Connect with us

Hi, what are you looking for?

ಆರೋಗ್ಯ

ಮಧುಮೇಹಕ್ಕೆ ಮನೆಯಲ್ಲೇ ಸಿಗುವ ಇದನ್ನ ತಿನ್ನಿ..!

ಒಬ್ಬ ಮಧುಮೇಹಿ, ಅದರಲ್ಲೂ ಮುಖ್ಯವಾಗಿ ಇನ್ಸುಲಿನ್ ತೆಗೆದುಕೊಳ್ಳುವ ಟೈಪ್ ೧ ಮಧುಮೇಹಿ, ರಾತ್ರಿ ಒಂಬತ್ತು ಗಂಟೆಗೆ ಇನ್ಸುಲಿನ್ ತೆಗೆದುಕೊಂಡು ಮಲಗಿರುತ್ತಾನೆ ಎಂದಿಟ್ಟುಕೊಳ್ಳಿ. ರಾತ್ರಿ ಹನ್ನೊಂದು ಗಂಟೆಗೆ ಅವನ ರಕ್ತದ ಗ್ಲೂಕೋಸ್ ತುಂಬಾ ಕೆಳಗೆ ಇಳಿದಿದೆ. ಆಗ ಅವನ ಅಡ್ರಿನಲ್ ಕಾರ್ಯಪ್ರವೃತ್ತವಾಗುತ್ತದೆ. ಕಿಡ್ನಿಯೂ ಚುರುಕಾಗುತ್ತದೆ. ಗ್ಲೂಕೋಸ್ ತುಂಬಾ ಕಡಿಮೆಯಾಗಿ ವ್ಯಕ್ತಿ ನಿದ್ದೆಯಲ್ಲೇ ಸಾಯಬಾರದೆಂದು ಎಪಿನೆಫ್ರೈನ್, ನಾರೆಪಿನೆಫ್ರೈನ್ ಮತ್ತು ಕಾರ್ಟಿಸಾಲ್ ಎಂಬ ಗ್ಲೂಕೋಸ್ ಮಟ್ಟವನ್ನು ಏರಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.

ರಾತ್ರಿ ಆ ವ್ಯಕ್ತಿ ಮಲಗುವಾಗ ಗ್ಲೂಕೋಸ್ ಚೆಕ್ ಮಾಡಿದಾಗ ಅದು ೩೮೦ ಇತ್ತು ಅಂದರೆ ಅದು ಅದೇ ರಾತ್ರಿ ೯೦ ಕ್ಕೆ ಇಳಿದು, ಮತ್ತೆ ಕಾರ್ಟಿಸಾಲ್ ಇತ್ಯಾದಿ ಹಾರ್ಮೋನುಗಳ ದೆಸೆಯಿಂದ ಮತ್ತೆ ಏರಿ ೩೪೦ ಕ್ಕೆ ಬಂದಿರುತ್ತದೆ. ಇಂತಹ ಏರಿಳಿತಗಳು ಮಧುಮೇಹದಲ್ಲಿ ಸಹಜ. ಅಂದರೆ ರಾತ್ರಿಯ ನಿದ್ದೆಯಲ್ಲಿ ಆವನ ಗ್ಲೂಕೋಸ್ ಮಟ್ಟ ಇಳಿದು ಮತ್ತೆ ಏರಿದೆ. ಹೀಗೆ ಏರಿದ ಗ್ಲೂಕೋಸ್ ಕಣಗಳು ಆ ರಾತ್ರಿಯ ನಿದ್ದೆಯಲ್ಲೇ ರಕ್ತದಲ್ಲಿರುವ ಕೆಂಪು ರಕ್ತ ಕಣ, ಬಿಳಿಯ ರಕ್ತ ಕಣ, ಆಲ್ಬುಮಿನ್, ಮೇಧೋಪ್ರರೂಪಿಗಳು, ಹಿಮೋಗ್ಲೋಬಿನ್-ಹೀಗೆ ಅನೇಕ ಪ್ರೋಟೀನುಗಳಿಗೆ ಅಂಟಿಕೊಳ್ಳುತ್ತವೆ. ಇಂತಹ ಅಂಟಿಕೆಯಿಂದ ರಕ್ತನಾಳಗಳನ್ನು ಹಾಳುಗೆಡಹುವ ಕ್ರಮಾಂಶ ನಿರ್ಮಾಣವಾಗುತ್ತದೆ.

ಇದಕ್ಕೆಲ್ಲಾ ಮೂಲ ಕಾರಣ ಗ್ಲೂಕೋಸಿನ ಕಣಗಳು ರಕ್ತದಲ್ಲಿರುವ ಪ್ರೋಟೀನುಗಳಿಗೆ ಅಂಟಿಕೊಳ್ಳುವುದೇ ಆಗಿದೆ. ನಾವು ರಕ್ತದಲ್ಲಿರುವ ಪ್ರೋಟೀನುಗಳಿಗೆ ಎಣ್ಣೆ ಮೆತ್ತಿದರೆ ಗ್ಲೂಕೋಸಿನ ಕಣಗಳು ಅವುಗಳಿಗೆ ಅಂಟಿಕೊಳ್ಳಲಾರವು.

ಅಂತಹ ಒಂದು ಪ್ರತಿ-ಅಂಟು ಅಥವಾ ಅಂಟು-ವಿರೋಧಿ ಅಂಶವೇ ಆಹಾರದಲ್ಲಿರುವ ಪಾಲಿಫೆನಾಲ್.

ಇದು ಈರುಳ್ಳಿಯಲ್ಲಿ ಧಾರಾಳವಾಗಿ ಇದೆ.

ಈರುಳ್ಳಿಯ ಈ ಪಾಲಿಫೆನಾಲ್ ಗ್ಲೂಕೋಸಿನ ಕಣಗಳು ಎಲ್ಲಿಯೂ ಅಂಟದಂತೆ ನೋಡಿಕೊಳ್ಳುತ್ತವೆ. ಇದರಿಂದ ಅಂತ್ಯೋತ್ಪನ್ನಗಳ ನಿರ್ಮಾಣ ಕಡಿಮೆಯಾಗುತ್ತವೆ ಅಥವಾ ನಿಂತುಹೋಗುತ್ತದೆ. ತಾಜಾ ಹಸಿ ಕೆಂಪು ಈರುಳ್ಳಿಯ ಸೇವನೆ ಪರಿಣಾಮಕಾರಿ. ಬೇಯಿಸದಂತೆ, ಸುಡದಂತೆ ಈರುಳ್ಳಿಯನ್ನು ತಿಂದರೆ ಒಳ್ಳೆಯದು.

Click to comment

Leave a Reply

Your email address will not be published. Required fields are marked *

You May Also Like

ಆರೋಗ್ಯ

ಅಂಟುವಾಳ ಕಾಯಿ ಎಲ್ಲರಿಗೂ ಚಿರಪರಿಚಿತ. ಪ್ರಾಚೀನ ಕಾಲದಿಂದಲೂ ಬಟ್ಟೆ ತೊಳೆಯಲು ಹಾಗೂ ಬೆಳ್ಳಿ ಆಭರಣಗಳನ್ನು ತೊಳೆಯಲು ಈ ಕಾಯಿಯನ್ನು ಬಳಸುತ್ತಿದ್ದಾರೆ. ಇದಲ್ಲದೇ ಸೀಗೆ ಕಾಯಿ, ನೆಲ್ಲಿಕಾಯಿ ಕಾಯಿ ಸೇರಿಸಿ ಶಾಂಪೂ ತರಹ ಬಳಸುತ್ತಾರೆ....

ಆರೋಗ್ಯ

ಹಳ್ಳಿಗಳಲ್ಲಿ ಗೇರು ಹಣ್ಣು ಸಿಗುವುದು ಹೆಚ್ಚಾಗಿ ಸಿಗುತ್ತದೆ. ಮಕ್ಕಳಿಂದ ಹಿಡಿದು ಎಲ್ಲರೂ ಇದನ್ನ ಇಷ್ಟ ಪಡುತ್ತಾರೆ. ಹಳ್ಳಿಗರು ಇದನ್ನು ತಿನ್ನೋದು ಕಾಮನ್. ಇದರಿಂದ ಎಷ್ಟೆಲ್ಲಾ ಉಪಯೋಗ ಇವೆ ಎಂಬುವುದು ಮಾತ್ರ ಎಲ್ಲರಿಗೂ ಗೊತ್ತಿರುವುದಿಲ್ಲ....

