Connect with us

Hi, what are you looking for?

ಪ್ರಮುಖ ಸುದ್ದಿ

ತಿರುಮಲ : ಸರ್ವದರ್ಶನ್ ಟಿಕೆಟ್‌ಗಾಗಿ ಭಕ್ತರ ಪ್ರತಿಭಟನೆ

ತಿರುಮಲ, ಅ. (31) : ಕರೋನ‌ ಸಂಕಷ್ಟದ ನಡುವೆಯೂ ಶ್ರೀವಾರಿ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಕಳೆದ ಮಧ್ಯರಾತ್ರಿಯಿಂದ ಭಕ್ತರು ಸರ್ವದರ್ಶನ್ ಟಿಕೆಟ್‌ಗಾಗಿ ಕಾಯುತ್ತಿದ್ದಾರೆ.ದರ್ಶನ ಪ್ರಾರಂಭವಾದ ಒಂದು ಗಂಟೆಯೊಳಗೆ 5,000 ಟಿಕೆಟ್‌ಗಳು ಮಾರಾಟವಾಗಿವೆ.

ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ಇರುವುದರಿಂದ ಭಕ್ತರು ದರ್ಶನ ಟಿಕೆಟ್‌ಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಾಹಿತಿ ಪಡೆದ ನಂತರ ಟಿಟಿಡಿ ಹೆಚ್ಚುವರಿ ಸಿಇಒ ಧರ್ಮರೆಡ್ಡಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಿ, ಸೋಮವಾರದವರೆಗೆ
ದರ್ಶನ ಟಿಕೆಟ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ವದರ್ಶನ್ ಟಿಕೆಟ್‌ಗಾಗಿ ಕಾಯುತ್ತಿರುವ ಭಕ್ತರು ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಪಾಲಿಸುತ್ತಿಲ್ಲ. ಕನಿಷ್ಠ ದೈಹಿಕ ಅಂತರವನ್ನು ಅನುಸರಿಸುತ್ತಿಲ್ಲ. ಕೆಲವರು ಮಾಸ್ಕ್ ಗಳನ್ನು ಸಹಾ ಧರಿಸುತ್ತಿಲ್ಲ. ಇದರಿಂದಾಗಿ ಕರೋನಾ ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಇವೆಲ್ಲವುಗಳನ್ನೂ ಪರಿಗಣಿಸಿದ ನಂತರ ನಾವು ಟಿಟಿಡಿ ಅಧ್ಯಕ್ಷರೊಂದಿಗೆ ಚರ್ಚಿಸಿ ಸರ್ವದರ್ಶನ್ ಟಿಕೆಟ್‌ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ”ಎಂದು ಹೆಚ್ಚುವರಿ ಸಿಇಒ ಧರ್ಮರೆಡ್ಡಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ತಿರುಮಲ : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿರುಪತಿ ತಿಮ್ಮಪ್ಪನಿಗೆ ಕೋಟಿ ಮೌಲ್ಯದ ದೇಣಿಗೆ ನೀಡಿದ್ದಾರೆ. ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಶುಕ್ರವಾರ 1.2 ಕೋಟಿ ರೂ.ಮೌಲ್ಯದ...

ಪ್ರಮುಖ ಸುದ್ದಿ

ತಿರುಮಲ: ಕರೋನಾ ವೈರಸ್‌ನಿಂದಾಗಿ ಭಕ್ತರು ತೊಂದರೆಗೆ ಸಿಲುಕದಂತೆ ತಡೆಯಲು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇವೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬರೆಡ್ಡಿ ತಿಳಿಸಿದ್ದಾರೆ. ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಲಾಕ್ ಡೌನ್ ನಂತರ ಸಾರ್ವಜನಿಕ ದರ್ಶನ...

error: Content is protected !!