಹನುಮಂತಪ್ಪ ನೆನಪು ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‍ರವರ ನಿಧನದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಣಕಾಸು ಸಚಿವರಾಗಿದ್ದ ಸಂದರ್ಭ ತಮ್ಮದಲ್ಲದ ತಪ್ಪಿಗೆ ಟೀಕೆ ಕೇಳಿ ಬರುತ್ತಿದ್ದಂತೆ ರಾಜೀನಾಮೆ ನೀಡಲು ಮುಂದಾಗಿದ್ದರು ಅವರೊಬ್ಬ ಜಗತ್ತಿನ ಬಹುದೊಡ್ಡ ಆರ್ಥಿಕ ಚಿಂತಕ. ಅವರ ಅವಧಿಯಲ್ಲಿ ಭಾರತ ಆರ್ಥಿಕ ಚೇತರಿಕೆ ಕಂಡಿತು. ಅನೇಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ ವಿಶೇಷ ವ್ಯಕ್ತಿ ಎಂದು ಬಣ್ಣಿಸಿದರು.
ಇಂದು ಶಾಸಕರು, ಸಂಸದರ ನಿಧಿ ಕಾಯ್ದಿರಿಸಿ, ಅವರವರ ಕ್ಷೇತ್ರಗಳಲ್ಲಿ ಒಂದಷ್ಟು ಜನ ಕಲ್ಯಾಣ ಕೆಲಸಗಳಿಗೆ ಅನುದಾನ ವಿನಿಯೋಗವಾಗುವ ಅವಕಾಶ ಸಿಕ್ಕಿದ್ದರೆ ಅದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರ ಶ್ರಮದಿಂದ ಮಾತ್ರ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಕೌಂಟಬಿಲಿಟಿ ‘ಆಫ್ ಅಡ್ಮಿನಿಸ್ಟ್ರೇಷನ್‍ಗೆ ಇಂದಿರಾಗಾಂಧಿ 20 ಅಂಶಗಳನ್ನಿರಿಸಿಕೊಂಡಿದ್ದರು. ಇವರು ಐದು ಅಂಶಗಳನ್ನು ಸೇರ್ಪಡೆ ಮಾಡಿ, 25 ಅಂಶಗಳ ಕಾರ್ಯಕ್ರಮ ಮಾಡಿದರು. ನಂತರ ಇದನ್ನು ಕಾಂಗ್ರೆಸ್ ಪಾರ್ಲಿಮೆಂಟರಿ ಕಮಿಟಿ ಮುಂದೆ ವಿವರಿಸುತ್ತಿದ್ದರು. ಆಡಳಿತದಲ್ಲಿ ಅಕೌಂಟಬಿಲಿಟಿ ‘ಇರಬೇಕು’ ಅಂತ ಹೇಳಿದರು.
ಅವತ್ತು ನಾನು ರಾಜೀವ್ ಗಾಂಧಿಯವರಿಗೆ ಕೇಳಿದೆ. ನಮಗೂ ಅಕೌಂಟಬಲಿಟಿ ಕೇಳ್ತಾರೆ. ಐದು ವರ್ಷ ಕ್ಷೇತ್ರದ ಜನಕ್ಕೆ ಏನು ಮಾಡಿದ್ರಿ ಅಂತ. ಕ್ಷೇತ್ರದ ಜನರಿಗೆ ಏನೂ ಮಾಡಲಿಕ್ಕೆ ಆಗುವುದಿಲ್ಲ, ನಮಗೂ ಒಂದಷ್ಟು ಅನುದಾನೆ ಕೊಡಿ. ಶಾಲಾ ಕೊಠಡಿ, ಸಮುದಾಯಭವನ, ಬಸ್ ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಏನಾದರೊಂದು ಜನಪಯೋಗಿ ಕೆಲಸ ಮಾಡಬಹುದು ಎಂದು ಹೇಳಿದೆ.
