Connect with us

Hi, what are you looking for?

ಪ್ರಮುಖ ಸುದ್ದಿ

ಬಾಲಕಾರ್ಮಿಕರ ಪತ್ತೆ : ಇಬ್ಬರು ದುಡಿಯುವ ಮಕ್ಕಳ ಬಿಡುಗಡೆ

ದಾವಣಗೆರೆ (ಅ.16) : ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿ ಆವರಣ, ಎ.ಪಿ.ಎಂ.ಸಿ ಈರುಳ್ಳಿ ಮಾರ್ಕೆಟ್ ಪಿಸಾಳೆ ಕಾಂಪೌಡ್ ಫೈರ್ ಸ್ಟೇಷನ್ ಹಿಂಭಾಗ, ಆರ್.ಎಂ.ಸಿ ರಸ್ತೆ, ಪಿ.ಬಿ.ರಸ್ತೆ ಹಾಗೂ ವಿನೋಬನಗರದಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ದಾಳಿ ನಡೆಸಿ 2 ದುಡಿಯುವ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು.

ಜಿಲ್ಲಾಧಿಕಾರಿಗಳು ದಾವಣಗೆರೆ ಇವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 2 ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ದಾಳಿ ನಡೆಸಿದರು.

ದಾಳಿಯ ಕಾಲಕ್ಕೆ ಪತ್ತೆ ಹಚ್ಚಲಾದ 02 ಗಂಡು ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಪುನರ್ವಸತಿ ಹಾಗೂ ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ. ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಕರಣಗಳಲ್ಲಿ ಅವರನ್ನು ಕೆಲಸಕ್ಕೆ ನಿಯೋಜಿಸಿದ ಮಾಲೀಕರ ವಿರುದ್ದ ನಿಯಮಾನುಸಾರ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಕಾರ್ಮಿಕ ಅಧಿಕಾರಿ ಇಬ್ರಾಹಿಂಸಾಬ್, 1,2,3 ನೇ ವೃತ್ತದ ಕಾರ್ಮಿಕ ನಿರೀಕ್ಷಕರು, ರಾಜಶೇಖರ್ ಹಿರೇಮಠ, ನಾಗೇಶ್, ರಾಜಪ್ಪ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಎನ್.ಸಿ.ಎಲ್.ಪಿ ಯೋಜನಾ ನಿರ್ದೇಶಕ ಪ್ರಸನ್ನ.ಇ.ಎನ್ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ವೇಳೆಯಲ್ಲಿ ಹಾಜರಿದ್ದರು.

ಯಾವುದೇ ಮಾಲೀಕರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಂಡಿರುವುದು ಕಂಡು ಬಂದಲ್ಲಿ, ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098, ದೂ.ಸಂ: 08192-237332, 230094 ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ದೂ.ಸಂ: 08192-256626 ನ್ನು ಸಂಪರ್ಕಿಸಬಹುದೆಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ಮನೋಹರ ದರ್ಶನ ಹೆಚ್.ಡಿ(40) ಇಂದು(ಶನಿವಾರ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಅಕ್ಕ, ಅಣ್ಣ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ....

ಪ್ರಮುಖ ಸುದ್ದಿ

ದಾವಣಗೆರೆ (ಆ.27) : ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನವು ಅ.28 ರಂದು ನಡೆಯಲಿದ್ದು, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತಕ್ಷೇತ್ರಗಳಲ್ಲಿ ಒಟ್ಟು 29 ಮತಗಟ್ಟೆ...

ಪ್ರಮುಖ ಸುದ್ದಿ

ದಾವಣಗೆರೆ (ಅ.21) : ಜಿಲ್ಲೆಯಲ್ಲಿ ಅ.20 ರಂದು 36.0 ಮಿ.ಮೀ ಸರಾಸರಿ ಉತ್ತಮ ಮಳೆಯಾಗಿದ್ದು, ಮನೆ, ಬೆಳೆ ಸೇರಿದಂತೆ ಒಟ್ಟು 23.55 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ...

ಪ್ರಮುಖ ಸುದ್ದಿ

ದಾವಣಗೆರೆ (ಅ.19) : 66/11 ಕೆ.ವಿ. ವಿ.ವಿ. ಕೇಂದ್ರ ದಾವಣಗೆರೆಯಿಂದ ಹೊರಡುವ ಮೌನೇಶ್ವರ, ಜಯನಗರ, ಇ.ಎಸ್.ಐ ಮತ್ತು ಡಿ.ಸಿ.ಎಂ. ಫೀಡರ್‍ಗಳಲ್ಲಿ ಹಾಗೂ 220 ಕೆ.ವಿ. ಸ್ವೀಕರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ವಾಟರ್ ವಕ್ರ್ಸ್,...

ಪ್ರಮುಖ ಸುದ್ದಿ

ದಾವಣಗೆರೆ (ಅ.16) : 220 ಕೆ.ವಿ. ಎಸ್.ಆರ್.ಎಸ್. ಸ್ವೀಕರಣಾ ಕೇಂದ್ರದಿಂದ ಹೊರಡುವ 11ಕೆ.ವಿ. ಸರಸ್ವತಿ ಫೀಡರ್‍ನಲ್ಲಿ ಬೆ.ವಿ.ಕಂ. ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅ.17 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 05...

ಪ್ರಮುಖ ಸುದ್ದಿ

ದಾವಣಗೆರೆ (ಅ.16): ಜಿಲ್ಲೆಯಲ್ಲಿ ಅ.15 ರಂದು 1.0 ಮಿ.ಮೀ ಸರಾಸರಿ ಮಳೆಯಾಗಿದ್ದು, 3.75 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ 1.0 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ...

ಪ್ರಮುಖ ಸುದ್ದಿ

ದಾವಣಗೆರೆ (ಅ.16) : ಪ್ರತಿಯೊಬ್ಬ ನಾಗರೀಕರು ಸ್ವಯಂ ಪ್ರೇರಣೆಯಿಂದ ಕೋವಿಡ್-19 ಗಂಟಲು ಮಾದರಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅತೀ ಬೇಗ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗುವ ಗಂಡಾಂತರವನ್ನು ತಡೆಗಟ್ಟಬಹುದು ಎಂದು ದಾವಣಗೆರೆ ತಾಲ್ಲೂಕು...

ಪ್ರಮುಖ ಸುದ್ದಿ

ದಾವಣಗೆರೆ (ಅ.16) : ಹೊಸಪೇಟೆ ವಿಭಾಗದ ಜಾರಿ ಮತ್ತು ತನಿಖೆಯ ಜಂಟಿ ಆಯುಕ್ತರು ಇವರ ಮಾರ್ಗದರ್ಶನ ಮತ್ತು ದಾವಣಗೆರೆ ಅಬಕಾರಿ ಉಪ ಆಯುಕ್ತರು ಇವರ ನೇತೃತ್ವದಲ್ಲಿ ಅ.14 ರಂದು ಚನ್ನಗಿರಿ ತಾಲ್ಲೂಕಿನ ಶೃಂಗಾರಬಾಗು...

ಪ್ರಮುಖ ಸುದ್ದಿ

ದಾವಣಗೆರೆ (ಅ.14) : 66 ಕೆ.ವಿ. ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಶನೇಶ್ವರ, ಎನ್‍ಜೆ ವೈ, ಬಾತಿ, ಸತ್ಯನಾರಾಯಣ ಮತ್ತು ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬಸವೇಶ್ವರ ಹಾಗೂ 220...