Connect with us

Hi, what are you looking for?

ಕ್ರೀಡಾ ಸುದ್ದಿ

ಫುಟಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯ ಜನ್ಮದಿನ ಇಂದು

sharana samskruthi ustav 2020_suddione banner 1

ಅರ್ಜೆಂಟೀನಾದ ರಿಸಾರಿಯೋದಲ್ಲಿ ಜೂನ್ ೨೪ ರ ೧೯೮೭ ರಂದು ಜನಿಸಿದ ಲಿಯೋನೆಲ್ ಮೆಸ್ಸಿ ಫುಟಬಾಲ್ ಕ್ರೀಡೆಯಲ್ಲಿ ದಿಗ್ಗಜರಾಗಿದ್ದಾರೆ. ಅವ್ರು ಇಂದು ತಮ್ಮ ೩೩ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ರು. ಮೆಸ್ಸಿ ೧೩ ನೇ ವಯಸ್ಸಿನಲ್ಲಿ ಸ್ಪೈನಿನ ಫುಟಬಾಲ್ ಕ್ಲಬ್ ಬಾರ್ಸಿಲೋನಾಕ್ಕೆ ಸೇರಿದರು. ಈಗ ಅವರು ಜಗತ್ತಿನ ಮಹಾನ್ ಫುಟಬಾಲ್ ಆಟಗಾರನಾಗಿ ನಿಂತಿದ್ದಾರೆ.

ಫುಟಬಾಲ್ ಕ್ರೀಡೆಯಲ್ಲಿ ಯಾರು ಮುರಿಯದಂಥ ದಾಖಲೆ ಬರೆದಿದ್ದಾರೆ. ಅವರ ವೈಯಕ್ತಿಕ ಮತ್ತು ವೃತ್ತಿಪರ ವೃತ್ತಿಜೀವನದ 10 ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿದೆ ಓದಿ.

1. ಪ್ರಸಿದ್ಧ ಕ್ರಾಂತಿಕಾರಿ ಚೆ ಗುವೇರಾ ಜನ್ಮಸ್ಥಳದಲ್ಲಿ ಮೆಸ್ಸಿಯ ಜನ್ಮಸ್ಥಳವೂ ಆಗಿರುವುದು ಇಂಟ್ರೆಸ್ಟಿಂಗ್ ವಿಷಯ.

2. ಚಿಕ್ಕವನಿದ್ದಾಗ, ಮೆಸ್ಸಿಗೆ ಹಾರ್ಮೋನ್ ಕೊರತೆ ಸಮಸ್ಯೆ ಉಂಟಾಗಿತ್ತು. ಆದಾಗ್ಯೂ, ಬಾರ್ಸಿಲೋನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದರ ಚಿಕಿತ್ಸೆಗೆ ಕಂಪನಿ ಹಣ ಭರಿಸಲು ಮುಂದಾಯಿತು.

Advertisement. Scroll to continue reading.

3. ನವೆಂಬರ್ 16, 2003 ರಂದು ಎಫ್‌ಸಿ ಪೋರ್ಟೊ ವಿರುದ್ಧ ಸ್ನೇಹಪರವಾಗಿ ಮತ್ತು ಅಕ್ಟೋಬರ್ 16, 2004 ರಂದು ಎಸ್ಪ್ಯಾನ್ಯೋಲ್ ವಿರುದ್ಧ 1-0 ಅಂತರದಲ್ಲಿ ಜಯಗಳಿಸುವ ಮೂಲಕ ಬಾರ್ಸಿಲೋನಾಕ್ಕೆ ಪಾದಾರ್ಪಣೆ ಮಾಡಿದರು.

4. ಮಾರ್ಚ್ 2014 ರಲ್ಲಿ ಬಾರ್ಸಿಲೋನಾ ಇತಿಹಾಸದಲ್ಲಿ ಸಾರ್ವಕಾಲಿಕ ಪ್ರಮುಖ ಗೋಲ್ ಸ್ಕೋರರ್ ಆದರು.

5. ಸ್ಪೇನ್ ಪ್ರತಿನಿಧಿಸುವ ಆಹ್ವಾನ ಬಂದರೂ ಮೆಸ್ಸಿ ಅದನ್ನು ತಿರಸ್ಕರಿಸಿದ್ರು.

6. 2012 ರಲ್ಲಿ, ಮೆಸ್ಸಿ ಬಾರ್ಸಿಲೋನಾ ಪರ 79 ಗೋಲುಗಳನ್ನು ಮತ್ತು ಅರ್ಜೆಂಟೀನಾ ಪರ 12 ಗೋಲುಗಳನ್ನು ಒಟ್ಟುಗೂಡಿಸಿ 91 ಗೋಲುಗಳನ್ನು ಗಳಿಸಿದರು. ಇದು ಒಂದು ವರ್ಷದಲ್ಲಿ ಯಾವುದೇ ಫುಟ್ಬಾಲ್ ಆಟಗಾರರೂ ಗಳಿಸದ ಗರಿಷ್ಠ ಗೋಲ್ ಆಗಿದೆ.

7. ಆರು ಬಾರಿ ಬ್ಯಾಲನ್ ಡಿ’ಓರ್ ವಿಜೇತ ರಾಗಿ ದಾಖಲೆ ಬರೆದಿದ್ದರೆ.

Advertisement. Scroll to continue reading.

8. 2009-10, 2011-12, 2012-13, 2016-17, 2017-18 ಮತ್ತು 2018-19ರಲ್ಲಿ ಆರು ಬಾರಿ ಯುರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿಯನ್ನು ಗೆದ್ದಿದ್ದಾರೆ.

9. 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆದ್ದಿದ್ದಾರೆ.

10. ಅವರು ಯುನಿಸೆಫ್ ಗುಡ್ವಿಲ್ ರಾಯಭಾರಿಯಾಗಿದ್ದು, ಅಗತ್ಯವಿರುವ ಮಕ್ಕಳಿಗೆ ನೆರವು ನೀಡುವ ಲಿಯೋ ಮೆಸ್ಸಿ ಫೌಂಡೇಶನ್ ಅನ್ನು ಸಹ ನಡೆಸುತ್ತಿದ್ದಾರೆ.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ವಿಶೇಷ ಲೇಖನ-ಕೆ.ಮಂಜುನಾಥ್ ಮಧ್ಯಕರ್ನಾಟಕದ ಕೇಂದ್ರ ಸ್ಥಾನ ಚಿತ್ರದುರ್ಗ ಜಿಲ್ಲೆ ಅನೇಕ ಹೆಗ್ಗಳಿಕೆಗೆ ಕಾರಣವಾಗಿದೆ. ಐತಿಹಾಸಿಕ ಸ್ಥಳ, ಕೋಟೆನಾಡು, ಓಬವ್ವನ ಊರು, ಅಶೋಕನ ಮೊದಲ ಶಾಸನ ಇರುವ ಜಿಲ್ಲೆ, ಮದಕರಿನಾಯಕ ಆಳಿದ ಗಂಡಮೆಟ್ಟಿನ ನಾಡು...

ಕ್ರೀಡಾ ಸುದ್ದಿ

ನವದೆಹಲಿ:  ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಯೋಗಾಸನದ ಒಂದು ಫೋಟೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಅವರು ಏನು ಮಾಡಿದ್ದಾರೆಂದು ಅವರಿಗೆ ತಿಳಿದಿರಲಿಕ್ಕಿಲ್ಲ. ಮೊಣಕಾಲುಗಳ ಮೇಲೆ...