Connect with us

Hi, what are you looking for?

ಪ್ರಮುಖ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಶೇ.11% ತುಟ್ಟಿಭತ್ಯೆ ಮುಖ್ಯಮಂತ್ರಿ ಆದೇಶ : ಧನ್ಯವಾದ ಸಲ್ಲಿಸಿದ ಕೆ ಮಂಜುನಾಥ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.21) :ರಾಜ್ಯ ಸರ್ಕಾರಿ ನೌಕರರಿಗೆ ತಡೆಹಿಡಿಯಲಾಗಿದ್ದ

ಶೇ.11% ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸಲು ಆದೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ
ಚಿತ್ರದುರ್ಗ ಜಿಲ್ಲಾ ನೌಕರರ ಪರವಾಗಿ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಧನ್ಯವಾದ ಸಲ್ಲಿಸಿದ್ದಾರೆ

ಕೋವಿಡ್-19 ಕಾರಣದಿಂದ ದಿನಾಂಕ: 01-01-2020 ರಿಂದ ತಡೆಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಈ ಹಿನ್ನಲೆಯಲ್ಲಿ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ: 01-07-2021 ರಿಂದ ಅನ್ವಯವಾಗುವಂತೆ ಶೇ 11% ತುಟ್ಟಿಭತ್ಯೆನ್ನು ಮಂಜೂರು ಮಾಡಿತ್ತು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಶೇ 11% ತುಟ್ಟಿಭತ್ಯೆನ್ನು ಮಂಜೂರು ಮಾಡಲು ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಿನಾಂಕ: 01-07-2021 ರಿಂದ ಅನ್ವಯಗೊಳ್ಳುವಂತೆ ಬಾಕಿ ಇರುವ ಶೇ 11% ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಆದೇಶಿಸಿದ್ದಾರೆ.

ಈ ಆದೇಶದಿಂದ 6.00 ಲಕ್ಷ ರಾಜ್ಯ ಸರ್ಕಾರಿ ನೌಕರರು, 4.50 ಲಕ್ಷ ಪಿಂಚಣಿದಾರರು, 3.00 ಲಕ್ಷ ನಿಗಮ-ಮಂಡಳಿ ನೌಕರರಿಗೆ ಆರ್ಥಿಕ ಸೌಲಭ್ಯ ದೊರೆಯಲಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶ್ರೀಯುತ ಬಿ.ಎಸ್ ಯಡಿಯೂರಪ್ಪ, ಎಲ್ಲಾ ಸಚಿವರಿಗೆ ಹಾಗೂ ಕರ್ನಾಟಕ ಸರ್ಕಾರದ ಉನ್ನತ ಹಂತದ ಅಧಿಕಾರಿಗಳಿಗೆ, ವಿಶೇಷವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಯವರಿಗೆ, ಮಹಾಪ್ರಧಾನ ಕಾರ್ಯದರ್ಶಿಗಳಾದ ಜಗಧೀಶ್ ಗೌಡಪ್ಪ ಪಾಟೀಲ್‍ರವರಿಗೆ, ರಾಜ್ಯ ಖಜಾಂಚಿಗಳಾದ ಶ್ರೀನಿವಾಸ್‍ರವರಿಗೆ ಹಾಗೂ ಕ್ರೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ

ಚಿತ್ರದುರ್ಗ ಜಿಲ್ಲೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜಿ.ಆರ್, ರಾಜ್ಯ ಪರಿಷತ್ ಸದಸ್ಯರಾದ ಕೆ.ಟಿ.ತಿಮ್ಮಾರೆಡ್ಡಿ ಹಾಗೂ ಜಿಲ್ಲಾ ಸಂಘದ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ತಾಲ್ಲೂಕು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ವೃಂಧ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಾರೆ.

ಈ ಶುಭಸಂದರ್ಭದಲ್ಲಿ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಎನ್.ಪಿ.ಎಸ್ ರದ್ಧತಿ ಹಾಗೂ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸರಿಸಮಾನವಾದ ವೇತನವನ್ನು (CENTRAL EQUAL PAY), ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ(CASHLESS TREATMENT), ಮಂಜೂರು ಮಾಡಿಸಲು ಚಿತ್ರದುರ್ಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಕೆ ಮಂಜುನಾಥ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Latest

