ಮುಂಬೈ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಮಹಿಳಾ ಸಂಸದೆ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿದ್ದು, ಇವರ ಮಾತುಗಳಿಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಗಾದರೂ ಹೋಗಿ, ಸ್ಮಶಾನಕ್ಕಾದರೂ ಹೋಗಿ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಂಸದೆ ಸುಪ್ರಿಯಾ ಸುಳೆ, ಸಭೆಯೊಂದರಲ್ಲಿ ಮಾತನಾಡುತ್ತಾ ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ ಪಡೆದುಕೊಂಡಿದ್ದ ಬಗ್ಗೆ ತಿಳಿಯಲು, ಅಲ್ಲಿನ ಸಿಎಂ ಭೇಟಿಗೆ ತೆರಳಿದ್ದಾಗ ಅವರು ಸಿಗಲಿಲ್ಲ. ಮಧ್ಯಪ್ರದೇಶದ ಸಿಎಂ ದೆಹಲಿಗೆ ಬಂದು ಕೆಲವರನ್ನು ಭೇಟು ಮಾಡಿದರು. ಅದಾದ ಎರಡೇ ದಿನದಲ್ಲಿ ಸ್ಥಳೀಯ ಚುನಾವಣೆಗೆ ಅವರು ಒಬಿಸಿ ಮೀಸಲಾತಿ ಪಡೆದುಕೊಂಡರು. ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದರು.
ಈ ಸಂಬಂಧ ಮಾತನಾಡಿರುವ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ರಾಜಕೀಯ ಅರ್ಥವಾಗದಿದ್ದರೆ ಮನೆಗೆ ಹೋಗಿ ಅಡು್ಎ ಮಾಡು. ದೆಹಲಿಗಾದರೂ ಹೋಗಿ ಸ್ಮಶಾನಕ್ಕಾದರೂ ಹೋಗಿ, ಆದರೆ ನಮಗೆ ಒಬಿಸಿ ಕೋಟಾ ಕೊಡಿಸಿ. ಲೋಕಸಭಾ ಸದಸ್ಯರಾಗಿದ್ದರೂ ಒಬ್ಬ ಸಿಎಂ ಭೇಟಿ ಮಾಡುವುದು ಹೇಗೆಂದು ನಿಮಗೆ ತಿಳಿದಲ್ಲವಾ ಎಂದಿದ್ದಾರೆ. ಬಿಜೆಪಿ ಅಧ್ಯಕ್ಷನ ಈ ಹೇಳಿಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹಲವರು ಅಧ್ಯಕ್ಷನ ಮೇಲೆ ಹರಿಹಾಯ್ದಿದ್ದಾರೆ. ಹೆಣ್ಣಿಗೆ ಗೌರವ ಕೊಡಿ ಎಂದಿದ್ದಾರೆ.

