Connect with us

Hi, what are you looking for?

ಪ್ರಮುಖ ಸುದ್ದಿ

ಕೋರ್ಟ್ ಮೆಟ್ಟಿಲೇರಿದ ಶಾಸಕನ ಪ್ರೇಮ ವಿವಾಹ

sharana samskruthi ustav 2020_suddione banner 1

ಚೆನ್ನೈ : ಅಣ್ಣಾಡಿಎಂಕೆ ಪಕ್ಷದ ಕಳ್ಳಕುರಿಚಿ ಕ್ಷೇತ್ರದ
ಶಾಸಕ ಪ್ರಭು (34) ಅವರು ನಿನ್ನೆಯಷ್ಟೇ (ಸೋಮವಾರ) ಪ್ರೇಮ ವಿವಾಹವಾಗಿದ್ದರು. ಇದೀಗ ವಿವಾದಕ್ಕೆ ಕಾರಣವಾಗಿದೆ.

ಶಾಸಕ ಪ್ರಭು ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ವಧು ಸೌಂದರ್ಯದ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ಮಗಳನ್ನು ಹಸ್ತಾಂತರಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.

ಪ್ರಭು ತಮ್ಮ ಮಗಳನ್ನು ಅಪಹರಿಸಿ ಬಲವಂತವಾಗಿ ಕರೆದೊಯ್ದು ಮದುವೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ನಾಳೆ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಮದುವೆಯ ನಂತರ ಶಾಸಕ ಪ್ರಭು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಅದರಲ್ಲಿ ನಮ್ಮ ಮದುವೆ ಪರಸ್ಪರ ಇಷ್ಟಪೂರ್ವಕವಾಗಿ ನಡೆಯಿತು. ಒತ್ತಾಯಪೂರ್ವಕವಾಗಿ ನಡೆದಿಲ್ಲ.ಯಾರ ಬಲವಂತವೂ ಇಲ್ಲ. ನಾವು ನಾಲ್ಕು ತಿಂಗಳಿಂದ ಪ್ರೀತಿಸುತ್ತಿದ್ದೇವೆ. ನಾನು ಆಕೆಯನ್ನು ಅಪಹರಿಸಿದ್ದು ಸುಳ್ಳು. ಮದುವೆಯ ನಂತರ ನಾವು ಸೌಂದರ್ಯ ಅವರ ತಂದೆ ತಾಯಿಯವರ ಆಶೀರ್ವಾದಕ್ಕಾಗಿ ಅವರ ಮನೆಗೆ ಹೋದೆವು. ಆದರೆ ಅವರು ನಮ್ಮನ್ನು ತಿರಸ್ಕರಿಸಿದರು. ಆದರೆ ಈ ಮದುವೆಗೆ ನಮ್ಮ ಹೆತ್ತವರ ಅನುಮತಿ ಇದೆ ಎಂದು ತಿಳಿಸಿದ್ದಾರೆ.

ನಾನು ಪ್ರಭು ಅವರನ್ನು ಮನಃಪೂರ್ವಕವಾಗಿ ಇಷ್ಟ ಪಟ್ಟು ಪ್ರೀತಿಸಿ ಮದುವೆಯಾಗಿದ್ದೇನೆ. ಯಾರೂ ನನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಿಲ್ಲ ಎಂದು ಸೌಂದರ್ಯ ಹೇಳಿದ್ದಾರೆ.

Advertisement. Scroll to continue reading.

ಸೌಂದರ್ಯದ ತಂದೆ ತನ್ನ ಊರಿನ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿವಾಹವು ಅಂತರ್ಜಾತಿ ವಿವಾಹವಾದ್ದರಿಂದ ಆಕೆಯ ತಂದೆ ತಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚೆನ್ನೈ: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿರುಧುನಗರ ಜಿಲ್ಲೆಯ ಗಡಿಯಲ್ಲಿರುವ ಮುರುಗನೇರಿ ಪ್ರದೇಶದ ಪಟಾಕಿ...

ಪ್ರಮುಖ ಸುದ್ದಿ

ಚೆನ್ನೈ : ಇದು ಕಾಲಿವುಡ್ ಚಿತ್ರದ ಕಥೆಯಲ್ಲ ಬದಲಾಗಿ ತಮಿಳುನಾಡಿನಲ್ಲಿ ನಡೆದ ಘಟನೆ. ರಾಜಕಾರಣಿ ಶಾಸಕ, ಬಿಎ ವಿದ್ಯಾರ್ಥಿನಿ ಇವರಿಬ್ಬರ ಪ್ರೀತಿ ಪ್ರೇಮ, ಜಾತಿ ಭೇದ, ವಿದ್ಯಾರ್ಥಿನಿ ತಂದೆಯ ವಿರೋಧ ಮತ್ತು ಆತ್ಮಹತ್ಯೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ರಸ್ತೆ ರಾಜ ಶಾಸಕ ಎಂ.ಚಂದ್ರಪ್ಪ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಾದ, ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ನವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ...

ಪ್ರಮುಖ ಸುದ್ದಿ

ತಮಿಳುನಾಡು:  ದಟ್ಟವಾದ ಕಾಡು, ಆ ಕಾಡಿನಲ್ಲಿ ಕಾಡುಮೃಗಗಳು ಎಲ್ಲಿಂದ ಹೇಗೆ ಬರುತ್ತವೆ ಎಂಬುದು ತಿಳಿಯುವುದಿಲ್ಲ. ಒಂದು ವೇಳೆ ಮನುಷ್ಯ ಕಣ್ಮರೆಯಾಗಿ ಒಮ್ಮೆ ಕಾಡಿಗೆ ಹೋದರೆ ವಾಪಾಸು ಬರುತ್ತಾನೋ ಇಲ್ಲವೋ ಎಂದು ತಿಳಿಯದಂತಹ ದಟ್ಟವಾದ ಕಾಡು. ಇಂತಹ...