ರಾಜೀವ್ ಗಾಂಧಿಯವರಿಗೆ ಇದು ಮನವರಿಕೆಯಾಯಿತಾದರೂ, ನಂತರ ಅವರು ಈ ವಿಷಯಕ್ಕೆ ಸ್ಪಂದಿಸಲಿಲ್ಲ. ಎಚ್.ಹನುಮಂತಪ್ಪ ನಂತರ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‍ರ ಬಳಿ ವಿಷಯ ಪ್ರಸ್ತಾಪಿಸಿದೆ. ನೀವು ಮನಮೋಹನಸಿಂಗ್ ಜೊತೆ ಮಾತನಾಡಿ ಅಂತ ಹೇಳಿದರು. ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಬಳಿ ತೆರಳಿ ನಮಗೆ ಸಂಸದರ ನಿಧಿ ಬೇಕು ಅಂತ ಕೇಳಿದೆ. ಅವರು ಒಂದೇ ಮಾತಿಗೆ ನೋಪ್ರಾಬ್ಲಮ್ ಅಂತ ಹೇಳಿ, ಕರ್ನಾಟಕದ ಮುಖ್ಯಕಾರ್ಯದರ್ಶಿಗೆ ಒಂದು ಪತ್ರ ಬರೆದುಕೊಟ್ಟರು. ಅಂದಿನ ಮುಖ್ಯ ಕಾರ್ಯದರ್ಶಿಗಳು ನೋಡಿ ಕೇಂದ್ರದಿಂದ 40 ಕೋಟಿ ರೂ ತಂದರೆ ನಿಮಗೆ ಕೆಲಸ ಮಾಡಿಸಿಕೊಡ್ತೀವಿ ಅಂತ ಹೇಳಿದರು. ನಾನು ಪುನಃ ಮನಮೋಹನಸಿಂಗ್‍ರ ಬಳಿ ಹೋಗಿ ಕೇಳಿದೆ. ಸರಿ, ಈಗಾಗಲೇ ಅರ್ಧ ಹಣಕಾಸು ವರ್ಷ ಕಳೆದಿದೆ. ಈ ವರ್ಷ ತಲಾ 50 ಲಕ್ಷ ರೂ ನೀಡುತ್ತೇನೆ. ಮುಂದಿನ ಹಣಕಾಸು ವರ್ಷದಿಂದ ಒಂದೊಂದು ಕೋಟಿ ರೂ ಕೊಡುತ್ತೇನೆ ಎಂದು ಹೇಳಿ ಇವತ್ತು ದೇಶದಲ್ಲಿ ಸಂಸದರ, ಶಾಸಕರ ನಿಧಿ ಚಾಲ್ತಿಯಲ್ಲಿದ್ದರೆ ಅದಕ್ಕೆ ನಾನೇ ಸೂತ್ರಧಾರ. ಮನಮೋಹನ್ ಸಿಂಗ್‍ರವರೇ ಇದನ್ನು ಆರಂಭಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವರಾದ ಹೆಚ್.ಅಂಜನೇಯ ಮಾತನಾಡಿ, ಅವರ ಆಡಳಿತದ ಸಮಯದಲ್ಲಿ ಜನತೆ ಕೆಲಸ ಇಲ್ಲದೆ ಗುಳೇ ಹೋಗುತ್ತಿರುವುದನ್ನು ಕಂಡ ಅವರು ಜನರಿಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿ ಮಾಡುವುದರ ಮೂಲಕ ಗ್ರಾಮಾಂತರ ಜನರಿಗೆ ಉದ್ಯೋಗವನ್ನು ನೀಡಿ ಅದಕ್ಕೆ ತಕ್ಕಂತೆ ಕೂಲಿಯನ್ನು ನೀಡುವುದರ ಮೂಲಕ ಜನತೆ ಗುಳೆ ಹೋಗುವುದನ್ನು ತಪ್ಪಿಸಿದ ಕೀರ್ತಿ ಇವರಿಗೆ ಸಲುತ್ತದೆ. ನೆಹರು ನಂತರ ಸಿಂಗ್‍ರವರು ಉತ್ತಮವಾದ ಪ್ರಧಾನಿಯಾಗಿ ಕೆಲಸವನ್ನು ನಿರ್ವಹಿಸಿದರು. 10 ವರ್ಷಗಳ ಕಾಲ ದೇಶವನ್ನು ಆಳುವುದರ ಮೂಲಕ ದೇಶದ ಪ್ರಗತಿಗೆ ಕಾರಣರಾಗಿದ್ದಾರೆ. ಅಮೆರಿಕಾ ದೇಶ ಆರ್ಥಿಕವಾಗಿ ಕೆಂಗೆಟ್ಟಿದ್ಧಾಗ ಅವರು ಸಿಂಗ್ ರವರ ಸಲಹೆಯನ್ನು ತೆಗೆದುಕೊಂಡು ದೇಶವನ್ನು ಮುನ್ನೆಡೆಸಿದರು. ಅವರ ಆಗಲಿಕೆ ದೇಶಕ್ಕೆ ಮಾತ್ರವಲ್ಲದೆ ಪ್ರಪಂಚಕ್ಕೆ ನಷ್ಠವಾಗಿದೆ ಎಂದರು.
