in

ಮಧು ಬಂಗಾರಪ್ಪ ಹುಟ್ಟುಹಬ್ಬ : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಅಂಧ ಮಕ್ಕಳಿಗೆ ಹಣ್ಣು ವಿತರಣೆ

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮಾ.02) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಮಾಳಪ್ಪನಹಟ್ಟಿ ಸಮೀಪವಿರುವ ತೀಕ್ಷ್ಣ ಅಂಧರ ಪುನಃಶ್ಚೇತನ ಶಾಲೆ ಹಾಗೂ ಕಬೀರಾನಂದಾಶ್ರಮದ ವೃದ್ದಾಶ್ರಮದಲ್ಲಿ ಗುರುವಾರ ಬ್ರೆಡ್ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.

ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಬ್ರೆಡ್ ಹಣ್ಣುಗಳನ್ನು ವಿತರಿಸಿ ಮಾತನಾಡುತ್ತ ಹುಟ್ಟುಹಬ್ಬವೆಂದರೆ ಅದ್ದೂರಿಯಾಗಿ ಆಚರಿಸಿಕೊಳ್ಳುವ ಬದಲು ಅನಾಥ ಅಂಧ ಮಕ್ಕಳು ಹಾಗೂ ವೃದ್ದರ ಜೊತೆ ಆಚರಿಸಿಕೊಳ್ಳುವುದರಲ್ಲಿ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಕೆ.ಪಿ.ಸಿ.ಸಿ. ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಕಿರಣ್‍ಕುಮಾರ್ ಯಾದವ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅನಾಥರು ವೃದ್ದಾಶ್ರಮ ಸೇರುತ್ತಿರುವುದು ಜಾಸ್ತಿಯಾಗುತ್ತಿರುವುದು ನೋವಿನ ಸಂಗತಿ. ಹಾಗಾಗಿ ಮಧು ಬಂಗಾರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಅಂಧರು, ಅನಾಥರಿಗೆ ಹಣ್ಣು ಬ್ರೆಡ್‍ಗಳನ್ನು ವಿತರಿಸುತ್ತಿದ್ದೇವೆ. ಯಾರು ಅನಾಥರಲ್ಲಿ ಪ್ರಕೃತಿ ಎಲ್ಲರನ್ನು ಸಲಹುತ್ತದೆ ಎಂದರು.

ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಹೆಚ್.ಆಂಜನೇಯ, ಜಿಲ್ಲಾ ಉಪಾಧ್ಯಕ್ಷ ವಸಂತ್, ಚಿತ್ರದುರ್ಗ ಬ್ಲಾಕ್ ಅಧ್ಯಕ್ಷ ಚರಣ್‍ಬಾಬು, ಸಿ.ಜಿ.ಓಬಳಪ್ಪ, ತೀಕ್ಷ್ಣ ಅಂಧರ ಪುನಃಶ್ಚೇತನ ಸಂಸ್ಥೆ ಕಾರ್ಯದರ್ಶಿ ಕೌಶಲ್ಯ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ದಿ ಕೆಲಸಗಳಾಗಿವೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಕಳೆದು ಹೋದ ಮೊಬೈಲ್ ಫೋನ್ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮಾಡಿದ್ದೇನು ?