Connect with us

Hi, what are you looking for?

ಪ್ರಮುಖ ಸುದ್ದಿ

ವಿದ್ಯಾರ್ಥಿಗಳ ಭವಿಷ್ಯ, ಆರೋಗ್ಯ ಮುಖ್ಯ: ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ಸುದ್ದಿಒನ್ : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕಾಲೇಜುಗಳ ಪುನರಾರಂಭಿಸುವ ಕುರಿತು ಎಸ್.ಜೆ.ಎಂ. ಸಮೂಹ ಸಂಸ್ಥೆಗಳ ಮುಖ್ಯಸ್ಥರ ಸಮಾಲೋಚನಾ ಸಭೆ ನಡೆಯಿತು.

ಸಭೆ ಅಧ್ಯಕ್ಷತೆವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸರ್ಕಾರ ಪದವಿ ಕಾಲೇಜುಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನಿಯಮಾವಳಿ ಪ್ರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ಕೂರಿಸಬೇಕು ಎಂದರು.

ವಿದ್ಯಾರ್ಥಿಗಳ ಭವಿಷ್ಯ ಮತ್ತು ಆರೋಗ್ಯ ಮುಖ್ಯ. ನಿರಂತರವಾಗಿ ಸ್ವಚ್ಛತೆಯನ್ನು ಕಾಪಾಡಬೇಕು. ಸಮಯಕ್ಕೆ ಸರಿಯಾಗಿ ಸ್ಯಾನಿಟೈಸರ್ ಸಿಂಪಡಿಸಬೇಕು. ಮಾಸ್ಕ್ ಕಡ್ಡಾಯಗೊಳಿಸಬೇಕು. ಯಾವದೇ ಸಂದರ್ಭದಲ್ಲಿ ತುರ್ತು ಅಗತ್ಯವಿದ್ದರೆ ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು. ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ನ್ನು ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಮಾಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಚಾಡಿಕೋರರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇವೆಲ್ಲದರ ನಡುವೆ ಪಾರದರ್ಶಕವಾದ ಜೀವನವನ್ನು ಕಟ್ಟಿಕೊಳ್ಳುವ ಅಗತ್ಯವಿದೆ. ಇನ್ನೊಬ್ಬರ ಮೇಲೆ ಸುಮ್ಮನೆ ಚಾಡಿ ಹೇಳದೆ ಆ ಸಮಯವನ್ನು ಸದುದ್ದೇಶಕ್ಕೆ ಬಳಸಿಕೊಂಡರೆ ವೈಯಕ್ತಿಕವಾಗಿ ಬೆಳೆಯುವುದಲ್ಲದೆ ಸುತ್ತಮುತ್ತಲಿನ ಸಮಾಜವನ್ನು ಬೆಳಸಬಹುದು ಎಂದು ಅಭಿಪ್ರಾಯಿಸಿದರು.

ಸರ್ಕಾರ ಹೊರಡಿಸಿರುವ ಸಾಮಾನ್ಯ ಮಾರ್ಗಸೂಚಿಗಳನ್ನು ಕುರಿತು ಡಾ. ಕೆ.ಸಿ. ರಮೇಶ್, ಕಾಲೇಜು ಪ್ರವೇಶ-ನಿರ್ಗಮನ ಸ್ಥಳಗಳ ಸುರಕ್ಷತಾ ಕ್ರಮಗಳ ಬಗ್ಗೆ ಡಾ. ಪಿ. ಶಿವಲಿಂಗಪ್ಪ, ತರಗತಿ ಕೊಠಡಿಗಳು ಮತ್ತು ಇತರೆ ಕಲಿಕಾ ತಾಣಗಳ ಬಗ್ಗೆ ಪ್ರೊ. ಕೆ.ಎನ್. ವಿಶ್ವನಾಥ್, ಹಾಸ್ಟೆಲ್‍ಗಳಲ್ಲಿ ಮಾರ್ಗಸೂಚಿ ಪಾಲನೆ ಕುರಿತು ಡಾ. ಬಿ.ಸಿ. ಶಾಂತಪ್ಪ ಮಾತನಾಡಿದರು.

ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ನಿರ್ದೇಶಕರಾದ ಹನುಮಲಿ ಷಣ್ಮುಖಪ್ಪ, ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಡಾ. ಸವಿತಾ ಇದ್ದರು.

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ ನವೆಂಬರ್-25,2020 ದೆವುತ್ಥನ ಏಕಾದಶಿ ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ಶಕ ಸಂವತ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ಏಕಾದಶೀ – 29:09+ ವರೆಗೆ ನಕ್ಷತ್ರ: ಉತ್ತರಾ ಭಾದ್ರ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್24):ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 64 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,399 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ, (ನ.24) : ಕೆಲ ದಿನಗಳಿಂದ ತಾಲೂಕಿನ ಸಿರಿಗೆರೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಮಂಗಳವಾರ ಬೋನಿಗೆ ಬಿದ್ದಿದೆ. ಸಿರಿಗೆರೆ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಗ್ರಾಮಸ್ಥರು...

ಪ್ರಮುಖ ಸುದ್ದಿ

ಚಳ್ಳಕೆರೆ :ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ಚಳ್ಳಕೆರೆ ಪೊಲೀಸರು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ನೆಹರು ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಜನತಾ ಕಾಲೋನಿಯ ಲೇಟ್ ಹನುಮಂತಪ್ಪ ಅವರ ಮಗನಾದ ಮಾನಸಿಕ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ನವೆಂಬರ್-24,2020 ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ದಶಮೀ – 26:41+ ವರೆಗೆ ನಕ್ಷತ್ರ: ಪೂರ್ವಾ ಭಾದ್ರ – 15:32 ವರೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ವ್ಯಕ್ತಿಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಲೇಶ (32) ಆರೋಗ್ಯ ಸರಿಯಿಲ್ಲದ್ದಕ್ಕೆ ನೊಂದು ಸೋಮವಾರ ಮನೆಯಲ್ಲೇ ನೇಣು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು. ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ...

ಪ್ರಮುಖ ಸುದ್ದಿ

ಚಿತ್ರದುರ್ಗ : ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‍ನಲ್ಲಿ ಪಿಡಿಒ ಹಾಗೂ ಇಂಜಿನಿಯರ್‍ಗಳ ಭೇಟಿ ದಿನಾಂಕ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

error: Content is protected !!