Connect with us

Hi, what are you looking for?

ಪ್ರಮುಖ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ : ಎಲ್.ಹನುಮಂತಯ್ಯ

ಚಿತ್ರದುರ್ಗ, (ಅ.17): ಕೋಮುವಾದಿ ಬಿಜೆಪಿ, ಪ್ರಾದೇಶಿಕ ಪಕ್ಷ ಜೆಡಿಎಸ್.ನಿಂದ ಯಾವ ಸಮಸ್ಯೆಗಳಿಗೂ ನಿವಾರಣೆ ಸಿಗುತ್ತದೆಂದು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಈ ಬಾರಿಯ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಸಮರ್ಥ ಅಭ್ಯರ್ಥಿ ರಮೇಶ್‍ಬಾಬುಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಜಯಶಾಲಿಯನ್ನಾಗಿಸುವಂತೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಪದವೀಧರ ಮತದಾರರಲ್ಲಿ ವಿನಂತಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪದವೀಧರರು, ಶಿಕ್ಷಕರು, ಉಪನ್ಯಾಸಕರು, ನಿರುದ್ಯೋಗಿ ಪದವೀಧರರು ಹಾಗೂ ದಲಿತರು, ಶೋಷಿತರ ಪರ ಕಾಳಜಿಯುಳ್ಳ ರಮೇಶ್‍ಬಾಬುರವರನ್ನು ನಮ್ಮ ಪಕ್ಷದಿಂದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಣಕ್ಕಿಳಿಸಲಾಗಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ನೀಡಿದ್ದ ಯಾವ ಭರವಸೆಗಳನ್ನು ಇದುವರೆವಿಗೂ ಈಡೇರಿಸಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವಕರನ್ನು ನಂಬಿಸಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯಿಂದ ಅತ್ತ ದೇಶದ ಅಭಿವೃದ್ದಿಯೂ ಆಗಿಲ್ಲ. ಇತ್ತು ನಿರುದ್ಯೋಗಿಗಳ ಕೈಗೆ ಉದ್ಯೋಗವು ಸಿಕ್ಕಿಲ್ಲ. ಇಂತಹ ಹೊಣೆಗೇಡಿ ಸರ್ಕಾರ ಬೇಕೋ, ಇಲ್ಲ ಸದಾ ಬಡವರ ಪರವಾಗಿರುವ ಕಾಂಗ್ರೆಸ್ ಸರ್ಕಾರ ಲೇಸೋ ಎನ್ನುವುದನ್ನು ಪ್ರಜ್ಞಾವಂತ ಮತದಾರರು ಚಿಂತಿಸಿ ಮತಯಾಚನೆ ಮಾಡುವಂತೆ ಎಲ್.ಹನುಮಂತಯ್ಯ ಕೋರಿದರು.

ಐದು ನೂರು ಹಾಗೂ ಒಂದು ಸಾವಿರ ರೂ.ಮುಖ ಬೆಲೆಯ ನೋಟುಗಳ ನಿಷೇಧ, ಜಿ.ಎಸ್.ಟಿ.ಯಿಂದಾಗಿ ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ಜಿ.ಎಸ್.ಟಿ.ಮೂಲಕ ದೇಶದ ಜನತೆಯಿಂದ ಶೇ.28 ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ವಸೂಲಿ ಮಾಡುತ್ತಿದೆ. ಇಂತಹ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಎ.ಪಿ.ಎಂ.ಸಿ. ಭೂಸುಧಾರಣಾ ಕಾಯಿದೆ ತಿದ್ದುಪಡಿ ರೈತರಿಗೆ ಮಾರಕವಾಗಿದೆ. ಒಂದು ಇಲ್ಲವೆ ಎರಡು ಎಕರೆ ಭೂಮಿಯುಳ್ಳ ಸಣ್ಣಹಿಡುವಳಿದಾರರ ಸಂಖ್ಯೆಯೇ ನಮ್ಮಲ್ಲಿ ಜಾಸ್ತಿಯಿರುವುದರಿಂದ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರಿದೆ.