ಆರೋಗ್ಯ

ಜೇನು ತುಪ್ಪವನ್ನ ಈಗಾಗಲೇ ಸಾಕಷ್ಟು ಜನ ದಿನನಿತ್ಯದ ಪದಾರ್ಥವಾಗಿ ಬಳಸುತ್ತಾರೆ. ದಪ್ಪ ಇರುವವರು ಸಣ್ಣ ಆಗೋದಕ್ಲೆ ಇದನ್ನ ಹೆಚ್ಚು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲ ಇನ್ನು ಹಲವು ಗುಣಗಳನ್ನ ಇದು ಹೊಂದಿದೆ. * ಜೇನು...

ಆರೋಗ್ಯ

  ಗರ್ಭಕೋಶದಲ್ಲಿನ ಸ್ನಾಯುಗಳ ಸೆಳೆತದಿಂದಾಗಿ ಮುಟ್ಟಿನ ವೇಳೆ ಹುಡುಗಿಯರಿಗೆ ನೋವು ಉಂಟಾಗುತ್ತದೆ. ಈ ಸ್ನಾಯುಗಳು ಹತ್ತಿರದ ರಕ್ತನಾಳಗಳಿಗೆ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸುವುದರಿಂದ ನೋವು ಕಾಣಿಸಿಕೊಳ್ಳುವುದು. ಸ್ನಾಯು ಸೆಳೆತದ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು....

ಆರೋಗ್ಯ

ಮನೆಯ ಹಿತ್ತಲಿನಲ್ಲಿದ್ದ ಗಿಡವನ್ನೇ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ. ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು...

ಆರೋಗ್ಯ

ವಿಟಾಮಿನ್ ಡಿ ಆರೋಗ್ಯಕ್ಕೆ ಮುಖ್ಯವಾಗಿದೆ, ಆದರೆ ಅದರ ಅತಿಯಾದ ಸೇವನೆ ಶರೀರದಲ್ಲಿ ನಂಜಿಗೆ ಕಾರಣವಾಗಬಲ್ಲದು. ಈ ಕೋವಿಡ್ ಕಾಲದಲ್ಲಿ ಜನರು ತಮ್ಮ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಿಕ್ಕಸಿಕ್ಕ ವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಇವುಗಳಲ್ಲಿ...

ಆರೋಗ್ಯ

ಕಹಿಬೇವನ್ನು ನಾವೆಲ್ಲಾ ತಿನ್ನೋದು ವರ್ಷಕ್ಕೆ ಒಮ್ಮೆ. ಯುಗಾದಿ ಹಬ್ಬದಲ್ಲಿ ಸಿಹಿ ಕಹಿ ಎರಡು ಇರಲೆಂದು, ಅದು ಒಂದೋ ಎರಡೋ ಎಲೆಗಳನ್ನ ಮಾತ್ರ. ಆದ್ರೆ ಈ ಬೇವನ್ನ ಪ್ರತಿ ನಿತ್ಯ ತಿನ್ನೋದರ ಹಿಂದೆ ಹಲವು...

ಆರೋಗ್ಯ

ಎಲ್ಲರು ಎಲ್ಲಾ ತರಕಾರಿಯನ್ನು ಇಷ್ಟಪಟ್ಟು ತಿನ್ನಲ್ಲ. ಅದರಲ್ಲಿ ಬೆಂಡೆ ಕೂಡ ಒಂದು. ಅದರಲ್ಲಿನ ಲೋಳೆ ಲೋಳೆಯಿಂದ ಅನೇಕರು ಅದನ್ನ ದ್ವೇಷಿಸಿದ್ರೆ ಇನ್ನು ಹಲವರು ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದ್ರೆ ಈಗ ನಾವೇಳುವ ಬೆಂಡೆ ಉಪಯೋಗ...

ಆರೋಗ್ಯ

  ದಿನವಿಡಿ ಉಲ್ಲಾಸದಿಂದ ಇರುವುದು ಅಷ್ಟು ಸುಲಭ ಅಲ್ಲ. ಕೆಲಸದ ಒತ್ತಡಗಳು, ಸಿಗುವ ನೂರಾರು ರೀತಿಯ ಜನ, ಎದುರಾಗುವ ಕಿರಿಕಿರಿಗಳು ನಮ್ಮ ಮೂಡನ್ನ ಬದಲಾಯಿಸಿಬಿಟ್ಟಿರುತ್ತವೆ. ಕೆಲವೊಮ್ಮೆ ಬೆಳಗ್ಗೆ ಏಳುವಾಗಲೇ ಏನೇನೊ ತಲೆಗೆ ಬಂದು...

error: Content is protected !!