in

ನಾನು ಪ್ರೀತಿಸುತ್ತಿದ್ದೇನೆ..ನೀನು ಪ್ರೀತಿಸಲೇಬೇಕೆಂದವ ಈಗ ಜೈಲಿನಲ್ಲಿ : ಒಂದು ವರ್ಷ ಶಿಕ್ಷೆ..!

suddione whatsapp group join

ಚಾಮರಾಜನಗರ: ಆತನಿಗೆ 20 ವರ್ಷ..ಆಕೆಗಿನ್ನು 16 ವರ್ಷ..ಆತನಿಗೆ ಹುಟ್ಟಿರೋ ಪ್ರೀತಿಯನ್ನ ಆಕೆಯ ಮೇಲೆ ಬಲವಂತವಾಗಿ ಹೇರಲು ಹೋದ, ಪ್ರೀತಿಸಲೇ ಬೇಕೆಂದು ಲೈಂಗಿಕ ದೌರ್ಜನ್ಯಕ್ಕು ಮುಂದಾದ..ಈಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಯಿತು.

ಹೌದು, ಈ ಘಟನೆ ನಡೆದಿರುವುದು ಚಾಮರಾಜನಗರದಲ್ಲಿ. ತಾಲೂಕಿನ ಲಿಂಗಾರಾಜಪುರದ ಪ್ರಸಾದ್ ಅದೇ ಗ್ರಾಮದ 16 ವರ್ಷದ ಬಾಲಕಿಯನ್ನ ಪ್ರೀತಿಸುತ್ತಿದ್ದನಂತೆ. ಆಕೆ ಮನೆ ಮುಂದೆ ನಿಂತಿದ್ದಾಗ, ನಾನು ನಿನ್ನ ಪ್ರೀತಿಸುತ್ತಿದ್ದೇನೆ ಎಂದಿದ್ದಾನೆ. ಆ ಬಾಲಕಿ ಒಪ್ಪಿಲ್ಲ. ಆ ಬಳಿಕ ಅಲ್ಲೆ ಇದ್ದ ಕಟ್ಟಡಕ್ಕೆ ಎಳೆದುಕೊಂಡು ಹೋಗಿ ಲೈಂಗಿನ ದೌರ್ಜನ್ಯ ನಡೆಸಿದ್ದಾನೆ. ಈ ಘಟನೆ ಸಂಬಂಧ ಪ್ರಸಾದ್ ಗೆ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯ ಒಂದು ವರ್ಷ ಶಿಕ್ಷೆ ವಿಧಿಸಿದೆ.

ಬಾಲಕಿಯ ತಂದೆ ಕೊಟ್ಟ ದೂರಿನನ್ವಯ, ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ತಪ್ಪು ಸಾಭೀತಾಗಿದ್ದು, ಇದೀಗ ಆ ಹುಡುಗನಿಗೆ ಶಿಕ್ಷೆ ವಿಧಿಸಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮನೆಯಿಂದ ಹೊರಡುವ ಮುನ್ನ ಬ್ಯಾಗಲ್ಲಿರಲಿ ಒಂದು ಛತ್ರಿ : ಇನ್ನೆರಡು ದಿನ ಮಳೆ ಗ್ಯಾರಂಟಿ

ಮನೆ ಮನೆಗೂ ಪತ್ರಿಕೆ ತಲುಪಿಸುವವರಿಗೆ ಸಾಮಾಜಿಕ ಭದ್ರತೆಯ ಭರವಸೆ ನೀಡಿದ ಸಚಿವ