ಕಲುಷಿತವಾಗುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯ : ಕೊರ್ಲಕುಂಟೆ ತಿಪ್ಪೇಸ್ವಾಮಿ

ವರದಿ ಮತ್ತು ಫೋಟೋ ಕೃಪೆ                                        ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್,  ಚಳ್ಳಕೆರೆ, ಡಿಸೆಂಬರ್. 28 : ಕೆಲ ಭೀಕರ ಕೃತ್ಯಗಳಿಂದ ಕಲುಷಿತವಾಗುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯ ಇದೆ ಎಂದು ಕನ್ನಡ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರು ಹಾಗೂ ಸಾಹಿತಿಗಳಾ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡದ್ದ ಕುವೆಂಪು ಜನ್ನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜವನ್ನು ನೋಡಬೇಕಿದೆ ಎಂದು ಬಯಸಿದ ಮಹನೀಯರ ಚಿಂತನೆಯನ್ನು ಅನಾವರಣ ಮಾಡುವ ಜಾಗೃತಿ ಬೆಳೆಯಬೇಕಿದೆ ಎಂದರು.

ಚಳ್ಳಕೆರೆ ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ .ಕುವೆಂಪು ಅವರಿಗೆ ವಿದ್ಯಾ ಗುರುಗಳಾಗಿದ್ದ ತಳುಕಿನ ವೆಂಕಣ್ಣಯ್ಯ ನೆಲೆಯಲ್ಲಿ ಶಿಷ್ಯ ಕುವೆಂಪು ಅವರ ಸಾಹಿತ್ಯ ಕುರಿತು ಮಾತನಾಡುವುದು ಒಂದು ಇತಿಹಾಸ ಅನಿಸುತ್ತದೆ. ಸಮಾಜದ ಮಹನೀಯರ ಜಯಂತಿ ಕಾರ್ಯಕ್ರಮಗಳು ಕೇವಲ ಸಾಂಕೇತಿಕ ಆಗಬಾರದು. ಬಸವಣ್ಣರ ವಚನ,ಕುವೆಂಪು ಅವರ ಕವನ, ಕನಕದಾಸರ ಕೀರ್ತನೆ, ಡಿ.ವಿ.ಗುಂಡಪ್ಪರ ತತ್ವಗಳನ್ನು ಮನನ ಮಾಡಿಕೊಂಡು ಅಭಿವ್ಯಕ್ತ ಪಡಿಸಬೇಕು. ಸಾಹಿತ್ಯ ವಿಚಾರವನ್ನು ಮನ ಮತ್ತು ಮನೆಗಳಿಗೆ ಕೊಂಡೊಯ್ಯವ ಕೆಲಸ ಆಗಬೇಕು. ಮನೆಯಲ್ಲಿ ಕವಿಗಳ ಬರಹ ಕುರಿತು ಮಾತನಾಡುವ ಸಂಸ್ಕೃತಿ ಬೆಳೆಯಬೇಕು. ಗಂಡು ಬೆಟ್ಟಿದ ಚಿತ್ರದುರ್ಗ ವೀರ ಶೌರ್ಯವನ್ನು ದುರ್ಗಾಸ್ತಮಾನ ಕೃತಿಯಲ್ಲಿ ತರಾಸು ದಾಖಲೆ ಮಾಡಿದ್ದಾರೆ. ಆದರೆ, ಎಷ್ಟು ಮನೆಗಳ ಆ ಕೃತಿ ಕಾಣಲು ಸಾಧ್ಯ. ಇಂತಹ ನಿರ್ಲಕ್ಷ್ಯ ಸಂಬಂಧದಿಂದ ಸ್ಥಳೀಯ ವಿಚಾರ ಸಂಪತ್ತುನಿಂದ ದೂರವಾಗುತ್ತೇವೆ ಎಂದು ಹೇಳಿದರು.

ಬುದ್ದ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಪ್ರಾದೇಶಿಕವಾದ ಜನಜೀವನದ ಸಾಹಿತ್ಯ ರಚನೆಯಲ್ಲಿ ತಳಕು ಮತ್ತು ಬೆಳೆಗೆರೆ ಮನೆತನಗಳ ಸೇವೆ ಅನನ್ಯವಾಗಿದೆ. ವಿಶ್ವಮಾನವನಾಗಿ ಹುಟ್ಟುವ ಮಗು, ಅಲ್ಪನಾಗುವ ಪರಿಸ್ಥಿತಿಗೆ ಸಮಾಜದ ವ್ಯವಸ್ಥೆ ಕಾರಣವಾಗುತ್ತಿದೆ. ಕುವೆಂಪು ಬರಹ ಸಮಾನತೆಯ ರೂಪಕವಾಗಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿದರು.

ಕೆಪಿಸಿಸಿ ಕರುಶಲ ವಿಭಾಗ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕವಯತ್ರಿ ಶಬ್ರಿನ ಮಹಮ್ಮದ್ ಅಲಿ, ಮಾತನಾಡಿದರು.

ಬಿ. ಫರಿದ್ ಖಾನ್, ಬನಶ್ರೀ ಮಂಜುಳಮ್ಮ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ,ಗೋಪನಹಳ್ಳಿ ಶಿವಣ್ಣ, ಬೆಳೆಗೆರೆ ಸುರೇಶ್,ಎಚ್. ಲಂಕಪ್ಪ,ಜಾಲಿ ಮಂಜು, ಆರ್. ದ್ಯಾಮರಾಜ್, ಒನಕೆ ಒಬವ್ವ ವೇದಿಕೆ ಅಧ್ಯಕ್ಷ ಮಾರುತಿ, ಎನ್. ಕುಶ, ಯತೀಶ,,ವೆಂಕಿ,  ಚಂದ್ರಶೇಖರ್, ದುರ್ಗಾವರ ತಿಪ್ಪೇಸ್ವಾಮಿ, ರವಿವರ್ಮ, ಮುತ್ತುರಾಜ್ ಮತ್ತಿತರರಿದ್ದರು.

suddionenews

Recent Posts

ಇಂದಿನಿಂದ ಬಜೆಟ್ ಅಧಿವೇಶನ ಆರಂಭ

  ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…

1 hour ago

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

4 hours ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

5 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

14 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

14 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

14 hours ago