ಚಿತ್ರದುರ್ಗ, (ಮೇ.03): ವ್ಯಕ್ತಿಯೊಬ್ಬರಿಂದ ಇ-ಸ್ವತ್ತು (e-swathu) ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟು, ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿ.ಡಿ.ಓ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ನಡೆದಿದೆ.
ಹೊಸದುರ್ಗ ತಾಲ್ಲೂಕಿನ ದೊಡ್ಡ ಕಿಟ್ಟದಹಳ್ಳಿ ಗ್ರಾಮ ಪಂಚಾಯ್ತಿಯ ಪಿ.ಡಿ.ಓ ನರಸಿಂಹಪ್ಪ ಬಂಧಿತ ಆರೋಪಿ.
ಹೊಸದುರ್ಗ ತಾಲ್ಲೂಕಿನ ಸಣ್ಣಕಿಟ್ಟದಹಳ್ಳಿ ಗ್ರಾಮದ ರಾಜು ಅವರ ಸಹೋದರ
ಎನ್.ಮಹಾಲಿಂಗಪ್ಪ ಇವರ ಮನೆಯ ಇ-ಸ್ವತ್ತು ಮಾಡಿಕೊಡಲು, ಪಿ.ಡಿ.ಓ ನರಸಿಂಹಪ್ಪ ರೂ.5,000/- ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ರಾಜು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರಂತೆ ಇಂದು (03-05-2003) ರಂದು ಹೊಸದುರ್ಗ ಟೌನ್‌ನಲ್ಲಿರುವ ಒಂದು ಖಾಸಗಿ ಕಂಪ್ಯೂಟರ್ ಅಂಗಡಿಯಲ್ಲಿ ಎನ್.ರಾಜು ಇವರಿಂದ ಲಂಚದ ಹಣ ರೂ.5,000/-ಗಳನ್ನು ಪಡೆಯುವಾಗ ಪಿಡಿಓ ನರಸಿಂಹಪ್ಪನನ್ನು ಸಿಕ್ಕಿಬಿದ್ದಿರುತ್ತಾನೆ. ಹಣವನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿ ಬಂಧಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಆಪಾದಿತರನ್ನು ಬಂಧಿಸಲಾಗಿರುತ್ತದೆ.
ಚಿತ್ರದುರ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ.ಎನ್.ಮೃತ್ಯುಂಜಯ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಶ್ರೀಮತಿ ವೈ.ಎಸ್ ಶಿಲ್ಪಾ, ಶ್ರೀ ಆರ್.ವಸಂತ ಕುಮಾರ್ ಮತ್ತು ಶ್ರೀಮತಿ ಬಿ.ಕೆ.ಲತಾ ಹಾಗೂ ಮೊಲೀಸ್ ಸಿಬ್ಬಂದಿಗಳಾದ ಶ್ರೀ ಜೆ.ಎಂ.ತಿಪ್ಪೇಸ್ವಾಮಿ, ಸಿ.ಹೆಚ್.ಸಿ, ಶ್ರೀ ಹೆಚ್.ಶ್ರೀನಿವಾಸ, ಸಿ.ಹೆಚ್.ಸಿ., ಶ್ರೀಮತಿ ಎಸ್.ಆರ್.ಮುಷ್ಟ, ಮ.ಹೆಚ್.ಸಿ., ಶ್ರೀ ಎಲ್.ಜಿ.ಸತೀಶ, ಸಿಪಿಸಿ, ಶ್ರೀ ಜಿ.ಎನ್.ಸಂತೋಷ್ ಕುಮಾರ್, ಸಿಪಿಸಿ ಶ್ರೀ ಎಂ.ವೀರೇಶ್, ಸಿಪಿಸಿ, ಶ್ರೀ ಆರ್.ವೆಂಕಟೇಶ್‌ಕುಮಾರ್, ಎಪಿಸಿ, ಶ್ರೀ ಟಿ.ವಿ.ಸಂತೋಷ್, ಎಪಿಸಿ ಶ್ರೀ ಡಿ.ಮಾರುತಿ, ಎಪಿಸಿ ಮತ್ತು ಶ್ರೀ ಎನ್.ಎಲ್.ಶ್ರೀಪತಿ, ಎಪಿಸಿ ಇವರುಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.