ಪಶ್ಚಿಮ ಬಂಗಾಳದಲ್ಲಿ ಕಾರು ಅಪಘಾತದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಆದ್ರೆ ಆ ಕಾರು ಅಪಘಾತ ಮಾಡಿದ್ದು ಬಿಜೆಪಿ ನಾಯಕ ಸುವೆಂದು ಅಧಿಕಾರಿ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಪುರ್ಬ ಮೆದಿನಿಪುರ ಜಿಲ್ಲೆಯ ಚಂಡಿಪುರದಲ್ಲಿ ಈ ದುರ್ಘಟನೆ ನಡೆದಿದೆ. ಶೇಖ್ ಇಸ್ರಫಿಲ್ ಸಾವನ್ನಪ್ಪಿದ್ದಾರೆ.
ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು, ಸುವೇಂದು ಅಧಿಕಾರಿಯವರ ಕಾರು ಗುದ್ದಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬುದನ್ನು ಇನ್ನು ದೃಢಪಡಿಸಿಲ್ಲ. ಆದ್ರೆ ಪ್ರತ್ಯಕ್ಷದರ್ಶಿಗಳ, ಶೇಖ್ ರಸ್ತೆ ಬದಿಯಲ್ಲಿ ನಿಂತಿದ್ದಾಗ ಕಾರು ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಆತ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.
ಇನ್ನು ನಿನ್ನೆ ರಾತ್ರಿ 10.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು ಶೇಖ್ ಬದುಕುಳಿದಿಲ್ಲ. ಆದರೆ ಓಡಾಡುತ್ತಿರುವ ಮಾಹಿತಿ ಪ್ರಕಾರ ಸುವೇಂದು ಅಧಿಕಾರಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಕಾರನ್ನು ನಿಲ್ಲಿಸದೆ ಹಾಗೇ ಹೋಗಿದ್ದಾರೆ ಎನ್ನುತ್ತಿದ್ದಾರೆ.