Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಠ್ಯ ಪುಸ್ತಕ ಸಮಿತಿ ವಿರ್ಸಜಿಸಿ ಯೋಗ್ಯರನ್ನು ನೇಮಿಸಲಿ : ಸಾಹಿತಿ ಬಿ.ಎಲ್.ವೇಣು ಆಗ್ರಹ 

Facebook
Twitter
Telegram
WhatsApp

ಚಿತ್ರದುರ್ಗ, (ಮೇ.28) : ನಾಡಿನ ಶ್ರೇಷ್ಠ ಸಾಹಿತಿ, ಕಾದಂಬರಿಕಾರ ಡಾ.ಬಿ.ಎಲ್.ವೇಣುಅವರ ಹುಟ್ಟು ಹಬ್ಬವನ್ನುಅವರ ಮನೆಯಂಗಳದಲ್ಲಿ ಶುಕ್ರವಾರದಂದು ಸರಳವಾಗಿ ಆಚರಿಸಲಾಯಿತು.

ಸೃಷ್ಠಿಸಾಗಗರ ಪ್ರಕಾಶನ ಹಾಗೂ ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎಲ್.ವೇಣು ಅವರ ಅಭಿಮಾನಿಗಳು ಪಾಲ್ಗೊಂಡು, ವೇಣು ಅವರಿಗೆ ಶುಭಕೋರಿದರು. ವೇಣು ಅವರ ಮನೆಯಂಗಳದಲ್ಲಿ ಸೇರಿದ್ದ ಹಲವಾರು  ಅಭಿಮಾನಿಗಳು ಸಿಹಿಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಬಿ.ಎಲ್.ವೇಣು, ಎಳೆ ಮಕ್ಕಳ ಮನಸ್ಸಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುವುದನ್ನು ಸರ್ಕಾರ ಈ ಕೂಡಲೇ ಬಿಡಬೇಕು. ಜೊತೆಗೆ ಈಗಿನ ಪಠ್ಯ ಪುಸ್ತಕ ಸಮಿತಿಯನ್ನು ವಿಸರ್ಜನೆ ಮಾಡಿ ಯೋಗ್ಯರನ್ನು ನೇಮಕ ಮಾಡಬೇಕುಎಂದುಆಗ್ರಹಿಸಿದರು.

ನಾವು ಉಣ್ಣುವುದನ್ನು, ಉಡುವುದನ್ನು ನಿರ್ಧರಿಸಲು ಹೊರಟ ಮೇಲ್ಜಾತಿಯವರೀಗ ನಮ್ಮ ಮಕ್ಕಳು ಏನು ಓದುಬೇಕೆಂಬುದನ್ನೂ ನಿರ್ಧರಿಸ ಹೊರಟಿದ್ದಾರೆ. ಹಿಜಾಬ್, ಅಜಾನ್, ವ್ಯಾಪಾರಕ್ಕೆಅಡ್ಡಿ, ಮಸೀದಿಗಳ ಸರ್ವೆಗೆ ನಿಂತವರೀಗ ಪಠ್ಯ ಪುಸ್ತಕಗಳಲ್ಲೂ ಹುಸಿ ಶೂರತ್ವವನ್ನೇ ತುಂಬುವ ಹುನ್ನಾರಕ್ಕೀಳಿದಿದ್ದಾರೆ ಎಂದು ಅವರು ಕಿಡಿಕಾರಿದರು.

ಹೆಗ್ಡೆ ವಾರ್ ಎಂದೂ ವಾರ್ ಮಾಡಿದವರಲ್ಲ, ಅರ್ ಎಸ್‍ಎಸ್ ನೇತಾರ, ವೀರ ಸಾರ್ವಕರ್ ವೀರತ್ವ ಗೊತ್ತೇ ಇದೆ. ಸೂಲಿಬೆಲೆ ಬರೆಯಬಲ್ಲವರಾದ ಮೇಲೆ ಚಕ್ರತೀರ್ಥರಂಥವರು ಪಠ್ಯ ಪರಿಷ್ಕರಣೆ ಮಾಡಲೇನಡ್ಡಿ ?ಎಂಬಂತಿದೆ ಸರ್ಕಾರದ ವರಸೆ ಎಂದು ಅವರು ನುಡಿದರು.