ಕಾರ್ಪೊರೇಟ್ ಕಂಪನಿಗಳು, ಬಂಡವಾಳಶಾಹಿಗಳು ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡಿಕೊಳ್ಳಲಿದೆ. ಇದರ ವಿರುದ್ದ ಇಡೀ ದೇಶದಲ್ಲಿ ಹೋರಾಟ ನಡೆಯುತ್ತಿದ್ದರೂ ಪ್ರಧಾನಿ ಮೋದಿ ತನ್ನ ಮೊಂಡು ವಾದದರಿಂದ ಹಿಂದೆ ಸರಿಯುತ್ತಿಲ್ಲ. ಇವನ್ನೆಲ್ಲಾ ಪದವೀಧರ ಮತದಾರರು ಗಮನಿಸಿ ಕಾಂಗ್ರೆಸ್‍ನ ಸಮರ್ಥ ಅಭ್ಯರ್ಥಿ ರಮೇಶ್‍ಬಾಬುಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಕೊರೋನಾ ಸಂಕಷ್ಟದಲ್ಲಿ ಕಾರ್ಮಿಕರಿಗೆ ಎಂಟು ಗಂಟೆ ಕೆಲಸ ಬದಲು ಹನ್ನೆರಡು ಗಂಟೆ ನಿಗಧಿಪಡಿಸಲು ಹೊರಟಿದೆ. ದೇಶದಲ್ಲಿ ಮಹಿಳೆಯರ ಮೇಲೆ ದಿನದಿಂದ ದಿನೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಉತ್ತರಪ್ರದೇಶದ ಹಥ್ರಾಸ್‍ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದೆ ಕಾಮುಕರು ಎಷ್ಟು ಪ್ರಭಾವಿಗಳಿರಬಹುದೆಂಬುದು ಗೊತ್ತಾಗುತ್ತದೆ. ಸಂತ್ರಸ್ಥ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗಿರುವ ಪೊಲೀಸರೆ ಕಾನೂನು ಕೈಗೆತ್ತಿಕೊಂಡು ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಲು ಮುಂದಾಗಿದ್ದಾರೆ.

ಯು.ಪಿ.ಎ.ಸರ್ಕಾರ ಜಾರಿಗೆ ತಂದಿದ್ದ ಆರ್.ಟಿ.ಐ. ಆಹಾರ ಸುರಕ್ಷತೆ, ಆರ್.ಟಿ.ಇ. ಬಿಜೆಪಿ.ಕೈಗೆ ಸಿಕ್ಕಿರುವುದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇವಸ್ಥಾನ ಮುಖ್ಯವೋ, ಉದ್ಯೋಗ ಮುಖ್ಯವೋ ಎನ್ನುವುದನ್ನು ಪದವೀಧರ ಮತದಾರರು ಪರಾಮರ್ಶಿಸಿ ಯೋಗ್ಯರಿಗೆ ಮತ ನೀಡಿ ಎಂದರು.

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಹೋರಾಟದ ಹಾದಿಯಿಂದ ಬಂದಿರುವ ರಮೇಶ್‍ಬಾಬುರವರಲ್ಲಿ ಬದ್ದತೆ, ಛಲ, ಸಮಸ್ಯೆ, ನೋವಿನ ಬಗ್ಗೆ ಅರಿವುಳ್ಳವರು. ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶ್ರೇಷ್ಟ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಚುನಾವಣೆಗಿಳಿಸಿದೆ. ಪದವೀಧರರು, ಶಿಕ್ಷಕರು, ಉಪನ್ಯಾಸಕರು, ನಿರುದ್ಯೋಗಿ ಪದವೀಧರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿದರು.

ಸರ್ಕಾರದಲ್ಲಿ ಖಾಲಿ ಹುದ್ದೆಗಳು ಸಾಕಷ್ಟಿವೆ. 2014 ರ ಲೋಸಕಭೆ ಚುನಾವಣಾ ಪೂರ್ವದಲ್ಲಿ ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ವಾಗ್ದಾನ ಮಾಡಿ ದೇಶದ ಪ್ರಧಾನಿಯಾದ ನರೇಂದ್ರಮೋದಿ ನುಡಿದಂತೆ ನಡೆಯುವಲ್ಲಿ ಸೋತಿದ್ದಾರೆ. ಮಾತಿನಲ್ಲೇ ಹೊಟ್ಟೆ ತುಂಬಿಸುವ ಜಾಯಮಾನ ಅವರದು. ಹಾಗಾಗಿ ಎಲ್ಲಾ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡಬಲ್ಲ ಸೂಕ್ತ ಅಭ್ಯರ್ಥಿ ರಮೇಶ್‍ಬಾಬುರವರನ್ನು ಪದವೀಧರ ಮತದಾರರು ಆಯ್ಕೆ ಮಾಡಬೇಕಿದೆ ಎಂದು ಕೇಳಿಕೊಂಡರು.

