Connect with us

Hi, what are you looking for?

ಪ್ರಮುಖ ಸುದ್ದಿ

ದಲಿತ ಹೆಣ್ಣು ಮಕ್ಕಳ ಹತ್ಯೆಗೆ ಮಾದಾರ ಶ್ರೀ ಖಂಡನೆ

ಚಿತ್ರದುರ್ಗ, (ಮೇ.23) : ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ಇಬ್ಬರು ಅಮಾಯಕ ದಲಿತ ಹೆಣ್ಣು ಮಕ್ಕಳ ಮೇಲೆ ಬರ್ಬರ ಅತ್ಯಾಚಾರ ನಡೆಸಿ, ಅತ್ಯಂತ ಹೇಯವಾಗಿ ಕೊಲೆಮಾಡಿದ ಘಟನೆ ನಡೆದು ಒಂದು ವಾರವಾದರೂ ಪೊಲೀಸ್ ಇಲಾಖೆ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸ್ವಾಮೀಜಿ, ಮಾದಿಗ ಸಮಾಜದ 13 ಮತ್ತು 15 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಕಿಡಿಗೇಡಿಗಳ ಗುಂಪೊಂದು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಿಗಿದ್ದಾರೆ. ಆನಂತರ ಇಬ್ಬರು ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಹತ್ತಿರದ ಬಾವಿಗೆ ಬಿಸಾಕಿ ಕೊಲ್ಲಲಾಗಿದೆ. ಇಂತಹ ಹೇಯ ಘಟನೆ ನೆಡೆದು ವಾರವಾದರೂ ಪೊಲೀಸ್ ಇಲಾಖೆ ಕಠಿಣ , ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿಲ್ಲ.

ಗ್ರಾಮದ ಪ್ರಮುಖರು, ಸಂತ್ರಸ್ತರ ಪೋಷಕರ ಜೊತೆ ದೂರವಾಣಿಯಲ್ಲಿ ವಿವರವಾಗಿ ಚರ್ಚೆ ನಡೆಸಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡಲು ಬಂದಾಗ ಸಂತ್ರಸ್ತರ ಪೋಷಕರು ಮೊದಲು ಅತ್ಯಾಚಾರ, ಕೊಲೆ ಮಾಡಿದ ತಪ್ಪಿಸ್ಥರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಿ. ನಿಮ್ಮ ಪರಿಹಾರದಿಂದ ಕಳೆದು ಹೋದ ಹೆಣ್ಣುಮಕ್ಕಳು ನಮಗೆ ವಾಪಸ್ ಬರುವುದಿಲ್ಲ ಎಂದು ದಿಟ್ಟವಾಗಿ ಉತ್ತರಿಸಿದ್ದಾರೆ. ಮಾದಾರ ಚೆನ್ನಯ್ಯ ಗುರುಪೀಠ ಸಂತ್ರಸ್ತ ಪೋಷಕರ ಜೊತೆಗಿದ್ದು, ವಿಜಾಪುರದ ಡಿಸಿ ಹಾಗು ಎಸ್ಪಿ ಅವರಿಗೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಬೇಕು.

ದೆಹಲಿಯ ನಿರ್ಭಯ ಪ್ರಕರಣದ ಹಿನ್ನೆಲೆಯಲ್ಲಿ ಅತ್ಯಾಚಾರದ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು. ಪೊಲೀಸ್ ಇಲಾಖೆ ಮೂವರನ್ನು ಬಂಧಿಸಿರುವುದಾಗಿ ಹೇಳಿದೆಯಾದರು ಯಾವ ವಿವರವನ್ನು ಬಹಿರಂಗಪಡಿಸಿಲ್ಲ. ಗ್ರಾಮದ ಪ್ರಮುಖರ ಮಾಹಿತಿಯಂತೆ ಕಿಡಿಗೇಡಿಗಳ ಗುಂಪಿನಲ್ಲಿ ಮತ್ತೂ ಕೆಲವರಿದ್ದಾರೆ. ಎಲ್ಲರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹ ಪಡಿಸಿದ್ದಾರೆ. ಕೊರೊನಾ ಕಾರಣದಿಂದ ಗ್ರಾಮಕ್ಕೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಸರಿಹೋದ ನಂತರ ಗ್ರಾಮಕ್ಕೆ ಭೇಟಿಕೊಡುವುದಾಗಿ ಪೋಷಕರಿಗೆ ತಿಳಿಸಿರುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Latest

