ಮಾಲತೇಶ್ ಅರಸ್ ಅವರಿಗೆ ದೇವರಾಜ ಅರಸು ಹೆಸರಿನಲ್ಲಿ “ಧ್ವನಿ ಕೊಟ್ಟ ಧಣಿ” ರಾಜ್ಯ ಪ್ರಶಸ್ತಿ ಪ್ರದಾನ

 

ಮೈಸೂರು: ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರ ಹೆಸರಿನಲ್ಲಿ ಮೈಸೂರಿನ ಅನ್ವೇಷಣಾ ಸೇವಾ ಟ್ರಸ್ಟ್ ಕೊಡಮಾಡುವ “ಧ್ವನಿ ಕೊಟ್ಟ ಧಣಿ” ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷರು ಹಾಗೂ ಸಂಶೋಧಕರಾದ ಮಾಲತೇಶ್ ಅರಸ್ ಅವರಿಗೆ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ಅವರು ಪ್ರದಾನ ಮಾಡಿದರು.

ಮೈಸೂರು ನಗರ‌ದ ಜೆ. ಎಲ್. ಬಿ ರಸ್ತೆಯ ದಿ ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಫೆಬ್ರವರಿ 16 ರ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ನಾಡಿನ ಆರು ಜನ ಸಾಧಕರಾದ ಮೈಸೂರಿನ ಹಿರಿಯ ಪತ್ರಕರ್ತ, ಚಿಂತಕ ಟಿ. ಗುರುರಾಜ್, ಸಂಘಟಕ, ಹೋರಾಟಗಾರ ರಮೇಶ್ ಸುರ್ವೆ, ಅಖಿಲಭಾರತ ಅಂಚೆ ನೌಕರರ ಸಂಘ ಅಧ್ಯಕ್ಷರಾದ ಎನ್.ಕೃಷ್ಣ, ಹಾಸನ ಜಿಲ್ಲೆಯ ಖ್ಯಾತ ಯೋಗ ಶಿಕ್ಷಕಿ ಪ್ರೇಮಾ ಮಂಜುನಾಥ್, ಚಿತ್ರದುರ್ಗದ ವಕೀಲರು ಹಾಗೂ ಸಂಶೋಧಕ ಮಾಲತೇಶ್ ಅರಸ್, ಚಿಂತಕ ಹಿರೇನಲ್ಲೂರು ಶಿವು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿಗಳು, ಸರ್ಕಾರದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರೂ, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ, ಕರ್ನಾಟಕ ಸರ್ಕಾರದ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷರಾದ ವಿಜಯಲಕ್ಷ್ಮಿ ಅರಸ್ , ವಿಧಾನ ಪರಿಷತ್ ಸದಸ್ಯರೂ ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷರಾದ ಡಾ.ಡಿ.ತಿಮ್ಮಯ್ಯ, ಟ್ರಸ್ಟ್ ಸ್ಥಾಪಕ ಆರ್ಯ ಅಮರ್‌ನಾಥರಾಜೇ ಅರಸ್, ಅರಸು ಜಾಗೃತಿ ಅಕಾಡೆಮಿ ಉಪಾಧ್ಯಕ್ಷರಾದ ಎಚ್.ಎ. ವೆಂಕಟೇಶ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ.ಎಂ.ಜಿ.ಆರ್. ಅರಸ್ ಉಪಸ್ಥಿತರಿದ್ದರು.

suddionenews

Recent Posts

ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಬಾಂಬ್ ದಾಳಿ : 10 ಸೈನಿಕರು ಸಾವು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನಿ ಸೈನಿಕರ ಬೆಂಗಾವಲು ಪಡೆಯ ಮೇಲೆ…

1 hour ago

ಭೂಮಿಗೆ ಬರುತ್ತಿದ್ದಾರೆ ಸುನೀತಾ ವಿಲಿಯಮ್ಸ್.. ಬಾಹ್ಯಾಕಾಶ ನಿಲ್ದಾಣಕ್ಕೆ ಸೇರಿದ ಕ್ರೂ-10 ತಂಡ : ವಿಡಿಯೋ ನೋಡಿ…!

ಸುದ್ದಿಒನ್ : ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲು ವೇದಿಕೆ ಸಜ್ಜಾಗಿದೆ. ಇಡೀ ವಿಶ್ವವೇ ಕಾಯುತ್ತಿದ್ದ ಸಮಯ ಕೊನೆಗೂ ಬಂದಿದೆ. ಸುನೀತಾ…

2 hours ago

ಚಿತ್ರದುರ್ಗದ ಅನ್ವರ್ ಪಾಷಾಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಮಿಸ್ ; ರಾಜೀನಾಮೆ ಕೊಡ್ತಾರಾ ಜಮೀರ್ ಖಾನ್..?

  ಬೆಂಗಳೂರು, ಮಾರ್ಚ್. 16 : ಕರ್ನಾಟಕ ವಕ್ಫ್ ಬೋರ್ಡ್ ಗೆ ನೂತನವಾಗಿ ಅಧ್ಯಕ್ಷರ ನೇಮಕವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರ…

2 hours ago

ಮಗಳಿಂದ ಡಿಜಿಪಿ ರಾಮಚಂದ್ರ ರಾವ್ ಗೆ ಶಿಕ್ಷೆ ನೀಡಿದ ಸರ್ಕಾರ ; ಸಿಬಿಐ ಮಧ್ಯಪ್ರವೇಶ ಮಾಡುತ್ತಾ..?

ಬೆಂಗಳೂರು; ಚಿನ್ನದ ಸ್ಮಗ್ಲಿಂಗ್ ವಿಚಾರದಲ್ಲಿ ಈಗ ಸಾಕಿದ ಮಗಳಿಂದಾನೇ ತಂದೆಗೂ ಸಂಕಟ ಎದುರಾಗಿದೆ. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಡಿಜಿಪಿ ರಾಮಚಂದ್ರ…

3 hours ago

ಹೊಸದುರ್ಗ ಪೊಲೀಸರ ಕಾರ್ಯಾಚರಣೆ : ಇಬ್ಬರು ಅಂತರ್ ಜಿಲ್ಲಾ ಸರಗಳ್ಳರ ಬಂಧನ : 9 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸುದ್ದಿಒನ್, ಹೊಸದುರ್ಗ, ಮಾರ್ಚ್. 16 : ತಾಲ್ಲೂಕಿನ ಜನರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳರು ಕೊನೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ.…

5 hours ago

ತುಪ್ಪವನ್ನು ಈ ಆಹಾರ ಪದಾರ್ಥಗಳೊಂದಿಗೆ ಬೆರೆಸಬಾರದು…!

ಸುದ್ದಿಒನ್ : ಬಹಳಷ್ಟು ಜನರು ತುಪ್ಪವನ್ನು ಚಪಾತಿ ಮತ್ತು ಬೇಳೆ ಸಾರಿನೊಂದಿಗೆ ಬೆರೆಸಿಕೊಂಡು ತಿನ್ನುತ್ತಾರೆ. ಇದು ಭಕ್ಷ್ಯಗಳ ಪೌಷ್ಟಿಕಾಂಶದ ಮೌಲ್ಯವನ್ನು…

9 hours ago