ಕ್ಯೂ ಮೆಂಟೈನ್ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಥಳಿಸೋದಾ..ಯಪ್ಪಾ..!

suddionenews
1 Min Read

ಬೆಂಗಳೂರು: ಕೆಲವೊಬ್ಬರ ಕೋಪ ಮೂಗ ತುದಿಯಲ್ಲೇ ಇರುತ್ತೆ. ಏನಾದರೂ ಹೇಳಿದ್ರೆ ಅದನ್ನ ಪಾಸಿಟಿವ್ ಆಗಿ ತೆಗೆದುಕೊಳ್ಳೋದೆ ಇಲ್ಲ. ಒಳ್ಳೆಯದ್ದನ್ನೇ ಹೇಳಿದ್ರು ದಾಂಧಲೆ ಮಾಡಿರೋ ಅದೆಷ್ಟೋ ಉದಾಹರಣೆಯ ಘಟನೆಗಳನ್ನು ಕೇಳಿದ್ದೇವೆ. ಇದೀಗ ಸಿಲಿಕಾನ್ ಸಿಟಿಯಲ್ಲೂ ಅಂಥದ್ದೇ ಘಟನೆ ನಡೆದಿದೆ.

ಈ ಘಟನೆ ನಡೆದಿರೋದು ಮೈಕೋ ಲೇಔಟ್ ಪೊಲೀಸ್ವಠಾಣಾ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಒಂದರಲ್ಲಿ. ತರಕಾರಿ ಕೊಳ್ಳುವಾಗ ಹಿಂದೆ ಬರುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬರು ಕ್ಯೂನಲ್ಲಿ ಬರೋದಕ್ಕೆ ಹೇಳಿದ್ದಾರೆ.

ಆ ವ್ಯಕ್ತಿ ಅಷ್ಟಕ್ಕೆ ಸಿಟ್ಟಾಗೋದಾ. ಆ ಮಹಿಳೆಯನ್ನ ಮನಬಂದಂತೆ ನಿಂದಿಸೋಕೆ ಶುರುಮಾಡಿದ್ದಾನೆ. ತಕ್ಷಣ ಆ ಮಹಿಳೆ ವಿಡಿಯೋ ಮಾಡಲು ಹೊರಟಿದ್ದಕ್ಕೆ ಇನ್ನಷ್ಟು ಕೋಪಗೊಂಡು ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಚ್ಚೆತ್ತುಕೊಂಡ ಪೊಲೀಸರು ಕಿಶೋರ್ ಎಂಬಾತನನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *