3 ದಿನಗಳ ಕಾಲ ಮಡಿಕೇರಿಯಲ್ಲಿ ಮದ್ಯ ಮಾರಾಟ ಬಂದ್..!

suddionenews
1 Min Read

ಮಡಿಕೇರಿ: ನಾಡದೇವತೆ ದಸರಾ ಹಬ್ಬ ಹಾಗೂ ಕಾವೇರಿ ತೀರ್ಥೋದ್ಭವ ಇರುವ ಕಾರಣ ಕೊಡಗಿನಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಅಕ್ಟೋಬರ್ 14 & 15 ರಂದು ದಸರಾ ಹಬ್ಬ ಇರುವ ಪ್ರಯುಕ್ತ ಹಾಗೇ ಅಕ್ಟೋಬರ್ 17 ರಂದು ತೀರ್ಥೋದ್ಭವ ನಡೆಯಲಿದೆ. ಹೀಗಾಗಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಆದೇಶ ಹೊರಡಿಸಿದ್ದಾರೆ. ದಸರಾ ಎಂದಾಕ್ಷಣಾ ಮೈಸೂರಿನಲ್ಲಿ ಅದ್ಧೂರಿಯಾಗಿ ಚಾಮುಂಡಿ ತಾಯಿಯ ಮೆರವಣಿಗೆ ಹೊರಟಾಗ ಹಲವು ಜಿಲ್ಲೆಗಳಲ್ಲೂ ದಸರಾ ಮೆರವಣಿಗೆ ಹೊರಡಲಿದೆ. ಅದರಲ್ಲಿ ಮಡಿಕೇರಿ ದಸರಾ ಕೂಡ ಒಂದು.

ಈ ಬಾರಿ ಮಡಿಕೇರಿ ಗೋಣಿಕೊಪ್ಪದಲ್ಲಿ ಅದ್ಧೂರಿ ದಸರಾ ಆಚರಣೆಗೆ ಭಕ್ತಾಧಿಗಳು ಸಜ್ಜಾಗಿದ್ದಾರೆ. ಹೀಗಾಗಿ ಗ್ರಾಮಗಳ 10 ಕಿ.ಮೀ ವ್ಯಾಪ್ತಿಯೊಳಗೆ ಮದ್ಯ ಮಾರಾಟ ಮಾಡೋದನ್ನ ನಿಷೇಧಿಸಲಾಗಿದೆ. ಹಬ್ಬಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಡೆಸಲು ತೀರ್ಮಾನಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *