Connect with us

Hi, what are you looking for?

ಪ್ರಮುಖ ಸುದ್ದಿ

BREAKING : ಎಸ್‌ಪಿ ಬಾಲಸುಬ್ರಮಣ್ಯಂಗೆ ಮತ್ತೆ ಅನಾರೋಗ್ಯ

sharana samskruthi ustav 2020_suddione banner 1

ಚೆನ್ನೈ, ಸುದ್ದಿಒನ್, (ಸೆ.24): ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣಿಯನ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕರೋನಾದಿಂದ ಚೇತರಿಸಿಕೊಂಡ ನಂತರ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 40 ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಸಹಾ ಇನ್ನೂ ಅವರು ವೈದ್ಯಕೀಯ ತಪಾಸಣೆಯಲ್ಲಿದ್ದಾರೆ UNDER MEDICAL OBSERVATION). ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಮತ್ತೆ ಅನಾರೋಗ್ಯದ ಉಂಟಾದ ಕಾರಣದಿಂದ ಅಭಿಮಾನಿಗಳ ಎದೆಬಡಿತವನ್ನು ಮತ್ತಷ್ಟು ಹೆಚ್ಚಾದಂತಾಗಿದೆ.

ಕರೋನಾ ಪಾಸಿಟಿವ್ ಧೃಢವಾದ ಕಾರಣ ಆಗಸ್ಟ್ 5 ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ನೆಚ್ಚಿನ ಗಾಯಕ ಸಂಪೂರ್ಣವಾಗಿ ಚೇತರಿಸಿಕೊಂಡು ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗುತ್ತಾರೆಂದು ಕಾಯುತ್ತಿರುವ ಅಭಿಮಾನಿಗಳಿಗೆ ಈ ಸುದ್ದಿಯಿಂದ ಆಘಾತವಾಗಿದೆ.

ಬಾಲಸುಬ್ರಮಣ್ಯಂ ಅವರ ಪುತ್ರ ಎಸ್‌ಪಿ ಚರಣ್ ನಾಲ್ಕು ದಿನಗಳ ಹಿಂದೆ ತಮ್ಮ ತಂದೆ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಭೌತಚಿಕಿತ್ಸೆಯನ್ನು (PHYSIOTHERAPY) ಮಾಡುತ್ತಿದ್ದಾರೆ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಸಹಾಯದಿಂದ ಎದ್ದು ಕುಳಿತುಕೊಳ್ಳುತ್ತಾರೆ ಎಂದು ಚರಣ್ ಹೇಳಿದ್ದರು. ಆದರೆ ಇದೀಗ ಬಾಲಸುಬ್ರಮಣ್ಯಂ ಅವರ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಸದಸ್ಯರು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆತಂಕದಲ್ಲಿದ್ದಾರೆ.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚೆನ್ನೈ: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿರುಧುನಗರ ಜಿಲ್ಲೆಯ ಗಡಿಯಲ್ಲಿರುವ ಮುರುಗನೇರಿ ಪ್ರದೇಶದ ಪಟಾಕಿ...

ಪ್ರಮುಖ ಸುದ್ದಿ

ಚೆನ್ನೈ : ಇದು ಕಾಲಿವುಡ್ ಚಿತ್ರದ ಕಥೆಯಲ್ಲ ಬದಲಾಗಿ ತಮಿಳುನಾಡಿನಲ್ಲಿ ನಡೆದ ಘಟನೆ. ರಾಜಕಾರಣಿ ಶಾಸಕ, ಬಿಎ ವಿದ್ಯಾರ್ಥಿನಿ ಇವರಿಬ್ಬರ ಪ್ರೀತಿ ಪ್ರೇಮ, ಜಾತಿ ಭೇದ, ವಿದ್ಯಾರ್ಥಿನಿ ತಂದೆಯ ವಿರೋಧ ಮತ್ತು ಆತ್ಮಹತ್ಯೆ...

ಪ್ರಮುಖ ಸುದ್ದಿ

ಚೆನ್ನೈ, ಸುದ್ದಿಒನ್, (ಸೆ.26): ಗಾನನಂಧರ್ವ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕಣ್ಣೀರಿನ ವಿದಾಯದೊಂದಿಗೆ ಚೆನ್ನೈ ಬಳಿಯ ತಾಮರೈಪಕ್ಕಂ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಭೂಮಿ ಬಣ್ಣದ ಬುಗರಿ, ಆ ಶಿವನೇ ಚಾಟಿ ಕಣೋ,...

ಪ್ರಮುಖ ಸುದ್ದಿ

ಚಿತ್ರದುರ್ಗ, (ಸೆ. 25) : ಸಂಗೀತಲೋಕದ ಸ್ವರ ಸಾಮ್ರಾಟ, ಪದ್ಮವಿಭೂಷಣ ಪುರಸ್ಕøತ ಹೆಸರಾಂತ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಚಿತ್ರದುರ್ಗ ಮುರುಘರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ಸಲ್ಲಿಸಿದ್ದಾರೆ....

ಪ್ರಮುಖ ಸುದ್ದಿ

  ವಿಶೇಷ ಲೇಖನ : ಜಿ.ಎನ್. ಮೋಹನ್, ಹಿರಿಯ ಪತ್ರಕರ್ತರು, ಬೆಂಗಳೂರು ————————————————————————– ‘ಇದು ಕೇಳೋ ಪ್ರಶ್ನೆನಾ..’ ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ ‘ಎದೆ ತುಂಬಿ ಹಾಡುವೆನು’...

ಪ್ರಮುಖ ಸುದ್ದಿ

ಬೆಂಗಳೂರು, (ಸೆ.25) : ಸಂಗೀತ ಲೋಕದ ದೈತ್ಯ ಪ್ರತಿಭೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಸಂಗೀತ ಪ್ರಿಯರಿಗೆ ತೀವ್ರ ಆಘಾತವಾಗಿದೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪೂರ್ತಿ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಜೂನ್ 4,...

ಪ್ರಮುಖ ಸುದ್ದಿ

ಚೆನ್ನೈ , (ಸೆ.25):  ಗಾಂಧರ್ವ ಎಸ್ಪಿ ಬಾಲಸುಬ್ರಮಣ್ಯಂ (74) ಶುಕ್ರವಾರ ಮಧ್ಯಾನ್ಹ 1 : 04 ನಿಮಿಷಕ್ಕೆ ವಿಧಿವಶರಾದರು. ಅವರು ಗುರುವಾರ ರಾತ್ರಿಯಿಂದ ಉಸಿರಾಡಲು ತೀವ್ರ ತೊಂದರೆ ಅನುಭವಿಸಿದರು. ಮತ್ತು ಶುಕ್ರವಾರ ಮಧ್ಯಾಹ್ನ ವೆಂಟಿಲೇಟರ್‌ನಲ್ಲಿ...

ಪ್ರಮುಖ ಸುದ್ದಿ

ಚೆನ್ನೈ: ಎಸ್‌ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಾಣಿಸಿದೆ ಎಂದು ಅವರ ಪುತ್ರ ಎಸ್‌ಪಿ ಚರಣ್ ತಿಳಿಸಿದ್ದಾರೆ.ಈ ನಿಟ್ಟಿನಲ್ಲಿ ಅವರು ಶನಿವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಂದೆಯವರ ಆರೋಗ್ಯ ಸ್ಥಿರವಾಗಿದೆ....