ಬೆಂಗಳೂರು: ರವಿ ಡಿ ಚನ್ನಣ್ಣನವರ್ ಸಹೋದ ರಾಘವೇಂದ್ರ ಡಿ ಚನ್ನಣ್ಣನವರ್ ಮೇಲೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ನನ್ನನ್ನು ಮದುವೆಯಾದ ಒಂದೇ ವರ್ಷದಲ್ಲಿ ಬಿಟ್ಟು ಹೋಗಿ ಮತ್ತೊಂದು ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ರೋಜಾ ಎಂಬುವವರು ಆರೋಪ ಮಾಡಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಕಮುಷನರ್ ಹಾಗೂ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿರುವ ಮಹಿಳೆ, ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮದುವೆ ಮಾಡಿದ್ದರು. ಆಗಾಗ ನಮ್ಮ ತಂದೆಯ ಬಳಿ ಹಣ ಕಿತ್ತುಕೊಂಡು ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ . ಮಾನಸಿಕವಾಗಿ, ದೈಹಿಕವಾಗಿ ತುಂಬಾ ನೋವು ಕೊಟ್ಟಿದ್ದಾರೆ. ಅನೈತಿಕ ಸಂಬಂಧ ಇಟ್ಟುಕೊಂಡಿರುವ ಇನ್ನೊಬ್ಬಳ ಜೊತೆಗೆ ನಾನು ಇರಬೇಕಂತೆ. ರವಿ ಚನ್ನಣ್ಣನವರ್ ಮಗಳೋ, ತಂಗಿಯೋ ಆಗಿದ್ದರೆ ಈ ಮಾತು ಹೇಳುತ್ತಿದ್ದರಾ ಎಂದು ರೋಜಾ ಕಣ್ಣೀರು ಹಾಕಿದ್ದಾರೆ.
ಇನ್ನು ರೋಜಾ ತಂದೆ ಲೋಕೇಶ್ ಮಾತನಾಡಿ, ಈ ವಿಚಾರವಾಗಿ ವಾಲ್ಮೀಕಿ ಪೀಠದ ಸ್ವಾಮೀಜಿ ಮಾತುಕತೆಗೆ ಕರೆದಿದ್ದರು. ಆಗ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಮಾತುಕತೆ ನಡೆದಿತ್ತು. ಅಲ್ಲಿಗೆ ರವಿ ಡಿ ಚನ್ನಣ್ಣನವರ್ ಕೂಡ ಬಂದಿದ್ದರು. ಸ್ವಾಮೀಜಿಗಳ ಮುಂದೆಯೇ ಹೊಂದಾಣಿಕೆ ಮಾಡಿಕೊಂಡು ಹೋಗಿದ್ದರು. ವರದಕ್ಷಿಣೆ ಕೂಡ ಕೊಟ್ಟಿದ್ದೇವೆ. ಇಲ್ಲ ಎಂಬುದನ್ನು ರವಿ ಡಿ ಚನ್ನಣ್ಣನವರ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ನೋಡೋಣಾ ಎಂದಿದ್ದಾರೆ.






GIPHY App Key not set. Please check settings