Home

  ಸುದ್ದಿಒನ್, ದಾವಣಗೆರೆ, (ಆ.05): ರೈತರಿಗೆ ಕೃಷಿ ಚಟುವಟಿಕೆ ಅತ್ಯವಶ್ಯಕವಾಗಿ ಬೇಕಾಗಿರುವ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಮನವಿ ಮಾಡಿದ್ದಾರೆ. ದೆಹಲಿಯ ಕೃಷಿ ಭವನದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.05) : ಜನಸ್ನೇಹಿಯಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂಬುದು ಚಿತ್ರದುರ್ಗ ಜಿಲ್ಲಾಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಜಿಲ್ಲೆಗೆ ಕಾಲಿಟ್ಟ ದಿನದಿಂದಲೂ ಜನರ ನೋವು ನಲಿವಿಗೆ ತಾಯಿಯಂತೆ ಕಿವಿಯಾಗಿದ್ದಾರೆ. ಮೊಳಕಾಲ್ಮೂರು...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಸಹಜ. ಸಾಕಷ್ಟು ಜನ ರೈತರ ಬೆಳೆ ನಾಶವಾಗಿದೆ. ಇದೀಗ ಮೂಡಿಗೆರೆ ತಾಲೂಕಿನ ಕಾರ್ ಬೈಲ್ ಗ್ರಾಮದಲ್ಲೂ ರೈತ ಬೆಳೆನಾಶವಾಗಿರೋ ಘಟನೆ ನಡೆದಿದೆ. ಕಾರ್ ಬೈಲ್ ಗ್ರಾಮದ ತೋಟವೊಂದಕ್ಕೆ...

ಪ್ರಮುಖ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಕ್ಸ್ಟ್ ಸಿಎಂ ಯಾರಾಗ್ತಾರೆ ಅನ್ನೋ ರೇಸ್ ನಲ್ಲಿ ತೀರಾ ಹತ್ತಿರದಲ್ಲಿ ಕಾಂಪೀಟೇಷನ್ ಕೊಟ್ಟವರು ಅರವಿಂದ್ ಬೆಲ್ಲದ್. ಸಾಕಷ್ಟು ಜನರು ಸಾಲಿನಲ್ಲಿದ್ರು ಅರವಿಂದ್ ಬೆಲ್ಲದ್...

ಪ್ರಮುಖ ಸುದ್ದಿ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 5 ಜನ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ರನ್ನ ನೇಮಕ ಮಾಡಲಾಗಿದೆ. ವಾರ್ತಾ...

ಪ್ರಮುಖ ಸುದ್ದಿ

  ಸುದ್ದಿಒನ್, ಚಿತ್ರದುರ್ಗ, (ಆ.05) : ಹಿಂದುಳಿದ ವರ್ಗಗಳ ನಾಯಕಿ, ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ...

You May Also Like

ಆರೋಗ್ಯ

ಮಾಹಿತಿ: ಮಂಜುನಾಥ ಯಾದವ್ (97417 38979) ಬೇಳೆಕಟ್ಟು ಸಾರು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಎರಡ್ಮೂರು ದಿನ ಕೂಡ ಈ ಸಾಂಬಾರ್ ತಿನ್ನೋದು ಅಂದ್ರೆ ಟೇಸ್ಟೋ ಟೇಸ್ಟೂ..ಆದ್ರೆ ಕೆಲವೊಬ್ರಿಗೆ ಈ ಸಾಂಬಾರ್ ಮಾಡೋಕೆ...

ಪ್ರಮುಖ ಸುದ್ದಿ

ಮುಂಬೈ : ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದಾರೆ. ರಾಜ್ ಕುಂದ್ರಾ ವಿಚಾರಣೆ ನಡೆಯುತ್ತಿದ್ದು, ಒಂದೊಂದೆ ವಿಚಾರಗಳು ಬಯಲಿಗೆ ಬರ್ತಿವೆ. ಇದೀಗ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ರಾಜ್...

ಆರೋಗ್ಯ

ನಮ್ಮ ಸುತ್ತ ಮುತ್ತ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ವಸ್ತುವನ್ನ ನಾವೂ ನೆಗ್ಲೆಕ್ಟ್ ಮಾಡ್ತೀವಿ. ಚಿಕ್ಕವರಿದ್ದಾಗ ಬಾಯಿ ಚಪ್ಪರಿಸಿಕೊಂಡು ತಿನ್ನುವ ಪದಾರ್ಥಗಳನ್ನ ಬೆಳೀತಾ ಬೆಳೀತಾ ಮರೆತೆ ಹೋಗ್ತೀವಿ. ಆದ್ರೆ ಅಂದು ಖುಷಿಗಾಗಿ ತಿನ್ನುವ...

ಪ್ರಮುಖ ಸುದ್ದಿ

ಕಾಬೂಲ್: ಕಂಧರ್ ಪ್ರಾಂತ್ಯದ ಜೀರೊಯ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಹತರಾಗಿದ್ದಾರೆ. ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ...

Copyright © 2021 Suddione. Kannada online news portal

error: Content is protected !!