ಸರ್ಕಾರದಲ್ಲಿ ನಡೆಯುವ ವಿವಿಧ ರೀತಿಯ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತಿರಲಿಲ್ಲ ಇದನ್ನು ನೀಡುವ ಬಗ್ಗೆ ಸಿಂಗ್‍ರವರು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿ ಮಾಡಿ ಜನರಿಗೆ ಅಗತ್ಯವಾಗಿ ಬೇಕಾದ ಮಾಹಿತಿಯನ್ನು ಪಡೆಯಲು ಅನುಕೂಲವನ್ನು ಮಾಡಿದೆ. ಸಿಂಗ್‍ರವರು ಆರ್ಥಿಕ ತಜ್ಞರಾಗಿದ್ದು ಹಣಕಾಸಿನ ಬಗ್ಗೆ ಮಾತನಾಡುತ್ತಿದ್ದರೂ ಆದರೆ ರಾಜಕೀಯವಾಗಿ ಮಾತನಾಡುತ್ತಿರಲಿಲ್ಲ ಎಂದು ಅಂಜನೇಯ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಇಂದು ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವಾಗಿದ್ದು, ಮಹಾತ್ಮ ಗಾಂಧಿಯವರನ್ನು ಸ್ಮರಣೆ ಮಾಡಬೇಕಿದೆ, ಬೆಳಗಾವಿಯಲ್ಲಿ 1914ರಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶಕ್ಕೆ 100 ವರ್ಷವಾದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆದೆ ಸಿಂಗ್‍ರವರ ನಿಧನದ ಹಿನ್ನಲೆಯಲ್ಲಿ ಅದನ್ನು ಮುಂದೂಡಲಾಗಿದೆ. ಸಿಂಗ್‍ರವರು ಜಾರಿ ಮಾಡಿದ ಕಾಯ್ದೆಯಿಂದಾಗಿ ಹೂರ ರಾಷ್ಟ್ರದವರು ಸಹಾ ನಮ್ಮ ದೇಶದಲ್ಲಿ ವ್ಯಾಪಾರವನ್ನು ಮಾಡಲು ಅವಕಾಶವನ್ನು ಕಲ್ಪಿಸಲಾಯಿತು ಇದು ಮಹತ್ತರವಾದ ಸಾಧನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಡಿಸಿಸಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಮಾಜಿ ಶಾಸಕರಾದ ಉಮಾಪತಿ, ಗ್ಯಾರೆಂಟಿ ಜಿಲ್ಲಾಧ್ಯಕ್ಷರಾದ ಶಿವಣ್ಣ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆಯ ಮಾಜಿ ಅಧ್ಯಕ್ಷ ನಿರಂಜನ ಮೂರ್ತಿ, ಜಿ.ಪಂ.ಮಾಜಿ ಸದಸ್ಯ ನರಸಿಂಹರಾಜು, ಕುಮಾರಗೌಡ, ಮುದಸಿರ್, ಭೂತೇಶ್, ಚೂಟು, ಶಶಾಂಕ್, ನಜ್ಮತಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…