in

ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡು ಸತ್ತ ವ್ಯಕ್ತಿ..!

suddione whatsapp group join

ಹಾವೇರಿ: ಕೆಲವೊಮ್ಮೆ ಇಂಥ ಘಟನೆಗಳನ್ನ ನಾವೂ ನೀವೂ ಕೇಳಿಯೇ ಇರ್ತೀವಿ. ಹಾವು ರಕ್ಷಿಸುವವರು ಅದೆಷ್ಟೋ ಜನ ಹಾವಿನ ಕೈನಲ್ಲೇ ಕಚ್ಚಿಸಿಕೊಂಡು ಪ್ರಾಣ ಬಿಟ್ಟಿರುವ ಬಗ್ಗೆ. ಇದೀಗ ಅಂಥದ್ದೆ ಘಟನೆ ಹಾವೇರಿಯಲ್ಲಿ ನಡೆದಿದೆ.

ಶಿಗ್ಗಾವಿ ತಾಲೂಕಿನ ತಡಹ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಟ್ಟಿಗೆ ಮಧ್ಯೆ ಅವಿತು ಕುಳಿತಿದ್ದ ನಾಗರ ಹಾವೊಂದನ್ನ ಹಿಡಿಯಲು ಹೋಗಿ ರಾಜು ಕೌದಿ ಎಂಬಾತ ಸಾವನ್ನಪ್ಪಿದ್ದಾನೆ.

ಹಾವು ಹಿಡಿಯಲು ರಾಜು ಕೌದಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಬದಲಿಗೆ ಕೋಲಿನಿಂದ ಹೊಡೆದು ಹೊಡೆದು ಹಿಡಿಯಲು ಯತ್ನಿಸಿದ್ದಾನೆ. ತಲೆಗೆ ಹೊಡೆದಾಗ ಹಾವಿಗೂ ಕೋಪ ಬಂದಿದೆ. ಬಳಿಕ ಕೋಲಿನಿಂದ ಹಾವನ್ನ ಬಗ್ಗಿಸಿ ಹಿಡಿಯಲು ಹೋದಾಗ ಕೈ ಜಾರಿ ಹಾವು ರಾಜು ಕೌದಿಯ ಕೈಗೆ ಕಚ್ಚಿದೆ.

ತಕ್ಷಣ ಹಾವನ್ನ ಬಿಟ್ಟು ದೂರ ಸರಿದ ರಾಜು ಕೌದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರಾಜು ಕೌದಿ ಸಾವನ್ನಪ್ಪಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾವು ಹಿಡಿಯುವ ಮುನ್ನ ಸ್ವಲ್ಪ ಎಚ್ಚರದಿಂದ ಇರುವುದು ತುಂಬಾ ಒಳ್ಳೆಯದು. ಯಾವುದೇ ಪ್ರಾಣಿಯಾಗಲಿ ಹೆದರಿಸಿದರೆ ಹೆದರಿ ಆಕ್ರಮಣ ಮಾಡಲು ಬರುವುದು ಸಹಜ. ಹೀಗಾಗಿ ಇಂಥ ವಿಷಕಾರಿ ಹಾವುಗಳನ್ನ ಸೆರೆಹಿಡಿಯುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಬಳಿದ ಪ್ರಕರಣ : ಪ್ರಚಾರಕ್ಕಾಗಿ ಈ ಕೆಲಸ..!

300 ಹೊಸ ಸೋಂಕಿತರು.. 1 ಸಾವು..!