ಹುಣ್ಣಿಮೆಗಳಲ್ಲಿಯೇ ಮಾಘ ಹುಣ್ಣಿಮೆ ಬಹಳ ಶ್ರೇಷ್ಠವಾದದ್ದು. ಈ ಮಾಘ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಮಾಘ ಹುಣ್ಣಿಮೆ ಎಂದು ಕರೆಯುತ್ತಾರೆ. ಈ ಮಾಘ ಹುಣ್ಣಿಮೆಯಲ್ಲಿ ಗಂಗಾ ಸ್ನಾನ, ಲಕ್ಷ್ಮೀ ಪೂಜೆ ವಿಶೇಷವಾಗಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಮಾಘ ಹುಣ್ಣಿಮೆಯಂದು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು, ದಾನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
ಈ ದಿನದಂದು ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ, ಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಹುಣ್ಣಿಮೆಯೂ ಮಂಗಳವಾರ, ಫೆಬ್ರವರಿ 11ರ 6.55ಕ್ಕೆ ಆರಂಭವಾಗುತ್ತದೆ. ಫೆಬ್ರವರಿ12 ಅಂದ್ರೆ ಇಂದು ಸಂಜೆ 7.22ಕ್ಕೆ ಕೊನೆಗೊಳ್ಳುತ್ತದೆ. ಮಾಘ ಪೂರ್ಣಿಮೆಯ ದಿನದಂದು, ಬ್ರಹ್ಮ ಮುಹೂರ್ತವು ಬೆಳಿಗ್ಗೆ 5:19 ಕ್ಕೆ ಪ್ರಾರಂಭವಾಗುತ್ತದೆ. ಈ ಶುಭ ಸಮಯ 6:10 ರವರೆಗೆ ಇರುತ್ತದೆ. ಅಮೃತ ಕಾಲ ಬೆಳಿಗ್ಗೆ 5:55 ರಿಂದ 7:35 ರವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಸ್ನಾನ ಮಾಡಬಹುದು, ಆದರೆ ಹಿಂದೂ ಧರ್ಮದಲ್ಲಿ, ಬ್ರಹ್ಮ ಮುಹೂರ್ತವನ್ನು ಹೆಚ್ಚು ಮುಖ್ಯ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ.
ಬಿಳಿ ಬಣ್ಣದ ಬಟ್ಟೆಯನ್ನು ನೀವು ದಾನವಾಗಿ ನೀಡಬೇಕು. ಬಿಳಿ ಬಣ್ಣವು ಲಕ್ಷ್ಮಿ ದೇವಿಗೆ ಪ್ರಿಯವಾದ ಬಣ್ಣವಾಗಿದ್ದು, ಇದನ್ನು ನಿಮ್ಮ ಕೈಯಾರೆ ಸ್ಪರ್ಶಿಸಿ ಬಡವರಿಗೆ, ನಿರ್ಗತಿಕರಿಗೆ ದಾನವಾಗಿ ನೀಡುವುದರಿಂದ ಧನಲಾಭವಾಗುವುದು. ಬಿಳಿ ಬಣ್ಣದ ಎಳ್ಳನ್ನು ದಾನವಾಗಿ ನೀಡಬೇಕು. ಹಣವನ್ನು ಕೂಡ ಈ ದಿನ ದಾನವಾಗಿ ನೀಡಬಹುದು. ಹೀಗೆ ದಾನವಾಗಿ ನೀಡುವುದರಿಂದ ಪಾಪ ಕರ್ಮಗಳು ಕಳೆಯುತ್ತವೆ ಎಂಬ ನಂಬಿಕೆ ಇದೆ.
ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಇದನ್ನು ಕಂಡ ಚಿನ್ನಾಭರಣ ಪ್ರಿಯರು ಇಳಿಕೆಯಾಗುತ್ತೋ ಇಲ್ವೋ ಅಂತ…
ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾದರೆ ಸಾಕು ಎಂದು ಕನವರಿಸುವಾಗಲೇ ಇನ್ವೆಸ್ಟ್ ಕರ್ನಾಟಕ ಸಮಾವೇಶ ಕರ್ನಾಟಕ ನಿರುದ್ಯೋಗಿಗಳಿಗೆ…
ವಿಜಯಪುರ: ಜಿಲ್ಲೆಯ ಜನರನ್ನು ನಡುಗಿಸುವ ಭೀಕರ ಹತ್ಯೆಯೊಂದು ನಡೆದು ಹೋಗಿದೆ. ಭೀಮಾತೀರದ ಹಂತಕ, ರೌಡಿಶೀಟರ್, ಕುಖ್ಯಾತ ನಟೋರಿಯಸ್ ಎನಿಸಿಕೊಂಡಿದ್ದ 50…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 12 : ತಾಲ್ಲೂಕಿನ ತುರುವನೂರು ಗ್ರಾಮ ಕಳೆದ ಕೆಲವು ದಿನಗಳಿಂದ ಬಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ…
ವರದಿ ಮತ್ತು ಫೋಟೋ ಕೃಪೆ ಶ್ರೀಧರ್, ತುರುವನೂರು ಮೊ: 78997 89545 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 :…
ಸುದ್ದಿಒನ್ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ AI ಕ್ರಿಯಾ ಶೃಂಗಸಭೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ…