Connect with us

Hi, what are you looking for?

ಪ್ರಮುಖ ಸುದ್ದಿ

ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ನಿರ್ಮಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲ್ : ಹೆಚ್.ಹನುಮಂತಪ್ಪ

ಚಿತ್ರದುರ್ಗ: ಸಣ್ಣ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ಪ್ರಜಾಪ್ರಭುತ್ವದಡಿಯಲ್ಲಿ ತಂದವರು ಭಾರತದ ಮೊದಲ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಜನ್ಮದಿನದಲ್ಲಿ ಭಾಗವಹಿಸಿ ಮಾತನಾಡಿದರು.

ಬ್ರಿಟೀಷ್ ಸರ್ಕಾರ ನಮ್ಮ ದೇಶದ ವಿರುದ್ದ ರೈತರನ್ನು ಜನಸಾಮಾನ್ಯರನ್ನು ಎತ್ತಿಕಟ್ಟಿದ ಸಂದರ್ಭದಲ್ಲಿ ಗಾಂಧಿಗೆ ಹೆಗಲಿಗೆ ಹೆಗಲು ಕೊಟ್ಟು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರ ಇತಿಹಾಸವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವ ಪೀಳಿಗೆಯವರು ಮೊದಲು ತಿಳಿದುಕೊಂಡಾಗ ಮಾತು, ಶಕ್ತಿ, ಧೈರ್ಯ, ಹೋರಾಟದ ಕಿಚ್ಚು ಮೂಡುತ್ತದೆ. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟಿದ್ದು, ಕಾಂಗ್ರೆಸ್ ಪಕ್ಷ ಎನ್ನುವುದನ್ನು ಬಿಜೆಪಿ.ಯವರು ಮೊದಲು ತಿಳಿದುಕೊಳ್ಳಬೇಕು. ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಇಂದಿರಾಗಾಂಧಿರವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ.ಗಿಲ್ಲ ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ಜಾತಿ, ಧರ್ಮವನ್ನು ಕ್ರೂಢೀರಿಕರಿಸಿಕೊಂಡು ಹೋಗಿದ್ದರ ಪರಿಣಾಮವಾಗಿ ಭಾರತ ಜಾತ್ಯಾತೀತ ದೇಶವಾಗಿ ಉಳಿದುಕೊಂಡಿದೆ. ಗೃಹಮಂತ್ರಿಯಾಗಿದ್ದಾಗ ದೇಶದ ಹಿತದೃಷ್ಟಿಯಿಂದ ಮೇಘಾಲಯದಲ್ಲಿ ಎಂಬತ್ತು ರಾಜರ ಸಭೆ ಕರೆದಿದ್ದ ಪಟೇಲ್‍ರವರಿಗೆ ಗಾಂಧಿ ಸರ್ದಾರ್ ಎಂಬ ಬಿರುದು ನೀಡಿದರು. ಪಕ್ಷ ಹಾಗೂ ದೇಶದ ಜನರನ್ನು ಸಂಘಟಿಸುವ ಶಕ್ತಿ ಅವರಲ್ಲಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಹುಟ್ಟಿಕೊಂಡಿದ್ದಲ್ಲ.

ಇಂದಿರಾಗಾಂಧಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಇವರುಗಳ ಕೊಡುಗೆ ದೇಶಕ್ಕೆ ಅಪಾರ ಎನ್ನುವುದನ್ನು ಮೊದಲು ನೀವುಗಳು ತಿಳಿದುಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಇದ್ದಿದ್ದರೆ ದೇಶದ ಪ್ರಧಾನಿಯಾಗಿರುತ್ತಿದ್ದರು ಎಂದು ಈಗಿನ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್‍ರನ್ನು ಮೋದಿ ನೋಡಿಯೇ ಇಲ್ಲ. ದುರದೃಷ್ಟವಶಾತ್ ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು ದೇಶದ ಪ್ರಧಾನಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ದೇಶಕ್ಕಾಗಿಯೇ ಪ್ರಾಣ ತ್ಯಾಗ ಮಾಡಿದ ಇಂದಿರಾಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಇವರುಗಳ ಇತಿಹಾಸವನ್ನು ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಕೋಮುವಾದಿ ಬಿಜೆಪಿ.ಯವರು ಯಾವ ಹೋರಾಟದಲ್ಲಿಯೂ ಭಾಗಿಯಾಗಿಲ್ಲ. ಆದ್ದರಿಂದ ದೇಶಕ್ಕೆ ಅವರ ಕೊಡುಗೆ ಏನು ಇಲ್ಲ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಅಜ್ಜಪ್ಪ, ನಜ್ಮತಾಜ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ಸೈಯದ್ ಖುದ್ದೂಸ್, ನಾಗರಾಜ್ ಜಾನ್ಹವಿ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ : ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ವ್ಯಕ್ತಿಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಲೇಶ (32) ಆರೋಗ್ಯ ಸರಿಯಿಲ್ಲದ್ದಕ್ಕೆ ನೊಂದು ಸೋಮವಾರ ಮನೆಯಲ್ಲೇ ನೇಣು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು. ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ...

ಪ್ರಮುಖ ಸುದ್ದಿ

ಚಿತ್ರದುರ್ಗ : ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‍ನಲ್ಲಿ ಪಿಡಿಒ ಹಾಗೂ ಇಂಜಿನಿಯರ್‍ಗಳ ಭೇಟಿ ದಿನಾಂಕ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅನುದಾನದಡಿ ಹಿರೇಗುಂಟನೂರು ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಕುರುಬರಹಳ್ಳಿಯಲ್ಲಿ ಹೈಮಾಸ್ ವಿದ್ಯುತ್ ದೀಪ ಅಳವಡಿಕೆಗೆ ಭೂಮಿಪೂಜೆ, ಹುಲ್ಲೂರು...

ಪ್ರಮುಖ ಸುದ್ದಿ

ಚಿತ್ರದುರ್ಗ :ನ.1 ರಿಂದ ವಿದ್ಯುತ್ ದರ ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೇವಲ ಐದು ತಿಂಗಳಲ್ಲಿ 24 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 4ನೇ ತ್ರೈಮಾಸಿಕ...

ಪ್ರಮುಖ ಸುದ್ದಿ

ಚಿತ್ರದುರ್ಗ :ಭವ್ಯ ಪರಂಪರೆಯ ಕನ್ನಡವನ್ನು ಬೆಳೆಸುವ ಪ್ರಯತ್ನಕ್ಕೆ ಕೈ ಹಾಕದೇ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಅಧೋಗತಿಗೆ ನೂಕುತ್ತಿದ್ದೇವೆ ಎಂದು ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ರೇಣುಕಾ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು....

ಪ್ರಮುಖ ಸುದ್ದಿ

ಚಿತ್ರದುರ್ಗ :ಯಾವ ರಾಷ್ಟ್ರದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಇರುತ್ತದೆಯೋ ಅಲ್ಲಿ ಅಭಿವೃದ್ಧಿ ಇರುತ್ತದೆ ಎಂದು ಪ್ರಾಂಶುಪಾಲ ಡಾ.ಪಿ.ಶಿವಲಿಂಗಪ್ಪ ಹೇಳಿದರು. ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದಲ್ಲಿ...

error: Content is protected !!