ಮೋಹನ್‍ಕುಮಾರ್ ಕೊಂಡಜ್ಜಿ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜ, ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಮೈಸೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರಿನ ಪಬ್ಲಿಕ್ ಟಿವಿ ಹಿರಿಯ ವರದಿಗಾರ ಕೆ.ಪಿ.ನಾಗರಾಜ್ ಅವರನ್ನು ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಆಯ್ಕೆ ಮಾಡಿದೆ. ಮೂಲತಃ ಚಿತ್ರದುರ್ಗದವರಾದ ಕೆ.ಪಿ.ನಾಗರಾಜ್ ಪಿಯುಸಿವರೆಗೂ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಅಂದು ಕೊಂಡಿದ್ದನ್ನು ಸಾಧಿಸುವ ಸದೃಢ ಛಲದ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಒಮ್ಮೆ ನಿರ್ಧರಿಸಿದರೆ ಮುಗಿಯಿತು, ನಿರ್ಧಾರ ಫಲಿತಾಂಶವಾಗುವ ತನಕ ವಿರಮಿಸುವುದಿಲ್ಲ. ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅದಕ್ಕೆ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಜಿಲ್ಲೆಯ ಹಿರಿಯ ಪತ್ರಕರ್ತ, ಕನ್ನಡಪ್ರಭ ಜಿಲ್ಲಾ ವರದಿಗಾರರಾದ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ಮತ್ತು ಹವ್ಯಾಸಿ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ, ರಂಗಭೂಮಿ ಕಲಾವಿದ ಹೆಚ್.ಟಿ.ಸಿದ್ದನಾಯಕ, ಮರಗಾಲು ಕುಣಿತದ ಜಿ.ಗಿರೀಶ್ ಸೇರಿದಂತೆ 12 ಮಂದಿ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶನಿವಾರದ ವರದಿಯಲ್ಲಿ 38 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,342 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ...

ಪ್ರಮುಖ ಸುದ್ದಿ

ಚಿತ್ರದುರ್ಗ: ಸಣ್ಣ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ಪ್ರಜಾಪ್ರಭುತ್ವದಡಿಯಲ್ಲಿ ತಂದವರು ಭಾರತದ ಮೊದಲ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು....

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31) : ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ಮನೋಹರ ದರ್ಶನ ಹೆಚ್.ಡಿ(40) ಇಂದು(ಶನಿವಾರ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಅಕ್ಕ, ಅಣ್ಣ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ....

ಪ್ರಮುಖ ಸುದ್ದಿ

ರಾಮಾಯಣ ಮತ್ತು ವಾಲ್ಮೀಕಿ ಖಾಸಗಿ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಆರಾಧನಾಭಾವ ಮೂಡಿಸಿರುವುದು ಸಂತೋಷ ಮತ್ತು ಆತಂಕದ ವಿಷಯ. ರಾಮಾಯಣವನ್ನು ಕುರಿತು ಮಾತನಾಡುವಾಗ ಪೂರ್ವಗ್ರಹದಿಂದ ಮಾತಾಡಿದರೂ ವಸ್ತುನಿಷ್ಠವಾಗಿ ಮಾತಾಡಿದರೂ ತಪ್ಪೆನ್ನುವಂತೆ ಖಾಸಗಿಯಾಗಿ ಭಾವಿಸಿಕೊಳ್ಳುತ್ತಿರುವುದು. ರಾಮಾಯಣದ...

ದಿನ ಭವಿಷ್ಯ

ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-31,2020 ಅಶ್ವಿನಿ ಪೂರ್ಣಿಮಾ ಸೂರ್ಯೋದಯ: 06:16, ಸೂರ್ಯಸ್ತ: 17:49 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಹುಣ್ಣಿಮೆ – 20:18 ವರೆಗೆ ನಕ್ಷತ್ರ: ಅಶ್ವಿನಿ – 17:58 ವರೆಗೆ...