Connect with us

Hi, what are you looking for?

ಆರೋಗ್ಯ

ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುವ ಸಿಂಪಲ್ ಮನೆಮದ್ದು !

ಇಂದಿನ ದಿನಗಳಲ್ಲಿ ಮನರಂಜನೆಗಾಗಿ ಟಿವಿ, ಗೇಮ್ಸ್, ಮೊಬೈಲ್ ಮೊದಲಾದ ಹತ್ತು ಹಲವು ಸಾಧನಗಳನ್ನ ಸದಾ ನೋಡುತ್ತಾ ಇರುತ್ತೇವೆ. ಇದು ನಮ್ಮ ಕಣ್ಣುಗಳನ್ನು ಹೆಚ್ಚಾಗಿ ಒತ್ತಡಕ್ಕೆ ಒಳಪಡಿಸುತ್ತಿದ್ದೇವೆ. ಹೆಚ್ಚಿನ ಒತ್ತಡದ ಕಾರಣ ಕಣ್ಣಿನ ದೃಷ್ಟಿನರವೂ ಹೆಚ್ಚು ಕೆಲಸ ನಿರ್ವಹಿಸಬೇಕಾಗಿ ಬರುತ್ತದೆ. ಪರಿಣಾಮವಾಗಿ ದೃಷ್ಟಿ ಕುಂದುತ್ತದೆ ಹಾಗೂ ಹಲವಾರು ದೃಷ್ಟಿ ದೋಷ ಗಳು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ.

ಆದ್ದರಿಂದ ನಮ್ಮ ದೇಹದ ಅತಿ ಮುಖ್ಯ ಹಾಗೂ ಸೂಕ್ಷ್ಮ ಅಂಗವಾದ ಕಣ್ಣುಗಳನ್ನು ಅತಿಹೆಚ್ಚಿನ ಕಾಳಜಿಯಿಂದ ರಕ್ಷಿಸಿಕೊಳ್ಳುವುದೇ ಜಾಣತನದ ಮಾರ್ಗವಾಗಿದ್ದು ನಿಸರ್ಗ ನೀಡಿರುವ ಕೆಲವು ಪೋಷಕಾಂಶಗಳ ನೆರವಿನಿಂದ ಕಣ್ಣುಗಳು ಕಳೆಕೊಂಡಿದ್ದ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿದೆ. ಬನ್ನಿ, ಇಂದು ಈ ನೈಸರ್ಗಿಕ ವಿಧಾನವನ್ನು ಅನುಸರಿಸಿ ಕಣ್ಣುಗಳ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸೋಣ:

ಅಗತ್ಯವಿರುವ ಸಾಮಾಗ್ರಿಗಳು

* ನಾರಗಸೆಯೆಣ್ಣೆ (Linseed oil) – ಎರಡು ದೊಡ್ಡ ಚಮಚ

* ಜೇನು: ಒಂದು ದೊಡ್ಡ ಚಮಚ

* ಲಿಂಬೆ ರಸ: ಒಂದು ದೊಡ್ಡ ಚಮಚ

ಇಲ್ಲಿದೆ ನೋಡಿ ಕಣ್ಣಿನ ಸುರಕ್ಷತೆಗಾಗಿ ಟಾಪ್ ಸಲಹೆಗಳು

ನಿಸರ್ಗದ ಈ ಸಾಮಾಗ್ರಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸಬಹುದು. ಆದರೆ ಇದರೊಂದಿಗೇ ಕಣ್ಣುಗಳಿಗೆ ದಣಿವಾಗುವ ಯಾವುದೇ ಕ್ರಿಯೆಯನ್ನು ಹೆಚ್ಚಿಸಬಾರದು. ವಿಶೇಷವಾಗಿ ಕಂಪ್ಯೂಟರ್ ಮತ್ತು ಮೊಬೈಲ್ ವೀಕ್ಷಣೆಯನ್ನು ನಿಮ್ಮ ಅತ್ಯಗತ್ಯ ಕ್ರಿಯೆಗಳಿಗೆ ಮಾತ್ರ ಮೀಸಲಿಟ್ಟು ಸಾಧ್ಯವಾದಷ್ಟು ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಆಗ ಮಾತ್ರ ಕಣ್ಣುಗಳು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.

ಈ ಮೂರೂ ಸಾಮಾಗ್ರಿಗಳಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ದೃಷ್ಟಿನರವನ್ನು ಉತ್ತಮಗೊಳಿಸಿ ಇದರ ಕ್ಷಮತೆ ಹೆಚ್ಚಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ಸುಲಭವಾಗಿ ಘಾಸಿಗೊಳ್ಳದಿರುವಂತೆ ರಕ್ಷಿಸುತ್ತದೆ.

ಆಲಿವ್ ಆಯಿಲ್

ಅಲ್ಲದೇ ಕಣ್ಣುಗಳ ಒಳಭಾಗ ಹೆಚ್ಚು ತೇವಗೊಂಡಿರಲು ನೆರವಾಗುವ ಮೂಲಕ ಕಣ್ಣುಗಳು ಒಣಗದಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಕಣ್ಣುಗಳ ಉರಿಯಿಂದ ರಕ್ಷಣೆ ಪಡೆಯಬಹುದು.