ಎಳೆ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಈ ಸರದಾರರು ಹುಸಿ ರಾಷ್ಟ್ರ ಭಕ್ತರನ್ನು ಮೆರೆಸುತ್ತಿದ್ದಾರೆ. ಇವರುಗಳು ಸ್ವಾತಂತ್ರ್ಯಕ್ಕಾಗಿಎಂದೂ ಹೋರಾಡಿಜೈಲು ಸೇರಿದವರಲ್ಲ.,ಜೈಲಲ್ಲಿ ಇರಲಾರದೆಅಪಾಲಜಿ ಬರೆದುಕೊಟ್ಟು ಈಚೆ ಬಂದು ಬ್ರಿಟೀಷರನ್ನು ಓಲೈಸಿದವರು ಎಂದುಡಾ.ಬಿ.ಎಲ್.ವೇಣು ವ್ಯಂಗ್ಯವಾಡಿದರು.

ಕುವೆಂಪು ಅಂತಹರಾಷ್ಟ್ರಕವಿಯನ್ನೇಉಡಾಫೆ ಮಾಡುವಇಂತಹವರ ಪರವಾಗಿರುವ ಶಿಕ್ಷಣ ಸಚಿವರು, ಇತರೆ ಸಚಿವರ ಮನಸ್ಥಿತಿ ಎಂತದ್ದಿರಬೇಕು ? ಮೊದಲು ಪಠ್ಯ ಪುಸ್ತಕ ಸಮಿತಿ ವಿಸರ್ಜಿಸಿ ಯೋಗ್ಯರನ್ನು ಸರ್ಕಾರ ನೇಮಕ ಮಾಡಬೇಕುಎಂದುಅವರು ಆಗ್ರಹಿಸಿದರು.

ಎಳೆ ಮಕ್ಕಳ ಮನಸ್ಸು ಹಾಳಾಗದಂತೆ ನೋಡಿಕೊಳ್ಳಲೆಂಬುದೇ ನನ್ನ ಕಳಕಳಿಯ ಮನವಿ ಎಂದು ಹೇಳಿದ ಅವರು, ಈ ವಿಚಾರದಲ್ಲಿರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.ಜಾತಿ, ಧರ್ಮ ಮೀರಿದೇಶ,  ಮತ್ತು ಪ್ರಜಾಬ್ರಭುತ್ವದ ಆಶಯದಂತೆ ನಡೆದುಕೊಳ್ಳಬೇಕು. ದೇಶದ ಸಂವಿಧಾನಕ್ಕೆ ಗೌರವಿಸಬೇಕು ಎಂದು ಅಭಿಪ್ರಾಯ ಪಟ್ಟರು
ನನಗೆ ಚಿತ್ರದುರ್ಗದ ನೆಲವೇ ಇಷ್ಟ. ಈ ನೆಲ ಬಿಟ್ಟು ಎಲ್ಲಿಗೂ  ಹೊಗಲಾರೆ. ಹೋಗುವ ಮನಸ್ಥಿತಿ ಇದ್ದಿದ್ದರೆ, ಇಷ್ಟೋತ್ತಿಗಾಗಲೇ ಎಲ್ಲವನ್ನೂ ಗಳಿಸುತ್ತಿದ್ದೆ. ಆದರೆ ನಾನು ಇದ್ದ ಜಾಗಕ್ಕೆ ಎಲ್ಲವೂ ಹುಡಿಕೊಂಡು ಬಂದಿವೆ. ಎಲ್ಲಾ ಗೌರವೂ ಸಿಕ್ಕಿದೆ. ನಾನು ಬದುಕಿರುವ ತನಕ ಬರೆಯುತ್ತೇನೆ. ಬರವಣಿಗೆಯೇ ನನ್ನ ಉಸಿರು ಎಂದು ವೇಣು ಹೇಳಿದರು.
ಮದಕರಿ ನಾಯಕ ಸಾಂಸಕೃತಿಕ ಕೇಂದ್ರದ ಮುಖ್ಯಸ್ಥ ಗೋಪಾಲಸ್ವಾಮಿ ನಾಯಕ್, ಸತ್ಯಣ್ಣ, ಗುರುಮೂತಿ ್ಇನ್ನಿತರರುP Áರ್ಯಕ್ರಮದಲ್ಲಿ ಹಾಜರಿದ್ದರು.

