ಹೊಸದಾಗಿ‌ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ ಕೊಟ್ರು ಮಧು ಬಂಗಾರಪ್ಪ..!

ಬೆಂಗಳೂರು; ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕೆಂದರೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವಿತ್ತು. ಇದು ಅದೆಷ್ಟೋ ಪೋಷಕರಿಗೆ ಕಷ್ಟಕರವಾಗಿತ್ತು. ಎರಡ್ಮೂರು ತಿಂಗಳ ಅಂತರವಿದ್ದರು ಆ ಮಕ್ಕಳನ್ನ ಸೇರಿಸಿಕೊಳ್ಳುತ್ತಿರಲಿಲ್ಲ. ಮುಂದಿನ ವರ್ಷದ ಅಷ್ಟರಲ್ಲಿ ಒಂದು ವರ್ಷ ವ್ಯರ್ಥವಾಗುತ್ತದೆ. ಇದು ಪೋಷಕರ ಅಳಲಾಗಿತ್ತು. ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಖುಷಿ ವಿಚಾರವೊಂದನ್ನ ತಿಳಿಸಿದ್ದಾರೆ. ಇದು ಹೊಸದಾಗಿ ಮಕ್ಕಳನ್ನ ಶಾಲೆಗೆ ಸೇರಿಸುವ ಪೋಷಕರಿಗೆ ಸಿಹಿ ಸುದ್ದಿಯಾಗಿದೆ.

ಈ ಸಂಬಂಧ ಸಚಿವರು ಭರವಸೆ‌ ನೀಡಿದ್ದು, ಮುಂದಿನ ಎರಡ್ಮೂರು ದಿನಗಳ ಒಳಗಾಗಿ ನಿರ್ಧಾರ ಆಗಲಿದೆ. ಇಷ್ಟು ದಿನ ಕೋರ್ಟ್ ವಿಚಾರ , ಮಕ್ಕಳು 1ನೇ ತರಗತಿಗೆ ಅಡ್ಮಿಷನ್ ಪಡೆಯುವುದಕ್ಕೆ ಆರು ವರ್ಷ ತುಂಬಿರಬೇಕು ಎಂದು ಹೇಳಲಾಗಿತ್ತು. ಈಗ ಕೋರ್ಟ್ ಬಿಟ್ಟು ರಾಜ್ಯ ಸರ್ಕಾರದ ತೀತ್ಮಾನವೇ ಅಂತಿಮ ಅನ್ನೋದು ಕೂಡ ಇದೆ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮಕ್ಕಳಿಗೆ, ಪೋಷಕರಿಗೆ ತೊಂದರೆಯಾಗಬಾರದು. ಅದರಲ್ಲೂ ಯಾವುದೇ ಮಗುವಿನ ವರ್ಷಗಳು ವೇಸ್ಟ್ ಆಗಬಾರದು. ಈ ಸಂಬಂಧ ಎರಡು ದಿನ ಸಭೆ ಮಾಡಿದ್ದೇವೆ. ಮುಂದಿನ ಎರಡ್ಮೂರಿ ದಿನಗಳ ಒಳಗೆ ಒಳ್ಳೆಯ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿ ಪೋಷಕರಿಗೆ ಕೊಂಚ ನಿರಾಳ ಎನಿಸಿದೆ. ಎಲ್ಕೆಜಿ, ಯುಕೆಜಿ ಶಿಕ್ಷಣ ಮುಗಿದ‌ ಮೇಲೆ ನೇರವಾಗಿ ಒಂದನೇ ತರಗತಿಗೆ ಹೋಗಬೇಕು. ಆದರೆ ಒಂದೆರಡು ದಿನಗಳ ಕಾಲ ಕಡಿಮೆ ಇದ್ದರು ಶಾಲೆಯಲ್ಲಿ ಅಡ್ಮಿಷನ್ ಮಾಡಿಕೊಳ್ಳುವುದಕ್ಕೆ ಅವಕಾಶವೇ‌ ಇರಲಿಲ್ಲ. ಈಗ ಪೋಷಕರಿಗೆ ಸಮಾಧಾನ ತರಿಸಿದೆ. ಈ ರೂಲ್ಸ್ ಆದಷ್ಟು ಬೇಗ ಬರಲಿ ಎಂದೇ ಮಾತಾಡಿಕೊಳ್ಳುತ್ತಿದ್ದಾರೆ.

suddionenews

Recent Posts

ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ, ಬಯಸಿದ್ದೆಲ್ಲಾ ಪಡೆದೇ ಪಡುತ್ತಾರೆ

ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ, ಬಯಸಿದ್ದೆಲ್ಲಾ ಪಡೆದೇ ಪಡುತ್ತಾರೆ, ಈ ರಾಶಿಯವರು ಮದುವೆ ವಿಚಾರಕ್ಕೆ ತಂದೆ ತಾಯಿಂದ ಪ್ರತಿರೋಧ, ಬುಧವಾರದ…

2 hours ago

ದ್ವಿತೀಯ ಪಿಯು ಫಲಿತಾಂಶ ; ದಾವಣಗೆರೆಯಲ್ಲಿ ಕಳೆದ ವರ್ಷಕ್ಕಿಂದ ಕುಸಿದ ರಿಸಲ್ಟ್..!

ದಾವಣಗೆರೆ; ಇಂದು ದ್ವಿತೀಯ ಪಿಯು ಫಲಿತಾಂಶವನ್ನು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಮಕ್ಕಳು ಫೇಲ್…

11 hours ago

ಚಿತ್ರದುರ್ಗ : ಲಕ್ಷ್ಮಮ್ಮ ನಿಧನ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಹಾಗೂ ಛಾಯಾಗ್ರಾಹಕ ಶಂಕರ್ ಇವರ ತಾಯಿ ಲಕ್ಷ್ಮಮ್ಮ…

12 hours ago

ಉತ್ತಮ ಸಾಧನೆಯ ಗರಿ ಸಾಣಿಕೆರೆ ವೇದ ಕಾಲೇಜು ಜಯಭೇರಿ

ಚಳ್ಳಕೆರೆ, ಏಪ್ರಿಲ್. 08 : 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಪ್ರತಿ ವರ್ಷದ ಹಾಗೆ ಈ ಬಾರಿಯೂ…

12 hours ago

ದ್ವಿತೀಯ ಪಿಯುಸಿ ಫಲಿತಾಂಶ : ಚಿತ್ರದುರ್ಗ ಜಿಲ್ಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ…!

ಚಿತ್ರದುರ್ಗ. ಏ.08: ಜಿಲ್ಲೆಯಲ್ಲಿ ಕಳೆದ ಮಾರ್ಚ್ 01 ರಿಂದ 20ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ…

14 hours ago

ಏಪ್ರಿಲ್ 21 ಮತ್ತು 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ : ಕೆ.ರವೀಂದ್ರಶೆಟ್ಟಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…

14 hours ago