ಚಿತ್ರದುರ್ಗ, (ಫೆ.20) : ತಾಲ್ಲೂಕಿನ ಯಳಗೋಡು ಗ್ರಾಮದ ನಿವಾಸಿ ಎಂ. ಟಿ. ತಿಪ್ಪೇಸ್ವಾಮಿ(78) ಅನಾರೋಗ್ಯದಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದರು.
ಮೃತರು ಚಿತ್ರದುರ್ಗ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರು ಹಾಗೂ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರೂ ಆದ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ ಅವರ ಸಹೋದರರಾಗಿದ್ದು, ಅವರಿಗೆ
ಪತ್ನಿ, ಓರ್ವ ಗಂಡು ಮಗ, ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಯಳಗೋಡಿನಲ್ಲಿ ಇಂದು(ಸೋಮವಾರ) ಮಧ್ಯಾನ್ಹ 1 ಗಂಟೆ ನಂತರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
GIPHY App Key not set. Please check settings