Home

  ಸುದ್ದಿಒನ್, ದಾವಣಗೆರೆ, (ಆ.05): ರೈತರಿಗೆ ಕೃಷಿ ಚಟುವಟಿಕೆ ಅತ್ಯವಶ್ಯಕವಾಗಿ ಬೇಕಾಗಿರುವ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಮನವಿ ಮಾಡಿದ್ದಾರೆ. ದೆಹಲಿಯ ಕೃಷಿ ಭವನದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.05) : ಜನಸ್ನೇಹಿಯಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂಬುದು ಚಿತ್ರದುರ್ಗ ಜಿಲ್ಲಾಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಜಿಲ್ಲೆಗೆ ಕಾಲಿಟ್ಟ ದಿನದಿಂದಲೂ ಜನರ ನೋವು ನಲಿವಿಗೆ ತಾಯಿಯಂತೆ ಕಿವಿಯಾಗಿದ್ದಾರೆ. ಮೊಳಕಾಲ್ಮೂರು...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಸಹಜ. ಸಾಕಷ್ಟು ಜನ ರೈತರ ಬೆಳೆ ನಾಶವಾಗಿದೆ. ಇದೀಗ ಮೂಡಿಗೆರೆ ತಾಲೂಕಿನ ಕಾರ್ ಬೈಲ್ ಗ್ರಾಮದಲ್ಲೂ ರೈತ ಬೆಳೆನಾಶವಾಗಿರೋ ಘಟನೆ ನಡೆದಿದೆ. ಕಾರ್ ಬೈಲ್ ಗ್ರಾಮದ ತೋಟವೊಂದಕ್ಕೆ...

ಪ್ರಮುಖ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೆಕ್ಸ್ಟ್ ಸಿಎಂ ಯಾರಾಗ್ತಾರೆ ಅನ್ನೋ ರೇಸ್ ನಲ್ಲಿ ತೀರಾ ಹತ್ತಿರದಲ್ಲಿ ಕಾಂಪೀಟೇಷನ್ ಕೊಟ್ಟವರು ಅರವಿಂದ್ ಬೆಲ್ಲದ್. ಸಾಕಷ್ಟು ಜನರು ಸಾಲಿನಲ್ಲಿದ್ರು ಅರವಿಂದ್ ಬೆಲ್ಲದ್...

ಪ್ರಮುಖ ಸುದ್ದಿ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 5 ಜನ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ರನ್ನ ನೇಮಕ ಮಾಡಲಾಗಿದೆ. ವಾರ್ತಾ...

ಪ್ರಮುಖ ಸುದ್ದಿ

  ಸುದ್ದಿಒನ್, ಚಿತ್ರದುರ್ಗ, (ಆ.05) : ಹಿಂದುಳಿದ ವರ್ಗಗಳ ನಾಯಕಿ, ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ...

You May Also Like

ಆರೋಗ್ಯ

ಮಾಹಿತಿ: ಮಂಜುನಾಥ ಯಾದವ್ (97417 38979) ಬೇಳೆಕಟ್ಟು ಸಾರು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಎರಡ್ಮೂರು ದಿನ ಕೂಡ ಈ ಸಾಂಬಾರ್ ತಿನ್ನೋದು ಅಂದ್ರೆ ಟೇಸ್ಟೋ ಟೇಸ್ಟೂ..ಆದ್ರೆ ಕೆಲವೊಬ್ರಿಗೆ ಈ ಸಾಂಬಾರ್ ಮಾಡೋಕೆ...

ಪ್ರಮುಖ ಸುದ್ದಿ

ಮುಂಬೈ : ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸರ ವಶದಲ್ಲಿದ್ದಾರೆ. ರಾಜ್ ಕುಂದ್ರಾ ವಿಚಾರಣೆ ನಡೆಯುತ್ತಿದ್ದು, ಒಂದೊಂದೆ ವಿಚಾರಗಳು ಬಯಲಿಗೆ ಬರ್ತಿವೆ. ಇದೀಗ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ರಾಜ್...

ಆರೋಗ್ಯ

ನಮ್ಮ ಸುತ್ತ ಮುತ್ತ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ವಸ್ತುವನ್ನ ನಾವೂ ನೆಗ್ಲೆಕ್ಟ್ ಮಾಡ್ತೀವಿ. ಚಿಕ್ಕವರಿದ್ದಾಗ ಬಾಯಿ ಚಪ್ಪರಿಸಿಕೊಂಡು ತಿನ್ನುವ ಪದಾರ್ಥಗಳನ್ನ ಬೆಳೀತಾ ಬೆಳೀತಾ ಮರೆತೆ ಹೋಗ್ತೀವಿ. ಆದ್ರೆ ಅಂದು ಖುಷಿಗಾಗಿ ತಿನ್ನುವ...

ಪ್ರಮುಖ ಸುದ್ದಿ

ಕಾಬೂಲ್: ಕಂಧರ್ ಪ್ರಾಂತ್ಯದ ಜೀರೊಯ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಹತರಾಗಿದ್ದಾರೆ. ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ...

Copyright © 2021 Suddione. Kannada online news portal

error: Content is protected !!