in ,

ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕಲಿಕಾ ಹಬ್ಬ ಸಹಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ

suddione whatsapp group join

ಚಿತ್ರದುರ್ಗ, (ಜ.31) : ತಾಲ್ಲೂಕಿನ ಭೀಮಸಮುದ್ರ ಸಮೀಪದ ವಿ.ಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಂತಹ ಕಲಿಕಾ ಹಬ್ಬದಲ್ಲಿ ಮಾತನಾಡಿ  ಅವರು ಮಕ್ಕಳಲ್ಲಿ ಇರುವಂತಹ ಸೂಪ್ತ ಪ್ರತಿಭೆಗಳನ್ನು ಹೊರತೆಗೆಯುವಲ್ಲಿ ಶಿಕ್ಷಕರು ಶ್ರಮಿ ಸಬೇಕೆಂದು ಕರೆನೀಡಿದರು.

ಜಿ.ಎಸ್. ಅನಿತ್ ಕುಮಾರ್ ಮಾತನಾಡಿ ಕರೋನಾ ಕಾಲದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳ ಮನೆಬಾಗಿಲಿಗೆ ತೆರೆಳಿ ಪಾಠಬೋಧನೆಯನ್ನು ಮಾಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಅತ್ಯಂತ ಶ್ರಮಪಟ್ಟರು ಅದೇ ರೀತಿಯಾಗಿ ಸರ್ಕಾರಗಳು ಸಹ ಹೆಚ್ಚಿನ ಅನುದಾನಗಳನ್ನು ಸರ್ಕಾರಿ ಶಾಲೆಗಳಿಗೆ ವಿನಿಯೋಗಿಸಿದರ ಪರಿಣಾಮವಾಗಿ ಇಂದು ಸರ್ಕಾರಿ ಶಾಲೆಗಳು ತುಂಬಾ ಅಕರ್ಷಣೆಯಾಗಿ ಕಾಣುವಂತಾಗಿದ್ದು, ಶಿಕ್ಷಕರು ಮಕ್ಕಳ ಸರ್ವಾಂಗಿಣ ಅಭಿವೃದ್ದಿಗಾಗಿ ಶ್ರಮಿಸಬೇಕೆಂದೂ ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಹಲವಾರು ಮಹನೀಯರನ್ನು ಕಾಣಬಹುದಾಗಿದ್ದು, ಅದೇ ರೀತಿಯಾಗಿ ಪೋಷಕರು ಸಹ ಶಾಲೆಗಳಿಗೆ ಬೇಟಿ ನೀಡಿ ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಶೈಕ್ಷಣಿಕ ವಿಚಾರದ ಬಗ್ಗೆ ಚರ್ಚಿಸಬೇಕೆಂದು ಕಲಿಕಾ ಹಬ್ಬದಂತಹ ವಿನೂತನ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯು ಮಾಡಿರುವುದು ತುಂಬಾ ಸಂತಸ ದಾಯಕ ವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿಯ ಮಾಜಿ ಸದಸ್ಯ ಸುರೇಶ್ ನಾಯ್ಕ್ ಮಕ್ಕಳಿಗೆ ಶೈಕ್ಷಣಿಕ ಪೂರಕವಾದ ಕಥೆಯನ್ನು ತಿಳಿಸಿ ಮಕ್ಕಳು ಹೆಚ್ಚು ವಿಧ್ಯಾಭ್ಯಾಸದ ಕಡೆ ಗಮನ ನೀಡಬೇಕೆಂದು ಕರೆನೀಡಿದರು.

ಭೀಮಸಮುದ್ರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ತಿಪ್ಪೇಸ್ವಾಮಿ ಶ್ರೇಷ್ಟಿ  ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ಕೈ ಜೋಡಿಸಿದರೆ ಭಾರತವು ಪ್ರಪಂಚದ ಮುಂಚೂಣಿ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದ್ದರಿಂದ ಶಿಕ್ಷಕರು ಕೇವಲ ಶಾಲಾ ಬೋದನಾ ಸಮಯದಲ್ಲಿ ಮಾತ್ರ ಶಾಲೆಯ ಗಮನಕೊಡದೆ ದಿನಾಪೂರ್ತಿ ನಾವು ಶಾಲೆಯಲ್ಲಿ ಮಾಡಬಹುದಾದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಚಿಂತಿಸಬೇಕೆಂದು ತಿಳಿಸಿದರು.

ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಾಜೂನಾಯ್ಕ್ ಮಾತನಾಡುತ್ತಾ ಇಂದು ಸರ್ಕಾರಿ ಶಾಲೆಗಳು ಸ್ವಾವಲಂಬಿಯತ್ತ ಸಾಗುತ್ತಿದ್ದು, ಶಿಕ್ಷಕರು ಸಹ ಇಂದು ತಮ್ಮ ಕಾರ್ಯದಕ್ಷತೆಯಿಂದ ಶಾಲೆಗಳನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿಯೂ ಶಿಕ್ಷಕರು ಇಂದು ಕೇವಲ ಬೋದಕರಾಗದೆ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಹೊರತೆಗೆಯುವಲ್ಲಿ ತುಂಬಾ ಶ್ರಮಿಸುತ್ತಿದ್ದಾರೆಂದು ತಿಳಿಸಿದರು
ಗ್ರಾಮಸ್ಥರಾದ ನವೀನ್ ಮಾತನಾಡಿ ಈ ಶಾಲೆಯ ಪ್ರಗತಿಗಾಗಿ ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮಸ್ಥರು ತುಂಬಾ ಶ್ರಮಪಟ್ಟಿದ್ದು ಮುಂದೆಯೂ ಸಹ ಶಾಲೆಯ ಪ್ರಗತಿಗಾಗಿ ನಾವು ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಎಂ.ಎನ್.ರಾಮು ಮತ್ತು ಹೆಚ್. ಮಂಜಣ್ಣನವರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ  ಸಂಪತ್ ಕುಮಾರ್ ರವರು ಗ್ರಾಮಸ್ಥರು ಸರ್ಕಾರಿ ಶಾಲೆಗಳ ಪ್ರಗತಿಗಾಗಿ ಶ್ರಮಿಸಬೇಕೆಂದು ಸಹಾಕಾರ ನೀಡಬೇಕೆಂದು ತಿಳಿಸಿದರು.

ಗ್ರಾಮದ ಹೆಣ್ಣು ಮಕ್ಕಳು ಪೂರ್ಣಕುಂಭದೊಂದಿಗೆ ಆಕರ್ಷಕ ಮೆರವಣಿಗೆ, ದೇಶನಾಯಕರ ವೇಷಭೂಷಣ ತೊಟ್ಟ ಮಕ್ಕಳು,
ಮೆರವಣಿಗೆಯಲ್ಲಿ ಮಕ್ಕಳ ಹಾಡು, ನೃತ್ಯ, ಕೋಲಾಟ ಆಕರ್ಷಕವಾಗಿತ್ತು ಬಂದಂತಹ ಅತಿಥಿಗಳನ್ನು ಬರಮಾಡಿಕೊಂಡರು.

ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಲೋಲಾಕ್ಷಮ್ಮ, ಸದಸ್ಯರಾದ ಸಿ.ಎನ್.ರೂಪ, ಮತ್ತು ಗೀತ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಮಕ್ಕಳಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ  ಉದ್ಗಾಟನೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ರಾಜು, ಮುಖ್ಯಶಿಕ್ಷಕಿಯಾದ ನಾಗರತ್ನಮ್ಮ, ಲಕ್ಷ್ಮಿದೇವಿ, ರೇಣುಕಾದೇವಿ ಕ್ಲಸ್ಟರ್ ನ ಎಲ್ಲಾ ಮುಖ್ಯಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಸದಸ್ಯರಿಗೆ ಸನ್ಮಾನಿಸಲಾಯಿತು
ಈ ಕಾರ್ಯ ಕ್ರಮದಲ್ಲಿ ಭೀಮಸಮುದ್ರ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಕಾವ್ಯ ಗ್ರಾಮ ಪಂಚಾಯ್ತಿ ಸದಸ್ಯರಾದ ಗೀತಮ್ಮ , ಸಾಕಮ್ಮ, ಮಂಜುನಾಥ್, ಗ್ರಾಮದ ಶಿವಕುಮಾರ್, ಮಸಿಯಪ್ಪ, ರಾಮಣ್ಣ, ಹನುಮಂತಪ್ಪ, ಬಿ.ಎಲ್.ವೆಂಕಟೇಶ್
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರವಿಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ರವಿ, ಮೈಲಾರಪ್ಪ ಬಿ.ಆರ್.ಪಿ. ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚಿತ್ರದುರ್ಗದಲ್ಲಿ ಆಟೋರಿಕ್ಷಾ ದರಪರಿಷ್ಕರಣೆ : ಫೆ.1 ರಿಂದ 28 ರವರೆಗೆ ಆಟೋರಿಕ್ಷಾ ಮೀಟರ್‌ಗಳ ಸತ್ಯಾಪನೆ, ಮುದ್ರೆ ಕಾರ್ಯ

ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್ ಬಾಬು ಮಗಳು..!