 

ಬಿ.ಎಲ್.ವೇಣು ಸಾಹಿತ್ಯ ಸಮ್ಮೇಳನಾದ್ಯಕ್ಷರಾಗಲಿ : ಲೇಖಕ ಮೇಘ ಗಂಗಾಧರ ನಾಯ್ಕ ಆಶಯ

ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರಿಗೆ ಮುಂದಿನ ವರ್ಷ ನಡೆಯುವ ಅಖಿಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಬೇಕು ಎಂದು ಪತ್ರಕರ್ತ ಹಾಗೂ ಲೇಖಕ ಮೇಘ ಗಂಗಾಧರ ನಾಯಕ್ ಆಗ್ರಹಿಸಿದರು.

ಡಾ.ಬಿ.ಎಲ್.ವೇಣು ಅವರು ಈ ನಾಡಿನ ಸ್ವಾಭಿಮಾನಿ ಲೇಖಕರು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇಂತಹ ಲೇಖಕನ್ನು ಸರ್ಕಾರ ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷಿಸುತ್ತಿರುವುದು ತರವಲ್ಲದ ನಡವಳಿಕೆ ಎಂದು ಹೇಳಿದರು.

ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಬಿ.ಎಲ್. ವೇಣು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿ ಇಂತಹ ಶ್ರೇಷ್ಠ ಲೇಖಕರನ್ನು ಗುರ್ತಿತಿಸಬೇಕು. ಈ ವಿಚಾರದಲ್ಲಿ ಜಾತಿ, ಧರ್ಮಗಳತಂಹ ವಿಚಾರ ಬರಕೂಡದು. ವೇಣುಅವರ ಸಮಗ್ರ ಸಾಹಿತ್ಯದ ಕಡೆ ನಮ್ಮ ಸಾಹಿತ್ಯರಂಗದ ನೇತಾರರು ಗಮನ ಕೊಡದಿರುವುದು ನಿಜಕ್ಕೂ ಖೇದಕರ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.

ವೇಣು ಅವರು ಸ್ವಾಭಿಮಾನಿ ಸಾಹಿತಿ. ರಾಜಧಾನಿಯಂತಹ ನಗರದಲ್ಲಿ ಇದ್ದಿದ್ದರೆ ಇವತ್ತು ಎಲ್ಲಾ ಅಧಿಕಾರಗಳು ಅವರಿಗೆ ಸಿಗುತ್ತಿತ್ತು. ಆದರೆ ಅವರುಅನ್ನ ಕೊಟ್ಟ ನೆಲವನ್ನು ಬಿಟ್ಟು ಎಲ್ಲಿಗೋ ಹೋಗಲಾರೆ ಎಂದು ಶಪತಮಾಡಿ ಇಲ್ಲಿಯೇ ಬೀಡು ಬಿಟ್ಟು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.ಅಧಿಕಾರಕ್ಕಿಂತ ಜನರ ಪ್ರೀತಿ ಮತ್ತು ಸ್ವಾಭಿಮಾನ ಮುಖ್ಯವೆಂದು ನಂಬಿ ಬದುಕು ನಡೆಸುತ್ತಿದ್ದಾರೆಂದು ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಎಳಸು, ರಾಜಕೀಯ ಜ್ಞಾನ ಇರದವನು : ವಿಜಯೇಂದ್ರ ಮೇಲೆ ಈಶ್ವರಪ್ಪ ಮಾತಿನ ಪ್ರಹಾರ

ಉಡುಪಿ: ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರಿಗೆ ಬಿಜೆಪಿ ನಿರಾಸೆ ಮಾಡಿದಾಗಿನಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಹರಿಹಾಯುತ್ತಲೇ ಇದ್ದಾರೆ. ಬಿಜೆಪಿ ನಾಯಕರ ಮಾತನ್ನು ಮೀರಿ, ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

error: Content is protected !!