in ,

ವ್ಯಕ್ತಿಯ ತಲೆಯ ಮೇಲೆ ಟ್ರ್ಯಾಕ್ಟರ್ ಹರಿದರೂ ಬದುಕುಳಿದ : ವೈರಲ್ ಆದ ಅಪಘಾತದ ವಿಡಿಯೋ !

suddione whatsapp group join

ಗಾಂಧಿನಗರ:  ಗುಜರಾತ್ ನ ದಾಹೋಡ್ ನಲ್ಲಿ ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ಬಸ್ಸನ್ನು ಓವರ್‌ಟೇಕ್ ಮಾಡುವಾಗ ಸಭವಿಸಿದ ಅಪಘಾತದಲ್ಲಿ ಸಾವಿನಂಚಿಗೆ ಹೋಗಿ ಬದುಕಿ ಬಂದಿದ್ದಾನೆ. ಇತ್ತೀಚೆಗೆ, ಇಂತಹ ಆಘಾತಕಾರಿ ಘಟನೆ ದಾಹೋಡ್ ನಲ್ಲಿ ನಡೆದಿದೆ.

ಈ ವೇಳೆ ವ್ಯಕ್ತಿಯೊಬ್ಬನ ತಲೆಯ ಮೇಲೆ ಟ್ರ್ಯಾಕ್ಟರ್ ಹತ್ತಿದರೂ, ಆತ ಬದುಕುಳಿದ ಅಚ್ಚರಿ ಮೂಡಿಸಿದ್ದಾನೆ. ಮಂಗಳವಾರ ಮಧ್ಯಾಹ್ನ ದಾಹೋಡ್ ಪ್ರದೇಶದಲ್ಲಿ ಮಹಿಳೆ ಮತ್ತು ಮಗುವಿನೊಂದಿಗೆ ವ್ಯಕ್ತಿಯೊಬ್ಬ ಬೈಕ್ ಚಲಾಯಿಸುತ್ತಿದ್ದ. ರಸ್ತೆಯಲ್ಲಿ ಮಳೆ ನೀರು ಸೇರಿಕೊಂಡಿದ್ದರಿಂದ ಅವರ ಬೈಕ್ ನೀರಿನ ಗುಂಡಿಯಿಂದ ನಿಯಂತ್ರಣ ಕಳೆದುಕೊಂಡಿತು. ಇದರಿಂದ ಬೈಕ್ ನಲ್ಲಿದ್ದ ಮೂವರು ಬಲಕ್ಕೆ ಬಿದ್ದಿದ್ದಾರೆ.

ಅಷ್ಟರಲ್ಲಿ ಬೈಕಿನಲ್ಲಿದ್ದ ಮೂವರು ತಮ್ಮ ಪಕ್ಕದಲ್ಲಿ ಸಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ಕೆಳಗೆ ಬಿದ್ದರು. ಆದರೆ, ಮಹಿಳೆ ಮತ್ತು ಮಗು ಟ್ರಾಕ್ಟರ್ ಟೈರ್ ನಿಂದ ತಪ್ಪಿಸಿಕೊಂಡರು. ಆದರೆ ಬೈಕ್ ಚಲಾಯಿಸುತ್ತಿದ್ದ ಆ ವ್ಯಕ್ತಿಯ ತಲೆಯ ಮೇಲೆ ಟ್ರ್ಯಾಕ್ಟರ್ ಹರಿದಿದೆ. ಅಲ್ಲಿ ನೆರದಿದ್ದವರು ವ್ಯಕ್ತಿ ಸತ್ತನೆಂದು ಭಾವಿಸಿದ್ದರು. ಆದರೆ ಈ ಅಪಘಾತದಲ್ಲಿ ಅದೃಷ್ಟವಶಾತ್ ಆತ ಹೆಲ್ಮೆಟ್ ಧರಿಸಿದ್ದರಿಂದ ಟ್ರ್ಯಾಕ್ಟರ್ ಟೈರ್ ಹತ್ತಿದಾಗ ಹೆಲ್ಮೆಟ್ ಆತನ ಪ್ರಾಣ ಉಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಆಭರಣ ಪ್ರಿಯರಿಗೊಂದು ಶುಭವಾರ್ತೆ : ಕಡಿಮೆಯಾದ ಬಂಗಾರ !

ಈ ರಾಶಿಯವರಿಗೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಏಕೆ?ಎಂಬ ಚಿಂತಾಕ್ರಾಂತರಾಗಿರುವಿರಿ!