ತಯಾರಿಕಾ ವಿಧಾನ:

* ಒಂದು ಕಪ್ ನಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

* ಈ ಮಿಶ್ರಣವನ್ನು ವಾರದಲ್ಲಿ ಮೂರು ದಿನ ಬೆಳಗ್ಗಿನ ಉಪಾಹಾರದ ಬಳಿಕ ಟೀ ಬದಲಿಗೆ ಸೇವಿಸಿ.

* ನಿಯಮಿತವಾಗಿ ಈ ಮಿಶ್ರಣವನ್ನು ಸೇವಿಸುತ್ತಾ ಬರುವ ಮೂಲಕ ಕಣ್ಣುಗಳ ಆರೋಗ್ಯದಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.

ಎಚ್ಚರಿಕೆ: ಈ ಮಿಶ್ರಣ ಕೇವಲ ಕುಡಿಯಲಿಕ್ಕೇ ಹೊರತು ಸರ್ವಥಾ ಕಣ್ಣುಗಳಿಗೆ ಹಚ್ಚಲಿಕ್ಕೆ ಅಲ್ಲ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸಿಎಂ ಯಡಿಯೂರಪ್ಪ ಅವರು 500 ಕೋಟಿ ಅನುದಾನವನ್ನು ನೀಡಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ...

ಪ್ರಮುಖ ಸುದ್ದಿ

ಬೆಂಗಳೂರು : ನಟಿ ಸಾನ್ವಿ ಶ್ರೀವಾತ್ಸವ್ ಸದ್ಯ ಮಾಲ್ಡೀವ್ಸ್ ಬೀಚ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಿಂದ ಕೊಂಚ ಬಿಡುವ ಪಡೆದಿರುವ ನಟಿ, ಪ್ರವಾಸದಲ್ಲಿದ್ದು, ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ...

ಪ್ರಮುಖ ಸುದ್ದಿ

ಬೆಂಗಳೂರು : ಕರೊನಾ ಲಾಕ್‍ಡೌನ್ ನಂತರ ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆಯಿಂದ ಬಿಡುಗಡೆಯಾದ ‘ಆಕ್ಟ್-1978’ ಚಿತ್ರವು ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಗ್ ಬಜೆಟ್ ಚಿತ್ರಗಳ ರೀಲಿಸ್‍ಗೂ ಮುನ್ನ ‘ಆಕ್ಟ್-1978’ ತೆರೆ...

ಪ್ರಮುಖ ಸುದ್ದಿ

ಬೆಂಗಳೂರು :ರಾಜ್ಯದಲ್ಲಿ ಡಿಸೆಂಬರ್‍ವರೆಗೂ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಸಿಎಂ ಹೇಳಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶೀಘ್ರವೇ ಎಸ್.ಎಸ್ ಎಲ್ ಸಿ ಮತ್ತು ದ್ವಿತೀಯ...

ಪ್ರಮುಖ ಸುದ್ದಿ

ಬೆಂಗಳೂರು: ಇಂದು ಶಾಲೆಗಳನ್ನು ಪ್ರಾರಂಭ ಮಾಡುವ ವಿಚಾರಕ್ಕೆ ಅಭಿಪ್ರಾಯ ಪಡೆಯಲು ಸಭೆ ಕರೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಡಿಸೆಂಬರ್ ಅಂತ್ಯದವರೆಗೂ ಶಾಲೆಗಳು ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ...

ಪ್ರಮುಖ ಸುದ್ದಿ

ಬೆಂಗಳೂರು :ತಜ್ಞರ ಅಭಿಪ್ರಾಯದಂತೆ ಡಿಸೆಂಬರ್‌ವರೆಗೆ ಶಾಲೆ ಪ್ರಾರಂಭಿಸುವುದಿಲ್ಲ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದರು. ಶಾಲಾ-ಕಾಲೇಜು ಪ್ರಾರಂಭ ಕುರಿತು ಸಿಎಂ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು. ಸಭೆ...

ಪ್ರಮುಖ ಸುದ್ದಿ

ಬೆಂಗಳೂರು : ಸಂಕಷ್ಟದಲ್ಲಿರುವ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.26ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ಹೇಳಿದ್ದಾರೆ. ದಾಬಸ್ಪೇಟೆಯಲ್ಲಿ ಆಯೋಜಿಸಿದ್ದ ಸಿಐಟಿಯು ಬಹಿರಂಗ ಅಧಿವೇಶನದಲ್ಲಿ...

ಪ್ರಮುಖ ಸುದ್ದಿ

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಇಳಿಮುಖ ಕಾಣುತ್ತಿದ್ದರೂ ಸಹ ಶಾಲೆ ಪ್ರಾರಂಭಿಸಲು ಡಿಸೆಂಬರ್ ಸಹ ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು...

ಪ್ರಮುಖ ಸುದ್ದಿ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ. ದೆಹಲಿ ಮೂಲದ ಹದಿಮೂರು ಅಧಿಕಾರಿಗಳ ತಂಡ ದಾಳಿ...

error: Content is protected !!